ನೀವೇ ಅಪ್ಪ, ಮಕ್ಕಳು ಗೂಟಾ ಹೊಡ್ಕೊಂಡು ಇರಬೇಕಾ? ; ಯಡಿಯೂರಪ್ಪ ಕುಟುಂಬದ ವಿರುದ್ಧ ಕಿಡಿಕಾರಿದ ಕೆ.ಎಸ್. ಈಶ್ವರಪ್ಪ

0 382

ಶಿವಮೊಗ್ಗ : ನೀವೇ ಅಪ್ಪ, ಮಕ್ಕಳು ಗೂಟಾ ಹೊಡ್ಕೊಂಡು ಇರಬೇಕಾ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಮಾಜಿ ಡಿಸಿಎಂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು‌.

ನಗರದ ವಿನೋಬನಗರದಲ್ಲಿರುವ ಶುಭಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ನಡೆದ ರಾಷ್ಟ್ರ ಭಕ್ತರ ಬಳಗ ವತಿಯಿಂದ ನಡೆದ ಶಿವಮೊಗ್ಗ ನಗರ ಬೂತ್ ಸಮಿತಿಯ ಕಾರ್ಯಕರ್ತರ ಸಮಾವೇಶದ ನಂತರ ಮಾಧ್ಯಮಗಳ ಬಳಿ ಮಾತನಾಡಿದ ಅವರು, ನಾನು ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಐದು ಬಾರಿ ಶಾಸಕನಾಗಿ ಗೆದ್ದಿದ್ದೇನೆ‌. ಈಗ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡಿದ್ದೇನೆ. ಹಿಂದೆ ನನಗೆ ದೊರಕಿದ ಜನರ ಬೆಂಬಲಕ್ಕಿಂತ ಈಗ ನಾಲ್ಕು ಪಟ್ಟು ಹೆಚ್ಚು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಯಾವ ಹಳ್ಳಿ ಕಡೆ ಹೋದರು ನಿಮಗೆ ಅನ್ಯಾಯವಾಗಿದೆ ಅಪ್ಪ ಮಕ್ಕಳ ಕೈನಲ್ಲಿ ಪಕ್ಷ ಇದೆ ಇದನ್ನ ಮುಕ್ತಿಗೊಳಿಸಲು ನಿಮಗೆ ಓಟ್ ಹಾಕುತ್ತೇವೆ ಎಂದು ಹಳ್ಳಿಯಲ್ಲಿರುವ ರೈತ ರೈತನ ಮಗ ಹೇಳಿತ್ತಿದ್ದಾರೆ. ನನ್ನ ಜೀವನದಲ್ಲಿ ಎಂದೂ ಕೂಡ ಇಷ್ಟೊಂದು ಪ್ರೋತ್ಸಾಹ ನೋಡಿರಲಿಲ್ಲ. ಇಂದು ನಡೆದ ಬೂತ್ ಮಟ್ಟದ ಸಮಾವೇಶಕ್ಕೆ 285 ಬೂತ್ ನಿಂದ ಹನ್ನೆರಡು ಜನ ಬರಲು ಸೂಚನೆ ನೀಡಲಾಗಿತ್ತು ಆದರೆ ಹೇಳಿದಕ್ಕಿಂತ ನಾಲ್ಕೈದು ಜನ ಹೆಚ್ಚಾಗಿ ಬಂದಿದ್ದಾರೆ ಆದ್ದರಿಂದ ಆಸನಗಳ ಕೊರತೆ ಉಂಟಾಗಿತ್ತು ಮತ್ತಷ್ಟು ಆಸನಗಳನ್ನು ತರಿಸಿ ವ್ಯವಸ್ಥೆ ಮಾಡಲಾಗಿದೆ. ಬೂತ್ ಮಟ್ಟದ ಕಾರ್ಯಕ್ರಮ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ನಿನ್ನೆ ಸಾಗರ ಸೊರಬ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದೆ ಸೊರಬದಲ್ಲಿ ಕಾರ್ಯಾಲಯ ಉದ್ಘಾಟನೆಯಾಗಿ ಅಲ್ಲಿಯೂ ಸಹ ಕೆಲಸ ಆರಂಭವಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಬೆಂಬಲ ಪ್ರೋತ್ಸಾಹ ಹೆಚ್ಚಾಗಿ ಸಿಗುತ್ತಿದೆ ನೂರಕ್ಕೆ ನೂರು ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದರು.

ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಕೇಂದ್ರದ ನಾಯಕರು ಈಶ್ವರಪ್ಪ ಮನ ಒಲಿಸುತ್ತಾರೆ ಎಂದು ಹೇಳತ್ತಾರೆ ಎಂದರೆ ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಈಶ್ವರಪ್ಪ ಸ್ಪರ್ಧೆ ಮಾಡಬಾರದು ಎಂದಾದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮ ಕುಟುಂಬದ ಕೈಯಲ್ಲಿರುವ ಎಲ್ಲಾ ಸ್ಥಾನಕ್ಕೆ ರಾಜಿನಾಮೆ ಕೊಡಿಸಲಿ. ಈಶ್ವರಪ್ಪ ಕೇಂದ್ರದ ನಾಯಕರ ಜೊತೆ ಮಾತನಾಡುತ್ತಿದ್ದಾರೆ ಎಂದು ಹೇಳಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಅವರು, ಕೇಂದ್ರದ ನಾಯಕರು ದೆಹಲಿಗೆ ಕರೆಸಿದಾಗ ಅವರನ್ನು ಭೇಟಿಯಾಗಲು ಆಗಲಿಲ್ಲ ಇದರ ಅರ್ಥ ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಪಕ್ಷವನ್ನು ಮುಕ್ತ ಮಾಡಬೇಕಿದೆ ಅಪ್ಪ ಮಕ್ಕಳ ಕೈಯಿಂದ ಪಕ್ಷವನ್ನು ಉಳಿಸಿ ಚುನಾವಣೆಯಲ್ಲಿ ರಾಘವೇಂದ್ರರನ್ನು ಸೋಲಿಸಲಿ ಎಂಬ ಅರ್ಥ ಎನ್ನುವುದು ತಿಳಿದುಕೊಳ್ಳಲಿ ಎಂದರು.

ರಾಜ್ಯದಲ್ಲಿ ಪಕ್ಷವನ್ನು ಯಡಿಯೂರಪ್ಪ ಈಶ್ವರಪ್ಪ ಅನಂತಕುಮಾರ್ ಸೇರಿ ಕಟ್ಟಿದ್ದಾರೆ ಅಧಿಕಾರ ಮಾತ್ರ ಯಡಿಯೂರಪ್ಪ ಕುಟುಂಬಕ್ಕೆ ಇರಲಿ ಎಂದು ವಿಜಯೇಂದ್ರ ಬಹಿರಂಗವಾಗಿ ಹೇಳಲಿ. ನಿಮ್ಮಪ್ಪ ಕೇಂದ್ರದ ಚುನಾವಣ ಸಮಿತಿ ಅಧ್ಯಕ್ಷ. ನಿಮ್ಮಣ್ಣ ರಾಘವೇಂದ್ರ ಸಂಸದ, ನೀನು ಶಾಸಕ ಆರು ತಿಂಗಳು ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಟ್ಟು ಹಠ ಮಾಡಿ ರಾಜ್ಯಾಧ್ಯಕ್ಷ ಸ್ಥಾನ ತೆಗೆದುಕೊಂಡಿದ್ದೀರಾ ಎಲ್ಲಾ ಅಧಿಕಾರ ಯಡಿಯೂರಪ್ಪ ಮತ್ತು ಅವರ ಮಕ್ಕಳ ಕೈನಲ್ಲಿ ಇರಬೇಕಾ..? ಎಲ್ಲಾ ಸ್ಥಾನ ನಿಮ್ಮ ಕುಟುಂಬಕ್ಕೆ ಬೇಕಾ? ಲಿಂಗಾಯತರು ಬೇಕೆಂದರೆ ಯತ್ನಾಳ್ ಗೆ ಒಕ್ಕಲಿಗರು ಬೇಕೆಂದರೆ ಸಿ.ಟಿ.ರವಿಗೆ, ಓಬಿಸಿ ಬೇಕೆಂದರೆ ನನಗೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಲಿ ನೋಡೋಣ. ಈಶ್ವರಪ್ಪ ಪಕ್ಷ ಕಟ್ಟಿ ಮನೆಯಲ್ಲಿರಲಿ ನೀವು ನಿಮ್ಮಪ್ಪ ಅಧಿಕಾರದಲ್ಲಿ ಇರುತ್ತೇವೆ ಎನ್ನವುದು ಯಾವ ನ್ಯಾಯ ಎಂದರು‌.

ದಾರಿ ತಪ್ಪಿಸುವ ಕೆಲಸ ಮಾಡಬೇಡಿ ನಮ್ಮ ನಾಯಕ ಎಂದು ಹೇಳಿಕೊಂಡು ಯತ್ನಾಳ್, ಅನಂತ ಕುಮಾರ್ ಹೆಗ್ಗಡೆ, ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನಂದ ಗೌಡ ಎಲ್ಲರನ್ನೂ ಪಕ್ಕಕ್ಕೆ ಇಟ್ಟಿದ್ದೀರ ಇನ್ನು ಎಷ್ಟು ಜನಕ್ಕೆ ಪಕ್ಕಕ್ಕೆ ಕೂರಿಸುತ್ತೀರಾ? ಇದರಿಂದ ಕಾರ್ಯಕರ್ತರಲ್ಲರೂ ನೋವಿನಲ್ಲಿದ್ದಾರೆ ಅವರೆಲ್ಲರ ನೋವಿಗೆ ಪರಿಹಾರ ತರಲು ನಾನು ಚುನಾವಣೆಗೆ ನಿಂತಿದ್ದೇನೆ ಚುನಾವಣೆಯಲ್ಲಿ ಗೆದ್ದು ಹಿಂದುತ್ವಕ್ಕಾಗಿ ಹೋರಾಡಿದ ಅವರಿಗೆಲ್ಲಾ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಕೊಡುತ್ತೇನೆ ಎಂದರು.

ಮೋದಿ ವಿಶ್ವನಾಯಕ ಮೋದಿ ಫೋಟೋವನ್ನು ಯಾರೂ ಬಳಸಬಾರದು ಎಂದು ಇಲ್ಲಿಯವರೆಗೂ ಎಲ್ಲೂ ಆದೇಶವಾಗಿಲ್ಲ. ಮೋದಿ ನನ್ನ ಹೃದಯದಲ್ಲಿದ್ದಾರೆ ಯಡಿಯೂರಪ್ಪ ಮತ್ತು ಅವರ ಮಕ್ಕಳ ಹೃದಯದಲ್ಲಿ ಯಾರಿದ್ದಾರೆ ಎಂಬುದು ರಾಜ್ಯದ ಜನಕ್ಕೆ ಗೊತ್ತು. ನನ್ನ ಹೃದಯದಲ್ಲಿರುವ ಮೋದಿಯವರನ್ನು ತೆಗೆಯಲು ಸಾಧ್ಯವಿಲ್ಲ ಜಿಲ್ಲೆಯ ಜನರ ಮನಸ್ಸಿನಲ್ಲಿ ಮೋದಿ ಇದ್ದಾರೆ ಮೋದಿ ಮತ್ತು ಜನರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದರು‌.

ಪಕ್ಷದಿಂದ ನನ್ನ ಮೇಲೆ ಕ್ರಮ ತೆಗೆದುಕೊಳ್ಳುವುದಾದರೆ ನಾನು ನಾಮ ಪತ್ರ ಸಲ್ಲುಸುವ ತನಕ ಏಕೆ ಕಾಯುತ್ತೀರಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಭಗವಂತನ ಮೇಲೆ ಪ್ರಮಾಣ ಮಾಡಿ ಹೇಳಿದ್ದೇನೆ ಇನ್ನೂ ಯಾವ ಭಾಷೆಯಲ್ಲಿ ಹೇಳಲಿ. ನನ್ನ ಮೇಲೆ ಕ್ರಮವಾಗುತ್ತದೆ ಎಂದು ತಿಳಿದೇ ನಾನು ಚುನಾವಣೆಗೆ ನಿಂತಿರುವುದು ಬಹಳ ಹೆಚ್ಚೆಂದರೆ ಉಚ್ಚಾಟನೆ ಮಾಡುತ್ತಾರೆ ಅಷ್ಟೆ ತಾನೆ ನಾನು ಗೆದ್ದ ನಂತರ ಏನು ಮಾಡುತ್ತಾರೆ?
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಹೋದರು ಮತ್ತೆ ಪಕ್ಷಕ್ಕೆ ಬಂದರು ಅವರ ಮನೆಗೆ ಹೋಗಿ ಚುನಾವಣೆಗೆ ಟಿಕೆಟ್ ಕೊಟ್ಟಿದ್ದೀರ ಅವರನ್ನೇ ನೀವು ಪಕ್ಷಕ್ಕೆ ಸೇರಿಸಿಕೊಂಡಿದ್ದೀರಾ ನನ್ನ ಮೇಲೆ‌ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ನೋಡೋಣ ಎಂದರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/fQMoVKfKSisjYWfT/?mibextid=qi2Omg

ಈಶ್ವರಪ್ಪ ಚುನಾವಣೆಯಲ್ಲಿ ಎರಡು ಲಕ್ಷ ಮತಗಳ ಅಂತದಿಂದ ಗೆಲ್ಲುತ್ತಾರೆ ಎಂದು ವಿಜಯೇಂದ್ರಗೆ ತಾಕತ್ತಿದ್ದರೆ ಅವರ ಅಣ್ಣನಿಗೆ ಹೇಳಲಿ. ನೀವೇ ಅಪ್ಪ ಮಕ್ಕಳು ಗೂಟ ಹೊಡೆದುಕೊಂಡು ಇರಬೇಕಾ..? ಎರಡು ಲಕ್ಷ ಮತಗಳಲ್ಲಿ ರಾಘವೇಂದ್ರ ಗೆಲ್ಲುತ್ತಾರೆ ಎಂದರೆ ನಾನು ಸ್ಪರ್ಧೆಯಿಂದ ಹಿಂದೆ ಬರಲಿ ಎಂದು ಏಕೆ ಹೇಳುತ್ತಾರೆ. ನಾನು ರಣರಂಗಕ್ಕೆ ಇಳಿದಾಗಿದೆ ಬೆನ್ನು ತೋರಿಸಿ ಓಡಿಹೋಗಲ್ಲ ಸಂಧಾನಕ್ಕೆ ಯಾರೂ ಬರಬೇಡಿ ನೀವು ಪದೆ ಪದೆ ಸಂಧಾನಕ್ಕೆ ಬರುತ್ತಿರುವುದು ನೋಡಿದರೆ ನಿಮ್ಮ ಸೋಲು ಖಚಿತ ಎಂದು ರಾಜ್ಯದ ಜನಕ್ಕೆ ಗೊತ್ತಾಗಿದೆ. ನನ್ನ ಬಗ್ಗೆ ಅಪಪ್ರಚಾರ ಮಾಡುವುದು ಬಿಟ್ಟು ಚುನಾವಣಾ ಯುದ್ಧಕ್ಕೆ ಬರಲಿ ಅವರು ಗೆಲ್ಲುತ್ತಾರೋ ನಾನು ಗೆಲ್ಲುತ್ತೇನೋ ನೋಡೋಣ.

ನಾನು ಸಾಯೋವರೆಗೂ ಬಿಜೆಪಿಯಲ್ಲಿರುತ್ತೇನೆ ಅವರು ಕೆಜೆಪಿ ಕಟ್ಟಿ ಪಕ್ಷ ಬಿಟ್ಟು ಹೋಗಿದ್ದರು. ನಾನು ಯಾವತ್ತೂ ಪಕ್ಷ ಬಿಟ್ಟು ಹೋಗಿಲ್ಲ ಚುನಾವಣೆ ನಂತರ ಮತ್ತೆ ನಾನು ಬಿಜೆಪಿಗೆ ಬರಲಿದ್ದೇನೆ. ಎಲ್ಲಾ ವಾರ್ಡ್ ಗಳಲ್ಲಿ ಕಾರ್ಪೊರೇಷನ್ ಟಿಕೆಟ್ ಕೊಡುತ್ತೇವೆ ಎಂದು ಆಮಿಷ ಹಾಕುತ್ತಿದ್ದಾರೆ ಒಂದು ವಾರ್ಡ್‌ಗೆ ಒಂದು ಟಿಕೆಟ್ ಇರುತ್ತೆ ಅವರು ಏದು ಜನಕ್ಕೆ ಟಿಕೆಟ್ ಕೊಡುತ್ತೇವೆ ಬಂದು ರಾಘವೇಂದ್ರಗೆ ಬೆಂಬಲ ಕೊಡಿ ಎಂದು ಹೇಳಿಕೊಂಡು ಮೋಸ ಮಾಡುತ್ತಿರುವುದು ಎಲ್ಲರಿಗೂ ಅರ್ಥವಾಗಿದೆ.

ನನ್ನ ಮೇಲೆ ಅನುಕಂಪ ಬೇಡ ನಾನು ಪಕ್ಷಕ್ಕೆ ಧರ್ಮಕ್ಕೆ ಮೋಸ ಮಾಡಿಲ್ಲ ಧರ್ಮ ಹಾಗು ಹಿಂದುತ್ವ ಪರ ಈಶ್ವರಪ್ಪ ಇದ್ದಾರೆ ಎಂದು ಅನಿಸಿದರೆ ಯಾರೇ ಆಗಲಿ ಬಂದು ಚುನಾವಣೆಗೆ ಸಹಾಯ ಮಾಡಲಿ. ಇದೇ ಕಾರಣಕ್ಕಾಗಿ ಗೂಳಿಹಟ್ಟಿ ಶೇಖರ್ ಬಂದು ಚುನಾವಣೆ ಮುಗಿಸಿ ನನ್ನ ಗೆಲುವಿನವರೆಗೂ ಜೊತೆ ಇರುವುದಾಗಿ ನನ್ನ ಬೆನ್ನಿಗೆ ನಿಂತಿದ್ದಾರೆ. ಸಮಾಜಕ್ಕೆ ಈಶ್ವರಪ್ಪರಿಂದ ನೆರವಾಗಿದೆ ಎಂದು ಎಲ್ಲಾ ಜಾತಿಯವರು ಬಂದು ಬೆಂಬಲ ನೀಡಿದ್ದಾರೆ ಚುನಾವಣೆಯಲ್ಲಿ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ ಎಂದರು.

Leave A Reply

Your email address will not be published.

error: Content is protected !!