ಹೊಸನಗರ ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ಪುನರಾರಂಭ | ಅಡ್ಡಾ-ದಿಡ್ಡಿ ವಾಹನ ನಿಲ್ಲಿಸಿದರೆ ದಂಡ ; ಪಿಎಸ್ಐ ಖಡಕ್ ಎಚ್ಚರಿಕೆ

0 2,921

ಹೊಸನಗರ: ಸುಮಾರು 12 ವರ್ಷಗಳ ಹಿಂದೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಒಳಗೆ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಪೊಲೀಸ್ ಚೌಕಿ ನಿರ್ಮಿಸಲಾಗಿತ್ತು ಉದ್ಘಾಟನಾ ಸಂದರ್ಭದಲ್ಲಿ ಒಂದೆರಡು ವರ್ಷ ಇಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು ಆದರೆ ಬಸ್ ನಿಲ್ದಾಣ ಹಳೇಯದಾದಂತೆ ಪೊಲೀಸ್ ಚೌಕಿಯು ಮರೆತು ಹೋಗಿತ್ತು.

ಪುನರಾರಂಭ:
ಹೊಸನಗರಕ್ಕೆ ಹೊಸ ಸಬ್ ಇನ್ಸ್‌ಪೆಕ್ಟರ್ ರಾಜರೆಡ್ಡಿಯವರು ಆಗಮಿಸಿದ ಮೇಲೆ ಹಾಗೂ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಪುನಃ ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿಯನ್ನು ತೆರೆದು ಸಿಬ್ಬಂದಿಗಳನ್ನು ನಿಯೋಜಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಅಡ್ಡಾ-ದಿಡ್ಡಿ ವಾಹನ ನಿಲ್ಲಿಸಿದರೇ ದಂಡ :
ಪಟ್ಟಣದ ಚೌಡಮ್ಮ ರಸ್ತೆಯಾದ ಬಸ್ ಸ್ಟ್ಯಾಂಡ್‌ನಿಂದ ಕೆಳಪೇಟೆಯವರೆಗೆ ವಾಹನ ಮಾಲೀಕರು ತಮ್ಮ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸುವುದು. ಅಡ್ಡಾ-ದಿಡ್ಡಿ ನಿಲ್ಲಿಸುವುದು ಮಾಡುತ್ತಿದ್ದು ಇದರಿಂದ ಓಡಾಟ ನಡೆಸುವ ಸಾರ್ವಜನಿಕರಿಗೆ ಬಹಳ ಅನಾನುಕೂಲವಾಗುತ್ತಿದೆ. ಟ್ರಾಫಿಕ್ ಜಾಮ್ ಸಹ ಆಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ವಾಹನಗಳನ್ನು ಸೂಚಿಸಿದ ಜಾಗದಲ್ಲಿ ನಿಲ್ಲಿಸಬೇಕು. ಅಡ್ಡಾ-ದಿಡ್ಡಿ ನಿಲ್ಲಿಸುವುದು, ಮಧ್ಯ ರಸ್ತೆಯಲ್ಲಿ ನಿಲ್ಲಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ದಂಡ ಹಾಕಲಾಗುವುದು ಎಂದು ಸಬ್ ಇನ್ಸ್‌ಪೆಕ್ಟರ್ ರಾಜರೆಡ್ಡಿಯವರು ವಾಹನ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಅವಿನಾಶ್, ಗಂಗಪ್ಪ, ಸುನೀಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!