ಕಲೆ, ಸಾಹಿತ್ಯ ವಿದ್ಯಾರ್ಥಿಗಳ ಬದುಕಿನ ಅಂಗವಾಗಲಿ ; ಶಾಸಕ ಬೇಳೂರು ಗೋಪಾಲಕೃಷ್ಣ

0 671

ಹೊಸನಗರ: ಜಾನಪದ ಕಲೆ, ಇತಿಹಾಸ, ಸಾಹಿತ್ಯ ಸೇರಿದಂತೆ ನಮ್ಮ ಪೂರ್ವಿಕರ ಬಳುವಳಿಯನ್ನು ಉಳಿಸಿ, ಬೆಳೆಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗ ಬೇಕಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜ್ಯ ಜಾನಪದ ಪರಿಷತ್ತು ಹಾಗೂ ಸ್ಥಳೀಯ ಘಟಕಗಳು ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ‘ನಮ್ಮೂರು ಹೊಸನಗರ’ ಪುಸ್ತಕ ಪರಿಚಯ ಹಾಗೂ ‘ಹೊಸನಗರ ಜಾನಪದ ಒಳನೋಟ’ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.

ಮೊಬೈಲ್, ಟಿವಿಗಳಂತ ಆಧುನಿಕ ಸಾಧನ ಹಾಗು ಅವುಗಳ ತಂತ್ರಜ್ಞಾನ ವಿದ್ಯಾರ್ಥಿ ದಿಸೆಯಲ್ಲೆ ದುರ್ಬಳಕೆ ಆಗುತ್ತಿದೆ ಎಂಬ ಆತಂಕ ವ್ಯಕ್ತ ಪಡಿಸಿದ ಶಾಸಕ ಬೇಳೂರು, ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಲು ಸಹಕಾರಿ ಆಗುತ್ತವೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಮೂಲ ಸೌಕರ್ಯಗಳ ಅಭಿವೃದ್ದಿಗೆ ತಾವು ಸದಾ ಸಿದ್ದರಿದ್ದು, ಶೀಘ್ರದಲ್ಲೇ ವಿದ್ಯಾರ್ಥಿ ಶೈಕ್ಷಣಿಕ ಪ್ರಗತಿಯ ಅನುಕೂಲಕ್ಕಾಗಿ ತಾಲೂಕಿನ ಹಲವು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದರು.

ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜ್ಯ ಜಾನಪದ ಪರಿಷತ್ತು ಹಾಗೂ ಸ್ಥಳೀಯ ಘಟಕಗಳು ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ‘ನಮ್ಮೂರು ಹೊಸನಗರ’ ಪುಸ್ತಕ ಪರಿಚಯ ಹಾಗೂ ‘ಹೊಸನಗರ ಜಾನಪದ ಒಳನೋಟ’ ವಿಚಾರ ಸಂಕಿರಣ ಕಾರ್ಯಕ್ರಮದ ಸುಸಂದರ್ಭದಲ್ಲಿ ಪಂಚಾಯತ್‌ರಾಜ್ ಪರಿಷತ್ತು ನೀಡುವ ಡಾ. ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ, ‘ಸೋಲಿಲ್ಲದ ಸರದಾರ’ ಪ್ರಶಸ್ತಿ ಪುರಸ್ಕೃತ ಕಲಗೋಡು ರತ್ನಾಕರ್ ಅವರನ್ನು ಪರಿಷತ್ತು ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆರಂಭಗೊಂಡಾಗ ನನ್ನಿಂದ  ರಚಿತಗೊಂಡ ಸಂಗ್ರಹವಾದ ಮೊದಲ ಕೃತಿಯೇ ‘ನಮ್ಮೂರು ಹೊಸನಗರ’. ಯಾವುದೇ ವ್ಯಕ್ತಿಯ ಯಶಸ್ಸಿಗೆ ವಿವೇಕ, ಜ್ಞಾನ ಹಾಗೂ ಧೈರ್ಯವೇ ಮೂಲಮಂತ್ರವಾಗಿದೆ. ಇವುಗಳ ಅಳವಡಿಕೆಯಿಂದ ಮಾತ್ರವೇ ವ್ಯಕ್ತಿ ಯಶಸ್ಸಿನ ತುಟ್ಟತುದಿ ಏರಲು ಸಾಧ್ಯವೆಂದರು.

ಇದೇ ಸಂದರ್ಭದಲ್ಲಿ ಪಂಚಾಯತ್‌ರಾಜ್ ಪರಿಷತ್ತು ನೀಡುವ ಡಾ. ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ, ‘ಸೋಲಿಲ್ಲದ ಸರದಾರ’ ಪ್ರಶಸ್ತಿ ಪುರಸ್ಕೃತ ಕಲಗೋಡು ರತ್ನಾಕರ್ ಅವರನ್ನು ಪರಿಷತ್ತು ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯ್ತು.  ಮುಖ್ಯ ಅತಿಥಿಗಳಾಗಿ ತಾಲೂಕು ಕಜಾಪ ಅಧ್ಯಕ್ಷ ಎಂ.ಎಂ. ಪರಮೇಶ್, ತಾಲೂಕ ಕಸಾಪ ಅಧ್ಯಕ್ಷ ತ.ಮ. ನರಸಿಂಹ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಾಲಗದ್ದೆ ಉಮೇಶ್, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮತ್, ತಾಲೂಕು ಕಸಾಪ ಪ್ರಧಾನ ಕಾಯದರ್ಶಿ ವಿಜೇಂದ್ರ ಶೇಟ್ ಭಾಗವಹಿಸಿದ್ದರು.

ನಂತರ. ನಡೆದ ವಿಚಾರ ಸಂಕಿರಣದಲ್ಲಿ ‘ಹೊಸನಗರ ಜಾನಪದ ಮಹತ್ವ’ ವಿಷಯ ಕುರಿತಂತೆ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಡಾ. ರತ್ನಾಕರ್ ಸಿ ಕುನುಗೋಡು, ‘ಹೊಸನಗರ ಐತಿಹಾಸಿಕ ತಾಣಗಳು’ ವಿಷಯ ಕುರಿತು ಶಿವಮೊಗ್ಗ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಜಿ. ವೆಂಕಟೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಾಹಿತಿ ನಾಗರಕೊಡಿಗೆ ಗಣೇಶ್ ಮೂರ್ತಿ, ಕೊಡಚಾದ್ರಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ. ಶ್ರೀಪತಿ ಹಳಗುಂದ ಉಪಸ್ಥಿತರಿದ್ದರು. 4ನೇ ಜಾನಪದ ಸಮ್ಮೇಳನಾಧ್ಯಕ್ಷ ಬಟ್ಟೆಮಲ್ಲಪ್ಪ ಆಂಜನೇಯ ಜೋಗಿ ಉಪಸ್ಥಿತರಿದ್ದ ಹಲವು ಕಿಂದರಜೋಗಿ ಪದ ಹಾಡಿದರು.. ಈ ವೇಳೆ ‘ನಮ್ಮೂರು ಹೊಸನಗರ’ ಪುಸಕ್ತ ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಏರ್ಪಡಿಲಾಗಿತ್ತು.

Leave A Reply

Your email address will not be published.

error: Content is protected !!