ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ದುಮ್ಮ ಡಾ|| ರೇವಣ್ಣಪ್ಪ ಗೌಡರಿಗೆ ವಿಶ್ವ ಸಮಾನತೆಯ ಭಾವೈಕ್ಯ ರತ್ನ ಪ್ರಶಸ್ತಿ

0 591

ಹೊಸನಗರ: ಹೊಸನಗರ (Hosanagara) ತಾಲ್ಲೂಕಿನ ಸಮಾಜ ಸೇವಕ (Social Worker) ದುಮ್ಮ ರೇವಣ್ಣಪ್ಪಗೌಡರವರಿಗೆ ಹುಬ್ಬಳ್ಳಿಯ (Hubballi) ವಿಶ್ವ ದರ್ಶನ ದಿನಪತ್ರಿಕೆಯ ರಾಷ್ಟೀಯ ಹಾಗೂ ನ್ಯಾಷನಲ್ ಐಕಾನ್ ಅವಾರ್ಡ್ 2023-24ನೇ ಸಾಲಿನ ಪ್ರತಿಷ್ಟಿತ ಪ್ರಶಸ್ತಿಯಾದ ಸಮಾನತೆಯ ಭಾವೈಕ್ಯ ರತ್ನ ಪ್ರಶಸ್ತಿಯನ್ನು (Awards) ನೀಡ ಗೌರವಿಸಿದೆ.

ಹುಬ್ಬಳಿಯ ಜ್ಯೋಶಿ ಗಲ್ಲಿಯ ದೇವಪ್ಪ ಹೊಸಮನಿ ಕಲ್ಯಾಣ ಮಂಟಪದಲ್ಲಿ ಭಾವೈಕ್ಯ ಸಮ್ಮೇಳನದ ಹಿರಿಯ ಮಹಾಪೂಜ್ಯ ಮಹಾಂತಲಿಂಗ ತಪೋನಿಧಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ದುಮ್ಮ ರೇವಣ್ಣಪ್ಪ ಗೌಡರವರು ಹೊಸನಗರ ತಾಲ್ಲೂಕಿನ ದುಮ್ಮಾ ಭೀಮನಕೆರೆ ಗ್ರಾಮದ ಗೌಡರ ಮನೆತನದ ದಂಪತಿಗಳ ಪುಣ್ಯಗರ್ಭದಲ್ಲಿ ಜನಿಸಿದ ಇವರು ಮಂಡಲ ಪ್ರಧಾನರಾಗಿ, ಹೊಸನಗರ ಟೌನ್ ಕಳೂರು ಮಂಡಲ ಪಂಚಾಯತಿ, ಜೆಎಂಎಫ್‌ಸಿ ನ್ಯಾಯಾಲಯದ ಹೊಸನಗರ ಅದಾಲತ್‌ನ ಸದಸ್ಯರಾಗಿ 10 ವರ್ಷಗಳ ಕಾಲ ಸೇವೆ, ಹೊಸನಗರ ರೆಡ್ ಕ್ರಾಸ್ ಸಮಿತಿಯ ಡೈರೆಕ್ಟರ್‌ರಾಗಿ, ಶರಣ ಸಾಹಿತ್ಯ ಪರಿಷತ್‌ನ ಹೊಸನಗರ ತಾಲ್ಲೂಕಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಗೌರವಾಧ್ಯಕ್ಷರಾಗಿ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷರಾಗಿ, ಪೊಲೀಸ್ ವೆಲ್ಪೇರ್ ಕರ್ನಾಟಕ ಆರ್ಗನೈಜೇಷನ್ ಹಾಗೂ ಜಿಲ್ಲಾ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಮೇಲಾಗಿ ಇವರು ಸಾಮಾಜಿಕ ಕ್ಷೇತ್ರದಲ್ಲಿ ಶ್ರೇಷ್ಠ ಹೆಸರು ಮಾಡಿದ್ದಾರೆ ಎಂದು ಹೆಳಲಾಗಿದೆ. ಇವರು ಶರಣ ಕಾಯಕ ಜೀವಿಗಳು ನಾಡಿನ ಶರಣರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಇವರ ಸಾಧನೆಯನ್ನು ಗುರುತಿಸಿ ಈ ಪ್ರಸಸ್ತಿ ನೀಡಲಾಗಿದೆ.

Leave A Reply

Your email address will not be published.

error: Content is protected !!