ನಮ್ಮದೇ ಆದಂತಹ ಲಿಖಿತ ಸಂವಿಧಾನ ಜಾರಿಗೆ ಬಂದಂತಹ ಶ್ರೇಷ್ಠ ದಿನ ; ಬಿ.ವೈ. ವಿಜಯೇಂದ್ರ

0 185

ಶಿಕಾರಿಪುರ : ಭಾರತ ಸರ್ವ ಭಾಷೆ ಸರ್ವ ಧರ್ಮವನ್ನೊಳಗೊಂಡಂತೆ ಎಲ್ಲರನ್ನೂ ಒಪ್ಪಿಕೊಂಡು ಒಂದು ಒಕ್ಕೂಟದ ಸಂಸ್ಕೃತಿಯಲ್ಲಿ ನಮ್ಮದೇ ಆದಂತಹ ಲಿಖಿತ ಸಂವಿಧಾನವನ್ನು ಜಾರಿಗೆ ಬಂದಂತಹ ಶ್ರೇಷ್ಠ ದಿನ ಇಂದು. ಇದನ್ನು ರಾಜ್ಯ ಹಾಗೂ ದೇಶದಾದ್ಯಂತ ಬಹು ವಿಜೃಂಭಣೆಯಿಂದ ನಾವು ಆಚರಿಸುತ್ತಿದ್ದೇವೆ ಎಂದು ತಾಲ್ಲೂಕಿನ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಡೆದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಅರ್ಥಪೂರ್ಣವಾದಂತಹ ಸಂವಿಧಾನವನ್ನ ರಚಿಸಿ ಜಾರಿಗೆ ತಂದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಒಂದು ಶ್ರಮ ಅಪೂರ್ವವಾಗಿರತಕ್ಕಂತಹದ್ದು, ಭಾರತ ಸರ್ವ ಭಾಷೆ ಸರ್ವ ಧರ್ಮವನ್ನೊಳಗೊಂಡಂತೆ ಎಲ್ಲರನ್ನೂ ಒಪ್ಪಿಕೊಂಡು ಒಂದು ಒಕ್ಕೂಟದ ಸಂಸ್ಕೃತಿಯಲ್ಲಿ ನಮ್ಮದೇ ಆದಂತಹ ಲಿಖಿತ  ಸಂವಿಧಾನವನ್ನು ಜಾರಿಗೆ ತಂದಂತಹ ಶ್ರೇಷ್ಠ ದಿನವಿಂದು. ಇದನ್ನು ರಾಜ್ಯ ಹಾಗೂ ದೇಶದಾದ್ಯಂತ ಬಹು ವಿಜೃಂಭಣೆಯಿಂದ ನಾವು ಆಚರಿಸುತ್ತಿದ್ದೇವೆ ಎಂದರು.

2024 ರ ಗಣರಾಜ್ಯೋತ್ಸವದ ಘೋಷ ವಾಕ್ಯವೇನೆಂದರೆ ಭಾರತ ಪ್ರಜಾಪ್ರಭುತ್ವದ ತಾಯಿ ವಿಕಸಿತ ಭಾರತವೆಂಬುದಾಗಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಸಂಕಲ್ಪ 2047 ನೇ ಇಸವಿಗೆ ಭಾರತ ಜಗತ್ತಿನ ಅಗ್ರಗಣ್ಯ ರಾಷ್ಟ್ರಪತಿಗಳ ಸಾಲಿನಲ್ಲಿ ನಿಲ್ಲಬೇಕು. ಆರ್ಥಿಕ ಸಾಮಾಜಿಕ ಶೈಕ್ಷಣಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕಾಣುವುದರ ಮುಖೇನ ಜಗತ್ತಿನ ಎಲ್ಲಾ ರಾಷ್ಟ್ರಪತಿಗಳಲ್ಲಿ ಭಾರತ ಆತ್ಯಂತ ಎತ್ತರಕ್ಕೆ ಬೆಳಿಯಬೇಕೆಂಬುದ್ದೇ ಅವರ ಕನಸಾಗಿದೆ. ನರೇದ್ರ ಮೋದಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರಕಬೇಕು ಎಂಬ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ.

ಭಾರತದ ಕಿರೀಟವೆಂದರೆ ಕಾಶ್ಮೀರ ಈ ಕಾಶ್ಮೀರದಲ್ಲಿ ಆರ್ಟಿಕಲ್ 370 ಯಿಂದ ಗೊಂದಲದ ಗೂಡಾಗಿದ್ದ ಕಾಶ್ಮೀರ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಿರ್ದಾರದಿಂದ 370 ವಿಧೇಯಕವನ್ನ  ಕಿತ್ತು ಹಾಕುವುದರ ಮೂಲಕ ಕಾಶ್ಮೀರಕ್ಕೆ ಮುಕ್ತಿ ನೀಡಿ ಅಲ್ಲಿ ಶಾಶ್ವತ ಸ್ಥಿರತೆ ಶಾಂತಿಯನ್ನು  ನೆಲೆಸುವಂತೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ 500 ವರ್ಗಗಳ ಸುದೀರ್ಘ ಹೋರಾಟದಿಂದ ಇಂದು ಅಯ್ಯೋದ್ಯಯಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣವಾಗಿ ಎಲ್ಲರ ಸಹಬಾಳ್ವೆಯ ಸಂಕೇತವಾಗಿದೆ. 

ಭಾರತವೆಂದರೆ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ.ಎಲ್ಲಾ ಕ್ಷೇತ್ರಗಳಲ್ಲಯೂ ದಾಪುಗಾಲು ಹಾಕುತ್ತಿದೆ. ಈ ಹಿಂದೆ ಹಳ್ಳಿಯಿಂದ ದೆಹಲಿವರೆಗೂ ಭ್ರಷ್ಟಾಚಾರ ನಡೆಯುತ್ತಿದೆ‌ ಎಂದು ಹೊರ ದೇಶದವರು ಮಾತನಾಡುತ್ತಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ಕೊಡಬೇಡ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ .ಇತ್ತೀಚೆಗೆ ವಿದೇಶಿಗರು ಭಾರತವು ಭ್ರಷ್ಟಾಚಾರ ರಹಿತ ದೇಶವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಆದುನಿಕ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಯೋದರಿಗೆ ಶಕ್ತಿ ತುಂಬುವ ಕೆಲಸ ನಡೆದದೆ. ಯೋದರು ಎಷ್ಟು ಮುಖ್ಯವೋ ಹಾಗೆಯೇ ದೇಶಕ್ಕೆ ಅನ್ನ ನೀಡುವ ರೈತರು ಕೂಡ ಬಹಳ ಮುಖ್ಯವೆಂದು ರೈತರಿಗೆ ಅನೇಕ ಯೋಜನೆಗಳನ್ನು  ನೀಡಿದ್ದಾರೆ.

ಸ್ತ್ರೀ ಸಮಾನತೆಗೆ ಒತ್ತನ್ನು ನೀಡುವಂತಹ ಕೆಲಸ ನಡೆದಿದೆ ಎಂದರೆ ಅದು ತಾಲ್ಲೂಕಿನ ಅಕ್ಕಮಹಾದೇವಿಯ ಶ್ರಮವಾಗಿದೆ ಇಂತಹಾ ಮಹಾನ್ ಸಾಧ್ವಿ ಜನ್ಮ ನೀಡಿದ ಶಿಕಾರಿಪುರ ತಾಲ್ಲೂಕಿನಲ್ಲಿ ಆಧುನಿಕ ಭಗೀರಥನಂತೆ ರಾಜ್ಯದ ಮಾಜಿ ಮುಖ್ಮಮಂತ್ರಿ ಬಿ ಎಸ್ ಯಡಿಯೂರಪ್ಪರವರು  ನೀರಾವರಿ ಯೋಜನೆಗೆ ಒತ್ತನ್ನು ಕೊಡುವುದರ ಮೂಲಕ ತಾಲ್ಲೂಕನ್ನು ನೀರಾವರಿ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಪಡಿಸಿದ್ದಾರೆ. ಸಂಸದ ಬಿ ವೈ ರಾಘವೇಂದ್ರರವರ ಶ್ರಮವೂ ಕೂಡ ಇಲ್ಲಿ ಸ್ಮರಿಸಬಹುದು ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್, ದೇಶದ ಸ್ವಾತಂತ್ರ್ಯದ ನಂತರ ಆಡಳಿತ ವ್ಯವಸ್ಥೆ ಯಾವ ರೂಪದಲ್ಲಿರಬೇಕು ಎಂಬುದು ಖಚಿತವಾಗಿರಲಿಲ್ಲ ಆಗ ಡಾ ಬಿ ಆರ್ ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಕರಡನ್ನು ರಚಿಸಲಾಯಿತು. ಅಂಬೇಡ್ಕರ್ ರವರು ಸಮಾಜದ ಪ್ರತಿಯೊಬ್ಬರಿಗೂ ಸಮಾನತೆ, ಶೈಕ್ಷಣಿಕ ಆರ್ಥಿಕ ಸಾಮಾಜಿಕ ಧಾರ್ಮಿಕ ಮತ್ತು ಸ್ವಾತಂತ್ರ್ಯದ ಪೂರ್ವದ ಶೋಷಿತ ವರ್ಗಗಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ಸಂವಿಧಾನ ರಚನೆ ಮಾಡಿದರು. ಈ ಸಂವಿಧಾನವನ್ನ ರಚಿಸಿ 1949 ರಲ್ಲಿ ಸಂಸದ್ ಭವನಕ್ಕೆ ನೀಡುತ್ತಾರೆ. ಇದನ್ನು ಅಂದು ಹಿರಿಯರೆಲ್ಲರೂ ಗಮನಿಸಿ, 1950 ರ ಜನವರಿ 26 ರಂದು ಅಂಗೀಕರಿಸಲಾಗುತ್ತದೆ. ಅಂದಿನಿಂದ ಗಣರಾಜ್ಯೋತ್ಸವದ ಆಚರಣೆ ಜಾರಿಗೆ ತರಲಾಯಿತು.

ಸಂವಿಧಾನದ ಮೂಲ ಉದ್ದೇಶ ಭಾರತವನ್ನು ಗಣರಾಜ್ಯವನ್ನಾಗಿಸುವುದು, ಅದರಂತೆ ಅಂದೇ  ದೇಶ ಗಣರಾಜ್ಯವಾಗಿ ಹೊರಹೊಮ್ಮುತ್ತದೆ. ಗಣರಾಜ್ಯವೆಂದರೆ ಒಂದು ರಾಷ್ಟ್ರ ತನ್ನದೇ ಆದಂತಹ ರೀತಿ ನೀತಿ ಹಾಗೂ ಆಡಳಿತವನ್ನು ಹೊಂದುವುದು ಅಂತೆಯೆ ನಮ್ಮ ದೇಶ ಇಂದಿಗೆ 74 ವರ್ಷ ಸಂದು, 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಇದರಿಂದಾಗಿ ನಮಗೆ ಆತ್ಯಂತ ಸಂತೋಷವಾಗಿದೆ. ಸಂವಿಧಾನ ಆಶಯದಂತೆ ದೇಶದ ಏಕತೆ ಸಾರ್ವಭೌಮತೆಯನ್ನು ಕಾಪಾಡುವುದು, ಪ್ರತಿಯೊಬ್ಬ ಪ್ರಜೆಗೂ ಸಮಾನತೆ ಒದಗಿಸುವುದು ಇದರ ದೇಯ್ಯೋದ್ದೇಶವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕಿರಣ್ ಕುಮಾರ್ ಹತ್ರಿಯವರು ಶಾಸಕರಿಂದ ಪ್ರಸಕ್ತ ಸಾಲಿನಲ್ಲಿ ತಾಲ್ಲೂಕು ಮಟ್ಟದ 6 ಮತ್ತು ಜಿಲ್ಲಾ ಮಟ್ಟದಲ್ಲಿ 4 ಜನ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಭತ್ತದ ಬೆಳೆಯಲ್ಲಿ ಅತಿ ಹೆಚ್ಚು ಇಳುವರಿ ಪಡೆದ ಮಹಿಳೆ ಮತ್ತು ಪುರುಷರ ವಿಭಾಗವನ್ನಾಗಿ ವಿಂಗಡಿಸಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಪಾಲಾಕ್ಷಪ್ಪ, ರೂಪಾ ಮಂಜುನಾಥ್,  ರೇಖಾಬಾಯಿ, ರೂಪಕಲಾ, ಟಿಎಪಿಸಿಎಂಎಸ್ ಅದ್ಯಕ್ಷ ಸುಧೀರ್, ಡಿವೈಎಸ್ಪಿ ಶಿವಾನಂದ ಮದರಖಂಡಿ, ವೃತ್ತ ನಿರೀಕ್ಷಕ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಪುರಸಭಾ ಮುಖ್ಯಾಧಿಕಾರಿ ಭರತ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ರಫಿಕ್ ಖಾನ್, ಮಾಜಿ ಎಂಎಡಿಬಿ ಅದ್ಯಕ್ಷ ಕೆ ಎಸ್ ಗುರುಮೂರ್ತಿ, ಮಾಜಿ ಉಗ್ರಾಣ ನಿಗಮದ ಅದ್ಯಕ್ಷ ಹೆಚ್ ಟಿ ಬಳಿಗಾರ್, ಚನ್ನವೀರಪ್ಪ, ರುದ್ರೇಶ್, ಸಿದ್ದಲಿಂಗಪ್ಪ ಸೇರಿದಂತೆ ವಿವಿಧ ಇಲಾಖೆ ಆಡಳಿತ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕರು ಸಾರ್ವಜನಿಕರು ಹಾಜರಿದ್ದರು.

Leave A Reply

Your email address will not be published.

error: Content is protected !!