ನಾನು ಯಾವುದೇ ರೀತಿಯ ವಂಚನೆ ಮಾಡಿಲ್ಲ, ಉದ್ಯೋಗ ಕೊಡಿಸುವ ಭರವಸೆಯೂ ನೀಡಿಲ್ಲ ; ರಿಪ್ಪನ್‌ಪೇಟೆಯ ಶ್ವೇತಾ

0 1,009

ಶಿವಮೊಗ್ಗ: ತಾನು ಯಾವುದೇ ರೀತಿಯ ವಂಚನೆ (Fraud) ಮಾಡಿಲ್ಲ. ಉದ್ಯೋಗ (Job) ಕೊಡಿಸುವ ಭರವಸೆಯನ್ನೂ ನೀಡಿಲ್ಲ. ಆದರೂ ಉದ್ದೇಶ ಪೂರ್ವಕವಾಗಿ ತನ್ನ ವಿರುದ್ಧ ರಿಪ್ಪನ್‍ಪೇಟೆಯ (Ripponpet) ಓರ್ವ ಮಹಿಳೆ ಸಹಿತ ಕೆಲವರು ಆರೋಪ ಮಾಡಿ ಮೊಕದ್ದಮೆ ಹೂಡಿದ್ದಾರೆ. ಆದರೆ ತಾನು ಇದು ಸುಳ್ಳು ಎಂದು ಹೇಳಿ ಅವರ ವಿರುದ್ಧವೇ ಈಗ ದೂರು ದಾಖಲಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಿಪ್ಪನ್‍ಪೇಟೆಯ ಶ್ವೇತಾ ನಿಶಾಂತ್ ಹೇಳಿದ್ದಾರೆ.

ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ  ವಿವರ ನೀಡಿದ ಅವರು, ಹಣಕ್ಕಾಗಿ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೊಸನಗರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರಿಪ್ಪನ್‍ಪೇಟೆ ಪೊಲೀಸ್ ಠಾಣೆಯಲ್ಲಿ (Police Station) ಹೊಸನಗರದ (Hosanagara) ಸೀಮಾ ಸೆರಾವೋ, ಆದರ್ಶ ಶೆಟ್ಟಿ, ನವೀನ್ ಮೇಲೆ 409, 384, 420, 504, 506, 509 ಐಪಿಸಿ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ರೈಲ್ವೆ ಇಲಾಖೆಯಲ್ಲಿ (Railway Department) ಕೆಲಸ ಕೊಡಿಸುವುದಾಗಿ ನಂಬಿಸಿ ತಾನು ವಂಚಿಸಿರುವುದಾಗಿ ದೂರುದಾರರಾದ ತೀರ್ಥಹಳ್ಳಿ ಮೂಲದ ಆದರ್ಶ ಹಾಗೂ ಶಿವಮೊಗ್ಗ ಮೂಲದ ನವೀನ್ ಪ್ರಕರಣ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಹೊಸನಗರದ ಸಾಮಾಜಿಕ ಹೋರಾಟಗಾರ್ತಿ ಸೀಮಾ ಸೆರಾವ್ ವಂಚನೆಗೊಳಗಾದ ದೂರುದಾರರನ್ನು ಬೆಂಬಲಿಸಿದ್ದರು ಎಂದ ಅವರು, ತನಗೂ ಸೀಮಾ ಸೆರಾವೋ ಬ್ಯೂಟಿಶಿಯನ್ ವೃತ್ತಿಯ ವಿಚಾರವಾಗಿ ಮೊದಲಿನಿಂದಲೂ ವೈಮನಸ್ಸು ಇತ್ತು. 3ನೇ ಆರೋಪಿ ನವೀನ ಮೂವರು ತಮ್ಮ ಮೊಬೈಲ್ ನಂಬರ್‌ ಗಳಿಂದ ಶ್ವೇತಾ ಮತ್ತು ಅವರ ಗಂಡನಿಗೂ ಕರೆ ಮಾಡಿ, ಹಣದ ಬೇಡಿಕೆ ಇಟ್ಟು ಕೊಡದೇ ಇದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದರು.

ಇತರೆ ಮೊಬೈಲ್ ನಂಬರ್‍ಗಳಿಂದಲೂ ಕರೆ ಮಾಡಿ ಶ್ವೇತಾ ಮತ್ತು ಆಕೆಯ ಗಂಡನ ಮಾನ ಕಳೆದು ಬೀದಿಗೆ ಬರುವಂತೆ ಮಾಡುತ್ತೇವೆ ಎಂದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದರು. ಪರ ಪುರುಷರೊಂದಿಗೆ ವ್ಯವಹರಿಸಿದ ಬಗ್ಗೆ ಫೋಟೋಗಳು ಇವೆಯೆಂದು ಹೇಳಿ 10 ಲಕ್ಷ ರೂ. ಬೇಡಿಕೆ ಸಹ ಇಡಲಾಗಿತ್ತು. ತನ್ನ  ಏಳಿಗೆಯನ್ನು ಸಹಿಸದ ಆರೋಪಿಗಳು ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದರೆಂದು ಅ.30 ರಂದು 1ನೇ ಆರೋಪಿ ಹೊಸನಗರದ ಸೀಮಾ ಸೆರಾವೋ, 2ನೇ ಆರೋಪಿ ಕೊಪ್ಪದ ಆದರ್ಶ ಶೆಟ್ಟಿ, 3ನೇ ಆರೋಪಿ ಮಲವಗೊಪ್ಪದ ನವೀನ್ ವಿರುದ್ಧ ದೂರು ದಾಖಲಾಗಿದೆ ಎಂದರು.

Leave A Reply

Your email address will not be published.

error: Content is protected !!