ಶಿವಮೊಗ್ಗ ಜಿಲ್ಲೆಯಲ್ಲಿ 4ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ

0 31

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ 4ನೇ ದಿನಕ್ಕೆ ಕಾಲಿಟ್ಟಿದ್ದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮುಂದುವರೆಯಲಿದೆ.

ಹುಂಚದಕಟ್ಟೆಯಿಂದ ಇಂದು ಪಂಚರತ್ನ ರಥಯಾತ್ರೆ ಆರಂಭವಾಗಲಿದ್ದು ಮಾಜಿ ಸಿಎಂ ಹೆಚ್ ಡಿಕೆ ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ಪರ ಮತಯಾಚನೆ ಮಾಡಲಿದ್ದಾರೆ.

ನಿಟ್ಟೂರು ನಾರಾಯಣ ಗುರು ಮಠದಲ್ಲಿ ಜನರೊಂದಿಗೆ ಸಂವಾದ ನಡೆಸಲಿರುವ ಹೆಚ್ ಡಿಕೆ, ನಂತರ ಹೊಂಬುಜ ಪದ್ಮಾವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲ್ಲಿದ್ದಾರೆ.

ಆರಗ ಗ್ರಾಮದಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಸಿ ನಂತರ ತೀರ್ಥಹಳ್ಳಿಯಲ್ಲಿ ಸಭೆ ನಡೆಸಿ ಭೀಮನಕಟ್ಟೆ ಮಠ ಮಾರ್ಗವಾಗಿ ಮೇಗರವಳಿ ಗ್ರಾಮದ ಬಳಿ ಎಲೆಚುಕ್ಕಿ ರೋಗದ ತೋಟ ವೀಕ್ಷಣೆ ಮಾಡಿ ರೈತರ ಸಂಕಷ್ಟ ಹೆಚ್ಡಿಕೆ ಆಲಿಸಲಿದ್ದಾರೆ.

ಹೆಗ್ಗೋಡು ಬಳಿಕ ಕಮ್ಮರಡಿ ಗ್ರಾಮದಲ್ಲಿ ಸಭೆ ನಂತರ ಕ್ಷೇತ್ರ ಹಲವು ಗ್ರಾಮಗಳಲ್ಲಿ ಸಂಚರಿಸಲಿದ್ದು ಮಧ್ಯಾಹ್ನ ಶೃಂಗೇರಿಯತ್ತ ಪಂಚರತ್ನ ರಥಯಾತ್ರೆ ಪ್ರಯಾಣ ಬೆಳೆಯಲಿದೆ.

ಶೃಂಗೇರಿ ಕ್ಷೇತ್ರದ ಬೇಗೂರು ಕೈಮರ, ಹೊಳೆಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಿ ನಂತರ ಶೃಂಗೇರಿ ಮಠಕ್ಕೆ ಹೆಚ್ಡಿಕೆ ಭೇಟಿ ನೀಡಲಿದ್ದಾರೆ‌. ಅಂತಿಮವಾಗಿ ಶೃಂಗೇರಿ ವೈಕುಂಠಪುರದ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ‌.

Leave A Reply

Your email address will not be published.

error: Content is protected !!