ಕಾಗೆಮರಡು ಶಾಲೆ ಶಿಕ್ಷಕಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ

0 123

ಹೊಸನಗರ : ತಾಲೂಕಿನ ಕೋಡೂರು ಗ್ರಾ.ಪಂ ವ್ಯಾಪ್ತಿಯ ಕಾಗೆಮರಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಟಿ.ನೀಲಾವತಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.


ನೀಲಾವತಿ ಅವರು 22 ವರ್ಷಗಳ ಸೇವೆ ಸಲ್ಲಿಸಿದ್ದು, ಮಕ್ಕಳಲ್ಲಿ ಆಟದ ಜೊತೆಗೆ ಪಾಠವನ್ನೂ ಕೂಡ ಸಮರ್ಥವಾಗಿ ಬೋಧಿಸುತ್ತಾ ಬಂದಿದ್ದಾರೆ. ಎನ್‌ಜಿಒ ಹಾಗೂ ದಾನಿಗಳಿಂದ ತಮ್ಮ ಶಾಲೆಗೆ ಬೇಕಾದ ಪೀಠೋಪಕರಣ ಮುಂತಾದವುಗಳನ್ನು ಕೊಡಿಸಿದ್ದಾರೆ.

ಮಕ್ಕಳಲ್ಲಿ ಆರೋಗ್ಯ ಬಗ್ಗೆ ಅರಿವು ಮೂಡಿಸಿದ್ದಾರೆ.
ಶಾಲೆ ಬಿಟ್ಟ ಅನೇಕ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿದ್ದಾರೆ. ಇವರ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಇಂದು ಕುವೆಂಪು ರಂಗಮಂದಿರದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರ

ಶಿವಮೊಗ್ಗ: ಕಲ್ಲಹಳ್ಳಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್, ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರವೂ ಸಾಕಷ್ಟಿದೆ. ರಾಷ್ಟçಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅವರು ಮಹಾನ್ ಗುರುಗಳಾಗಿದ್ದರು. ಪ್ರತಿಯೊಬ್ಬರನ್ನೂ ಸಮಾನತೆಯಿಂದ ನೋಡುತ್ತಿದ್ದರು. ಶಿಕ್ಷಕರಿಗೆ ಅವರು ಸ್ಫೂರ್ತಿದಾಯಕ ಎಂದರು.


ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಸರ್ಕಾರ, ಸಮಾಜ ಕೂಡ ಶಿಕ್ಷಕರ ನೆರವಿಗೆ ಬರಬೇಕು. ಮಕ್ಕಳನ್ನು ರಾಷ್ಟçಭಕ್ತರನ್ನಾಗಿ ಮಾಡುವ ಹೊಣೆ ಶಿಕ್ಷಕರದ್ದೇ ಆಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾದುದು. ಆತ ತನ್ನ ಕರ್ತವ್ಯ ನಿಭಾಯಿಸದಿದ್ದರೆ ನಾಡಿನ ಕಟ್ಟಡವೇ ಉರುಳುತ್ತದೆ ಎಂದರು.


ಈ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಕ್ಕಳು ಶಿಕ್ಷಕರಿಗೆ ಪ್ರೀತಿಯ ಉಡುಗೊರೆ ಕೊಡುವ ಮೂಲಕ ಕೃತಜ್ಞತೆ ಅರ್ಪಿಸಿದರು.

Leave A Reply

Your email address will not be published.

error: Content is protected !!