ಜೀವ ವೈವಿದ್ಯತೆ ಕುರಿತು ಸ್ಪಷ್ಟ ಮಾಹಿತ ದಾಖಲಾಗಬೇಕಿದೆ : ಪರಿಸರಾಸ್ತಕ ಹನಿಯ ರವಿ

0 220

ಹೊಸನಗರ : ನಮ್ಮ ಸುತ್ತಲಿನ ಅಳಿವಿನಂಚಿನಲ್ಲಿರುವ ಹಲವು ವಿವಿಧ ಬಗೆಯ ಜೀವ ವೈವಿಧ್ಯತೆಗಳನ್ನು ಗುರುತಿಸಿ ಉಳಿಸಿ, ಬೆಳೆಸಿ ದಾಖಲಿಸುವ ಕರ‍್ಯ ಪ್ರಾಮಾಣಿಕವಾಗಿ ನಮ್ಮಿಂದ ಆಗಬೇಕಿದೆ ಎಂದು ಪರಿಸರಾಸಕ್ತ ಹನಿಯ ರವಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಜೀವ ವೈವಿದ್ಯ ಮಂಡಳಿ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜೀವ ವೈವಿಧ್ಯ ಸಮಿತಿ ಸಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಬೆಳೆಗೆ ಬಳಸುವ ಕ್ರಿಮಿ ಹಾಗೂ ಕೀಟನಾಶಕಗಳಿಂದ ಜೀವ ವೈವಿಧ್ಯ ನಾಶಕ್ಕೆ ಕಾರಣವಾಗಿದೆ. ಲಾಭದ ಆಸೆಗಾಗಿ ಮಾನವ ಉಣ್ಣುವ ಆಹಾರವೇ ಇಂದು ವಿಷಯುಕ್ತವಾಗಿದೆ. ಹಣ್ಣು ಹಂಪಲು, ತರಕಾರಿ ಸಹಿತ ನಾವು ಬೆಳೆಯುವ ಬೆಳೆಗಳಿಗೆ ಸಂಪಡಿಸುವ ಕೀಟನಾಶಕ ದ್ರಾವಣಗಳಿಂದ ಮನುಕುಲವಿಂದು ಅನೇಕ ಘನಘೋರ ಖಾಯಿಲೆಗಳಿಂದ ಬಳಲುತ್ತಿದ್ದಾನೆ. ಆರೋಗ್ಯ ಸಂರಕ್ಷಣೆಗಾಗಿ ಹೆಚ್ಚಿನ ಹಣ ವ್ಯಯ ಮಾಡುವ ಸ್ಥಿತಿ ತಲುಪುತ್ತಿರುವುದು ದುರದೃಷ್ಠಕರ ಸಂಗತಿವಾಗಿದ್ದು, ಅಜ್ಞಾನ, ಹಣದ ಮೇಲಿನ ವ್ಯಾಮೋಹವೇ ಈ ಎಲ್ಲಾ ದುರಂತಗಳಿಗೆ ಕಾರಣವಾಗಿದೆ. ಜೀವ ವೈವಿಧ್ಯತೆ ಕುರಿತು ಗಂಭೀರ ಚಿಂತನೆ ನಡೆಸಲು ಇದು ಸುಕಾಲ ಆಗಿದೆ. ನಮ್ಮ ಸುತ್ತಲಿನ ಜೀವ ವೈವಿದ್ಯತೆ ಕುರಿತು ಅರಿವು ಮೂಡಿಸಿ, ಅವುಗಳನ್ನು ಬೆಳೆಸಿ ಉಳಿಸಬೇಕಿದೆ. ಈ ಹಿನ್ನೆಲೆಯಲ್ಲಿ 2000 ಇಸವಿ ನಂತರದಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಜೀವ ವೈವಿದ್ಯ ಮಂಡಳಿ ಕಾರ್ಯೋನ್ಮುಖಗೊಂಡಿದೆ.

ಹೊಸನಗರ ತಾಲೂಕು ಜೀವ ವೈವಿದ್ಯ ಸಮ್ಮೇಳನದಲ್ಲಿ ತಾಲೂಕಿನ ವಿವಿಧ ಜೀವನ ವೈವಿತ್ಯತೆ ಕುರಿತಂತೆ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು.

ತಾಲೂಕು ಮಟ್ಟದಲ್ಲಿ ಈ ಕುರಿತು ಸಮಿತಿ ರಚನೆಗೊಂಡಿದ್ದು, ಗ್ರಾಮ ಮಟ್ಟದ ನಿರ್ವಹಣಾ ಸಮಿತಿಗಳಿಂದ ತಮ್ಮ ಗ್ರಾಮ ವ್ಯಾಪ್ತಿಯ ಸಂಪತ್ತನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಅದು ನಮ್ಮ ಹಕ್ಕು ಹಾಗೂ ಜವಾಬ್ದಾರಿ ಕೂಡ ಆಗಿದೆ ಎಂದರು. ಮರಳು, ಕಲ್ಲು, ಜೇನು, ಕಾಡು ಉತ್ಪನ್ನಗಳು ಸೇರಿದಂತೆ ಹಲವು ಜೀವ ವೈವಿಧ್ಯತೆ ಕುರಿತು ಸ್ಪಷ್ಟ ಮಾಹಿತಿ ಸಂಗ್ರಹ ದಾಖಲಾಗಬೇಕಿದೆ ಎಂದರು.

ತಾಲೂಕು ಪಂಚಾಯತಿ ಇಓ ನರೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ, ಪರಿಸರ ಪ್ರೇಮಿ ಸಂಪೆಕಟ್ಟೆ ಕುಮಾರ್, ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಪಿಡಿಒ ಪವನ್, ತಾ.ಪಂ. ವ್ಯವಸ್ಥಾಪಕ ಶಿವಕುಮಾರ್, ಸಹಾಯಕ ನಿರ್ದೇಶಕ ರಾಜೇಂದ್ರ ಕುಮಾರ್, ಪಾರಂಪರಿಕ ನಾಡಿವೈದ್ಯ ಸುಪ್ರಕಾಶ್ ಉಪಸ್ಥಿತರಿದ್ದರು.

ತಾಲೂಕಿನ ಜೀವ ವೈವಿದ್ಯ ಕುರಿತಂತೆ ಹೊಸ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಹಲವಾರು ವರ್ಷಗಳಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ನಾಟಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಲವರನ್ನು ವೇದಿಕೆಯಲ್ಲಿ ಸನ್ಮಾನಿಸಿಲಾಯಿತು.

ತಾಲೂಕು ಜೀವ ವೈವಿದ್ಯ ಸಮ್ಮೇಳನದಲ್ಲಿ ವಿವಿಧ ಪಾರಂಪರಿಕ ನಾಡಿ ವೈದ್ಯರನ್ನು ಸನ್ಮಾನಿಸಲಾಯಿತು.

ಕಲೆವು ಪಾರಂಪರಿಕ ನಾಟಿ ವೈದ್ಯರು ತಮ್ಮ ವೃತ್ತಿ ಜೀವನಾನುಭವ ಹಂಚಿಕೊಂಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಓಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!