Hosanagara | ನಮ್ಮೂರ ನಾಡಹಬ್ಬ ದಸರಾಕ್ಕೆ ಮಹಿಳೆಯರಿಗೆ ಏರ್ಪಡಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಚಾಲನೆ

0 483

ಹೊಸನಗರ: ಪಟ್ಟಣದಲ್ಲಿಂದು ‘ನಮ್ಮೂರ ನಾಡ ಹಬ್ಬ’ ದಸರಾಕ್ಕೆ ತಾಲೂಕು ದಸರಾ ಆಚರಣೆ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಸರಾ ಆಚರಣೆ ಸಮಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಮಹಿಳೆಯರಿಗಾಗಿ ಏರ್ಪಡಿಸಿದ ವಿವಿಧ ಆಟೋಟ ಸ್ಪರ್ಧೆಗಳನ್ನು ಚಾಲನೆಗೊಳಿಸುವ ಮೂಲಕ ಉದ್ಘಾಟಿಸಿದರು.

ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ಓಟದ ಸ್ಪರ್ಧೆ, ಚಿತ್ರಕಲೆ, ಸಂಗೀತ ಕುರ್ಚಿ, ಸಾಂಪ್ರದಾಯಿಕ ಉಡುಪು, ವೇಗದ ನಡಿಗೆ, ಲೆಮನ್ ಅಂಡ್ ಸ್ಪೂನ್, ನಿಧಾನ ಸೈಕಲ್ ಸ್ಪರ್ಧೆ, ಮಡಿಕೆ ಒಡೆಯುವುದು, ವಿವಿಧ ರೀತಿಯ ಜಡೆ ಹೆಣಿಗೆ, ಹೂಬತ್ತಿ ರಚನೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯ ಬಜಾಜ್ ಗುರುರಾಜ್, ಆಟೋಟ ಸ್ಪರ್ಧೆಗಳ ಗೌರವ ಅಧ್ಯಕ್ಷೆ ರಾಧಿಕಾ ರತ್ನಾಕರ ಶೆಟ್ಟಿ, ಅಶ್ವಿನಿ ಪಂಡಿತ್, ಪಟ್ಟಣ ಪಂಚಾಯಿತಿ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!