ಪಡಿತರ ದಾಸ್ತಾನು ಅವ್ಯವಹಾರ, ನ್ಯಾಯಬೆಲೆ ಅಂಗಡಿ ಲೈಸೆನ್ಸ್ ಅಮಾನತು

0 462

ರಿಪ್ಪನ್‌ಪೇಟೆ: ಇಲ್ಲಿನ ಗ್ರಾಮ ಪಂಚಾಯ್ತಿ ಹಿಂಭಾಗದ ವಿ.ಎಸ್.ಎಸ್.ಎನ್.ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ದಾಸ್ತಾನುವಿನಲ್ಲಿ ಸಾಕಷ್ಟು ಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ ಪ್ರಾಧಿಕಾರ ನಂ 03/2017-18 ನ್ನು ವಿಚಾರಣೆಗೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಪಡಿಸಿ ಜಿಲ್ಲಾ ಆಹಾರ ಉಪನಿರ್ದೇಶಕ
ಅವಿನ್ ಆರ್. ಆದೇಶಿಸಿದ್ದಾರೆ.

ಇದೇ ಡಿಸೆಂಬರ್ 16 ರಂದು ಜಿಲ್ಲಾ ಆಹಾರ ಉಪನಿರ್ದೇಶಕ ಅವಿನ್ ಆರ್.ಇಲ್ಲಿನ ನ್ಯಾಯಬೆಲೆ ಅಂಗಡಿಗೆ ಖುದ್ದಾಗಿ ಭೇಟಿ ನೀಡಿ ನ್ಯಾಯಬೆಲೆ ಅಂಗಡಿಯ ದಾಸ್ತಾನಿನ ಪರಿಶೀಲನೆ ನಡೆಸಲಾಗಿ ಭೌತಿಕ ದಾಸ್ತಾನಿಗೂ ಆನ್‌ಲೈನ್ ದಾಸ್ತಾನಿಗೂ ಸಾಕಷ್ಟು ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ. ದರ ದಾಸ್ತಾನು ನಾಮಫಲಕದಲ್ಲಿ ದಾಸ್ತಾನು ವಿವರ ನಮೂದಿಸಿರುವುದಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಜಾಗೃತಿ ಸಮಿತಿ ಸದಸ್ಯರ ಪಟ್ಟಿ
ಪ್ರದರ್ಶಿಸಿರುವುದಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ತನಿಖಾ ಪುಸ್ತಕ ಇಲ್ಲದೇ ಇರುವಂತಹ ನ್ಯೂನತೆಗಳು ಕಂಡುಬಂದಿರುತ್ತವೆ.

ವಿತರಣಾ ಪದ್ದತಿ (ನಿಯಂತ್ರಣಾ) ಅದೇಶ-2016ಕ್ಲಾಸ್ 4(3) ರಡಿ ಪಡೆದ ಪ್ರಾಧಿಕಾರ ಸಾಮಾನ್ಯ ಷರತ್ತು ಸಂಖ್ಯೆ 5.7.8.ಮತ್ತು 9 ಹಾಗೂ ಕ್ಲಾಸ್ 14.16 ಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬಂದಿರುವುದರಿಂದ ನಿಯಮಾನುಸಾರ ಸದರಿ ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ಅಮಾನತುಪಡಿಸಿದ್ದಾರೆ.

ನ್ಯಾಯಬೆಲೆ ಅಂಗಡಿ ಲೈಸೆನ್ಸ್ ಅಮಾನತಾಗಿರುವ ಹಿನ್ನಲೆಯಲ್ಲಿ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಸಮೀಪದ ನ್ಯಾಯಬೆಲೆ ಅಂಗಡಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿ ವರದಿ ಸಲ್ಲಿಸಲು ಹೊಸನಗರ ತಹಶೀಲ್ದಾರ್ ಇವರಿಗೆ ಸೂಚಿಸಿದೆ.

ಕಳೆದ 2019-20 ಸಾಲಿನಲ್ಲಿ ಸಹ ದೇಶವ್ಯಾಪ್ತಿ ಕೊರೊನಾ ಮಹಾಮಾರಿ ಇದ್ದಾಗ ಸಹ ಇಲ್ಲಿನ ವಿ.ಎಸ್.ಎಸ್.ಎನ್. ನ್ಯಾಯಬೆಲೆ ಅಂಗಡಿಯ ಪಡಿತರ ದಾಸ್ತಾನು ಸಾಕಷ್ಟು ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ನ್ಯಾಯಬೆಲೆ ಅಂಗಡಿಯ ಪರವಾನಿಗೆ ಅಮಾನತು ಮಾಡಲಾಗಿದ್ದನ್ನು ಸ್ಮರಿಸಬಹುದಾಗಿದೆ. ಈ ರೀತಿಯಲ್ಲಿ ನ್ಯಾಯಬೆಲೆ ಅಂಗಡಿ ಎರಡನೇ ಬಾರಿಯಲ್ಲಿ ಅಮಾನತಾಗುತ್ತಿದೆ.

Leave A Reply

Your email address will not be published.

error: Content is protected !!