ನನ್ನ ಮಗಳಿಗೆ ಶಾಲೆಯಲ್ಲಿ ಒತ್ತಾಯ ಪೂರ್ವಕವಾಗಿ ಮೊಟ್ಟೆ ತಿನ್ನಿಸಲಾಗಿದೆ ಇದು ನಮ್ಮ ಧಾರ್ಮಿಕ ಆಚರಣೆಗೆ ಧಕ್ಕೆಯಾಗಿದೆ – ಶಿಕ್ಷಕನ ಮೇಲೆ ಕ್ರಮಕ್ಕೆ ಒತ್ತಾಯ

0 9,088

ರಿಪ್ಪನ್‌ಪೇಟೆ : ಅಮೃತ ಕೆಪಿಎಸ್ (KPS) ಶಾಲೆಯಲ್ಲಿ (School) ಶಿಕ್ಷಕರಿಂದ (Teacher’s) ತನ್ನ ಮಗಳಿಗೆ ಒತ್ತಾಯ ಪೂರ್ವಕವಾಗಿ ಮೊಟ್ಟೆ (Egg) ತಿನ್ನಿಸಲಾಗಿದ್ದು ಇವರ ವಿರುದ್ಧ ಸೂಕ್ತ ಕ್ರಮಕ್ಕೆ ವಿದ್ಯಾರ್ಥಿನಿ ಪೋಷಕ ಶ್ರೀಕಾಂತ್ ಒತ್ತಾಯಿಸಿರುವ ಘಟನೆ ವರದಿಯಾಗಿದೆ.

ನನ್ನ ಮಗಳು ಕೆಪಿಎಸ್ ಅಮೃತ (ಪ್ರಾಥಮಿಕ) ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದು, ಅವಳಿಗೆ ಆ ಶಾಲೆಯ ಶಿಕ್ಷಕರು ಒತ್ತಾಯ ಪೂರ್ವಕವಾಗಿ ಮೊಟ್ಟೆಯನ್ನು ತಿನ್ನಿಸಲಾಗಿದೆ. ಈ ಮೊದಲೇ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಮೊಟ್ಟೆ ತಿನ್ನದಿರುವ ಬಗ್ಗೆ ತಿಳಿಸಿದ್ದರೂ ಕೂಡ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಾದ ಪುಟ್ಟಸ್ವಾಮಿರವರು ನನ್ನ ಮಗಳಿಗೆ ಒತ್ತಾಯ ಮಾಡಿ ಮೊಟ್ಟೆಯನ್ನು ತಿನ್ನಿಸಿರುತ್ತಾರೆ. ಇದರಿಂದಾಗಿ ನಮ್ಮ ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗಿದೆ.

ಮಗಳ ಆಹಾರ ಪದ್ದತಿಯ ಆಹಾರ ತಿಂದಿರುವುದರಿಂದ ಆಕೆಯ ಆರೋಗ್ಯದಲ್ಲೂ ಏರುಪೇರಾಗಿದ್ದು, ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮವಾಗಿರುವ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ವಿದ್ಯಾರ್ಥಿನಿಯ ತಂದೆ ಶಾಸಕರು ಮತ್ತು ಜಿಲ್ಲಾ ಉಪ ನಿರ್ದೇಶಕರು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!