ಅರಸಾಳು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ; ಸಂಸದರ ಕಾರ್ಯಕ್ಕೆ ಪ್ರಶಂಸೆ

0 4,090

ರಿಪ್ಪನ್‌ಪೇಟೆ: ಮಲೆನಾಡಿನ ಜನತೆ ಬಹು ವರ್ಷದ ಬೇಡಿಕೆಯನ್ನಾದರಿಸಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸ್ಪಂದಿಸುವ ಮೂಲಕ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆ ಮಾಡಿರುವುದರಿಂದ ಪ್ರಯಾಣಿಕರ ಹೆಚ್ಚಳದೊಂದಿಗೆ ಸಂಸದರ ಸ್ಪಂದನೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇಂದು ಅರಸಾಳು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬಳಿ ನಮ್ಮ ಪ್ರತಿನಿಧಿ ಮಾತನಾಡಿಸಿದಾಗ ಆವರು, ಮೈಸೂರು – ಬೆಂಗಳೂರು – ಶಿವಮೊಗ್ಗ – ಅನಂದಪುರ – ಸಾಗರ – ತಾಳಗುಪ್ಪ ಹೀಗೆ ತಾಳಗುಪ್ಪದಿಂದ ಸಾಗರ ಆನಂದಪುರ ಶಿವಮೊಗ್ಗ ಬೆಂಗಳೂರು ಮೈಸೂರು ಹೋಗುವ ಪ್ರಯಾಣಿಕರು ಪಡಬಾರದ ಕಷ್ಟ ಅನುಭವಿಸುವಂತಾಗಿತ್ತು. ಆದರೆ, ನಮ್ಮ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರರವರು ಪ್ರಯಾಣಿಕರ ಅಹವಾಲಿಗೆ ಸ್ಪಂದಿಸಿ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣವನ್ನು ಅಭಿವೃದ್ದಿ ಪಡಿಸುವುದರೊಂದಿಗೆ ಮಲೆನಾಡಿನ ರೈತಾಪಿ ವರ್ಗದವರ ಮತ್ತು ನಿರುದ್ಯೋಗಿ ಯುವಕ, ಯುವತಿಯರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ರಾಜಧಾನಿಗೆ ಕಡಿಮೆ ಖರ್ಚಿನಲ್ಲಿ ಹೋಗಿ ಬರಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ನಿಲುಗಡೆ ಮಾಡುವ ಕಾರ್ಯವನ್ನು ಪ್ರಶಂಸಿದರು.

ಅರಸಾಳು ರೈಲ್ವೆ ನಿಲ್ದಾಣದಿಂದ ಕೆಲವೇ ಅಂತರದಲ್ಲಿ ರಾಜ್ಯ ಹೆದ್ದಾರಿಯ ಸಂಪರ್ಕದ ಶಿವಮೊಗ್ಗ, ಬೈಂದೂರು, ಭಟ್ಕಳ, ಕುಂದಾಪುರ, ಉಡುಪಿ, ಮಾಸ್ತಿಕಟ್ಟೆ, ಚಕ್ರಾನಗರ, ಬಿದನೂರು ನಗರ, ಕೊಡಚಾದ್ರಿ ಕೊಲ್ಲೂರು,ಸಿಗಂದೂರು ಹೀಗೆ ಅತಿಶಯ ಮಹಾಕ್ಷೇತ್ರ ಹೊಂಬುಜ ಜೈನ ಮಠ, ಕೋಣಂದೂರು, ತೀರ್ಥಹಳ್ಳಿ, ಆರಗ, ಗರ್ತಿಕೆರೆ, ಹೆದ್ದಾರಿಪುರ ಮೂಗುಡ್ತಿ, ಕೋಡೂರು, ಹೊಸನಗರ ಸಂಪೆಕಟ್ಟೆ, ಕವಲೇದುರ್ಗಕೋಟೆ ಹೊಸಂಗಡಿ ಸಿದ್ದಾಪುರ, ಕಮಲಶಿಲೆ, ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನ ಹೀಗೆ ಇತಿಹಾಸ ಪ್ರಸಿದ್ದ ರಾಮಚಂದ್ರಪುರ ಮಠ, ರಿಪ್ಪನ್‌ಪೇಟೆ, ಬೆಳ್ಳೂರು, ಕೆಂಚನಾಲ, ಬಾಳೂರು, ಹರತಾಳು, ಚಿಕ್ಕಜೇನಿ, ಮಾರುತಿಪುರ, ಹುಂಚ, ಸೊನಲೆ ಗ್ರಾಮ ಪಂಚಾಯ್ತಿಗಳ ಮಜರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೃದಯ ಭಾಗವಾಗಿರುವ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲು ನಿಲುಗಡೆಯಿಂದಾಗಿ ತುಂಬಾ ಅನುಕೂಲವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಹರತಾಳು ಹಾಲಪ್ಪ, ಐಟಿಬಿಟಿ ಇಂಜಿನಿಯರ್ ಉದ್ಯೋಗಿ ರಮೇಶ ಹೈದರಾಬಾದ್, ಸೂರ್ಯಕಲಾ ಬೆಂಗಳೂರು, ನಿವೃತ್ತ ಆರ್.ಎಫ್.ಓ,ತಿಮ್ಮಪ್ಪ ಇನ್ನಿತರ ಹಲವು ಪ್ರಯಾಣಿಕರು ತಮ್ಮ ಹರ್ಷ ವ್ಯಕ್ತಪಡಿಸಿ ಸಂಸದರನ್ನು ಅಭಿನಂದಿಸುವುದರೊಂದಿಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಹ ನಮಗೆ ತುಂಬ ಅನುಕೂಲವಾಗಿದೆ ಎಂದರು.

ಇದರೊಂದಿಗೆ ಮುಂಜಾನೆ ಹೋಗುವ ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ರೈಲು ಅರಸಾಳಿನಲ್ಲಿ ನಿಲುಗಡೆ ಮಾಡಿದರೆ ಇದರಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೂ ಇನ್ನೂ ಹೆಚ್ಚಿನ ಪ್ರಯೋಜನವಾಗುವುದೆಂದರು.

Leave A Reply

Your email address will not be published.

error: Content is protected !!