ಗೋವುಗಳನ್ನು ರಾಷ್ಟ್ರೀಯ ಪ್ರಾಣಿಗಳನ್ನಾಗಿ ಘೋಷಿಸುವಂತೆ ಮುತಾಲಿಕ್ ಆಗ್ರಹ

0 223

ರಿಪ್ಪನ್‌ಪೇಟೆ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ರಿಪ್ಪನ್‌ಪೇಟೆಗೆ ದೀಢಿರ್ ಭೇಟಿ ನೀಡಿದರು.

ಇಂದು ಹೊಸನಗರದ ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿ ವಾಪಾಸ್ ತೆರಳುವ ಮಾರ್ಗದ ರಿಪ್ಪನ್‌ಪೇಟೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮದು 10 ಅಂಶಗಳ ಬೇಡಿಕೆ ಇದ್ದು ಅದನ್ನು ಆಯ್ಕೆಯಾಗುವ ಸಂಸದರು ಸಂಪುಟದಲ್ಲಿ ಚರ್ಚಿಸಿ ಈಡೇರಿಸುವ ಭರವಸೆ ನೀಡಿದಲ್ಲಿ ಬೆಂಬಲಿಸುವುದಾಗಿ ಘೋಷಿಸಿದ ಅವರು, ಗೋ ಮಾತೆಯನ್ನು ರಾಷ್ಟ್ರಿಯ ಪ್ರಾಣಿಗಳನ್ನಾಗಿ ಘೋಷಿಸಬೇಕು. ವಕ್ಫ್ ಬೋರ್ಡ್ ಅನ್ನುವುದೇ ಒಂದು ಲ್ಯಾಂಡ್ ಮಾಫಿಯಾ ಅದರ ಸಮಗ್ರ ತನಿಖೆ ನಡೆಸುವುದು. ಹಿಂದು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಹಿಂದು ಕಾರ್ಯಕರ್ತರ ಮೇಲೆ ಹಾಕಲಾದ ಕೇಸ್ ವಾಪಾಸ್ಸು ಪಡೆಯುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸದಿದ್ದರೆ ಮೋದಿ ಹೆಸರಿನಲ್ಲಿ ಮತ ಪಡೆದು ಸಂಸದರಾದವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದೆಂಬ ಎಚ್ಚರಿಕೆ ನೀಡಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಸ್ಪರ್ಧೆ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಈಗ ಏನು ಹೇಳುವುದಿಲ್ಲ ಎಂದು ಸೂಚ್ಯವಾಗಿ ಉತ್ತರಿಸಿದರು.

ಈ ಸಂದರ್ಭದಲ್ಲಿ ಎಂ.ಬಿ.ಮಂಜುನಾಥ, ಕುಷನ್ ದೇವರಾಜ್, ಸುರೇಶ್‌ಸಿಂಗ್, ಕಗ್ಗಲಿ ನಿಂಗಪ್ಪ, ಅಶೋಕ ಹಾಲುಗುಡ್ಡೆ, ನರಸಿಂಹ,ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!