ಅರಸುರವರು ಹಾಕಿಕೊಟ್ಟ ಮೇಲ್ಪಂಕ್ತಿಯಿಂದ ರಾಜ್ಯದ ಅನೇಕ ಜನರಿಗೆ ಅನುಕೂಲವಾಗಿದೆ ; ಬಿವೈಆರ್

0 36

ಶಿಕಾರಿಪುರ: ಉಳ್ಳವರ ಭೂಮಿಯಲ್ಲಿ ಗೇಣಿದಾರನಾಗಿ ಉಳುಮೆ ಮಾಡುತ್ತಿದ್ದ ರೈತರ ಪರವಾಗಿ ನಿಂತ ಧೀಮಂತ‌ ನಾಯಕ ಮಾಜಿ ಮುಖ್ಯಮಂತ್ರಿಯಾದ ದಿವಂಗತ  ಡಿ. ದೇವರಾಜ್ ಅರಸುರವರು ಇವರು ಹಾಕಿಕೊಟ್ಟ ಮೇಲ್ಪಂಕ್ತಿಯಿಂದ ರಾಜ್ಯದ ಅನೇಕ ಜನರಿಗೆ ಅನುಕೂಲವಾಗಿದೆ ಎಂದು ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರ ರವರು ತಿಳಿಸಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ತಾಲ್ಲೂಕು ಆಡಳಿತ,‌ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ, ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ, ನಡೆದ ದಿವಂಗತ ಡಿ. ದೇವರಾಜ ಅರಸು ರವರ 108 ನೇ ಜನ್ಮದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ದಿವಂಗತ ದೇವರಾಜ ಅರಸು ರವರು 1972 ರಿಂದ 77 ರವರೆಗೆ ಮತ್ತು 1978 ರಿಂದ 80 ರವರೆಗೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಇವರ ಅವಧಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿದ್ದ ಶ್ರೀಮಂತರು ಬಡವರಿಗೆ ಗೇಣಿರೂಪದಲ್ಲಿ ಭೂಮಿ ಉಳುಮೆ ಮಾಡುತ್ತಿದ್ದ ರೈತರ‌ಪರವಾಗಿ ನಿಂತು ಉಳುವವನೇ ಭೂಮಿ‌ ಒಡೆಯ ಪದ್ಧತಿಯನ್ನು ಜಾರಿಗೆ ತರುವುದರ ಮೂಲಕ ಭೂ ಸುಧಾರಣೆಯನ್ನು ಜಾರಿಗೆ ತಂದರು. ಇದರಿಂದಾಗಿ ರಾಜ್ಯದಲ್ಲಿ ನಿಜವಾದ ಅನೇಕ ರೈತರಿಗೆ ಜಮೀನು ಸಿಕ್ಕಂತಾಗಿತ್ತು. ಇದು ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರಿಗೆ  ಪ್ರೇರಣೆಯಾಗಿ ಅವರೂ ಕೂಡ ಗೇಣಿದಾರರ ಪರವಾಗಿ ನಿಂತು ಹೋರಾಟ ನಡಸಿದರು. ಎಂದರು.

ಇಂದಿನ ದುಡಿಯುವ ಕೈಗಳಿಗೆ ಉದ್ಯೋಗ ಎಂಬ ಎನ್ ಆರ್ ಐ ಜಿ ಯೋಜನೆಯಂತೆಯೇ ಅವರು ಮುಖ್ಯಮಂತ್ರಿಯಾಗಿದ್ದಾಗ ಕೂಲಿಗಾಗಿ ಕಾಳು ಎಂಬ ಯೋಜನೆಯನ್ನು ಜಾರಿಗೆ ತಂದು ದಿನಕ್ಕೆ ಒಬ್ಬ ರೈತರಿಗೆ ಐದು ರೂಪಾಯಿ ಹಣವನ್ನು ಕಡ್ಡಾಯವಾಗಿ ಕೊಡಬೇಕು ಎಂದು ಆದೇಶಿಸಿ, ಅನೇಕ ಬಡ ಕುಟುಂಬಗಳಿಗೆ ನೆರವಾದರು. ದೇವರಾಜ ಅರಸು ರವರು‌ ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿ ಧಾರವಾಡಕ್ಕೆ ಕಾರ್ಯಕ್ರಮವೊಂದಕ್ಕೆ ಭಾಗವಹಸಲು ಹೋದಾಗ ಅಲ್ಲಿನ ಒಬ್ಬ ವೈದ್ಯಾಧಿಕಾರಿಯು  ಒಬ್ಬ ಬಡವನ ಬಳಿ ಹತ್ತು ರೂಪಾಯಿ ಹಣ ಲಂಚ ಪಡೆದ ವಿಚಾರ ತಿಳಿದ ಅವರು, ಆ ಕೂಡಲೇ ಆ ಸ್ಥಳದಲ್ಲೇ ವೈದ್ಯರನ್ನು ಅಮಾನತು ಮಾಡಿಸಿದ್ದರು. ಭ್ರಷ್ಟಾಚಾರವು ಅಂದಿನಿಂದಲೇ ನಡೆಯುತ್ತಿತ್ತು ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ ಎಂದರು.

ಇಂದಿನ ಎಲೆಕ್ಟ್ರಾನಿಕ್ ಸಿಟಿಯಾಗಿರುವ ಬೆಂಗಳೂರಿನಲ್ಲಿ 390 ಎಕರೆ ಜಮೀನನ್ನು ಈಗಿನ ಅಂತರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳು, ಗ್ಲೋಬೊ ಕಂಪನಿಗಳನ್ನು ತೆರೆಯುವ ದೂರ ದೃಷ್ಟಿಯಿಂದ ಭೂಮಿಯನ್ನು ಕಾಯ್ದಿರಿಸಿದ್ದ ಮಹಾನ್ ವ್ಯಕ್ತಿಯಾಗಿದ್ದ ಅವರು ನಮಗೆಲ್ಲರಿಗೂ ಅವರ ಆದರ್ಶಗಳು ಮಾರ್ಗದರ್ಶನವಾಗಬೇಕು. ಕಾರ್ಯಕ್ರಮದ ಸ್ವಾಗತ ನೆರವೇರಿ‌ಸಿ ಕೊಟ್ಟ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಂಸದರನ್ನು ಆಧುನಿಕ ದೇವರಾಜ ಅರಸರು ಎಂದು ಸ್ವಾಗತಿಸಿದ್ದರ ಪ್ರತಿಯಾಗಿ, ರಾಜಕಾರಣದಲ್ಲಿ ದೇವರಾಜ ಅರಸುರವರ ಕಾಲಿನ ದೂಳಿಗೂ ನಾವು  ಸಮಾನರಲ್ಲ  ಇಂತಹಾ ಮಹಾತ್ಮರ ಚಿಂತನೆಯು ಅಜರಾಮರವಾಗಿದೆ  ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸರ್ವೋತ್ತಮ ಪ್ರಶಸ್ತಿ ಪುರಸ್ಕೃತರ ಹಾಗೂ ಖ್ಯಾತ‌ ಉಪನ್ಯಾಸಕ, ಸಾಧನಾ ಅಕಾಡಮಿ ಸದಸ್ಯರಾದ  ಗುರುದೇವ ಬಳುಂಡಗಿಯವರು ದೇವರಾಜ ಅರಸುರವರ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ  ಮಲ್ಲೇಶ್ ಬಿ ಪೂಜಾರ್, ಮಾಜಿ ಕಾಡಾ ಅದ್ಯಕ್ಷ  ನಗರದ ಮಹಾದೇವಪ್ಪ, ಮಾಜಿ ವಕ್ಪ್ ಬೋರ್ಡ್ ನಿರ್ದೇಶಕ ಹಬಿಬುಲ್ಲ, ಮಾಜಿ ಯೋಧ ಬಸವರಾಜ, ತಾಲ್ಲೂಕು ನೌಕರರ ಸಂಘದ ಅದ್ಯಕ್ಷ ಮಧುಸೂಧನ್ ಇನ್ನಿತರರು ಇದ್ದರು.

ವೇದಿಕೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ  ವಿದ್ಯಾರ್ಥಿಗಳಿಗೆ, ವಸತಿ ನಿಲಯದಲ್ಲಿ ಉತ್ತಮ ಅಡುಗೆ‌ ಮಾಡಿ ವಿದ್ಯಾರ್ಥಿಗಳಿಗೆ ಉಣಬಡಿಸಿದ ಅಡುಗೆ ಸಿಬ್ಬಂದಿಗಳಿಗೆ‌ ಗೌರವಿಸಿ ಸನ್ಮಾನಿಸಲಾಯಿತು.

Leave A Reply

Your email address will not be published.

error: Content is protected !!