ಜಾತಿ ವ್ಯವಸ್ಥೆ ಸಮಾಜದಲ್ಲಿನ ಅನಿಷ್ಟ ಪದ್ಧತಿಯಾಗಿದ್ದು ಅದನ್ನು ಶಾಶ್ವತವಾಗಿ ಕಿತ್ತು ಹಾಕಬೇಕಾಗಿದೆ ; ಬಿವೈಆರ್

0 142

ಶಿಕಾರಿಪುರ : ಜಾತಿ ವ್ಯವಸ್ಥೆ ಸಮಾಜದಲ್ಲಿನ ಅನಿಷ್ಟ ಪದ್ಧತಿಯಾಗಿದ್ದು ಅದನ್ನು ಶಾಶ್ವತವಾಗಿ ಕಿತ್ತು ಹಾಕಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ (B.Y Raghavendra) ಹೇಳಿದರು.

ತಾಲೂಕು ಆಡಳಿತ ಹಾಗೂ ತಾಲೂಕು ಕುರುಬ ಸಮಾಜದ ವತಿಯಿಂದ ಪಟ್ಟಣದ ಕನಕ ಉದ್ಯಾನವನದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು  ಮಾತನಾಡುತ್ತಿದ್ದರು.

ಸಮ ಸಮಾಜದ ನಿರ್ಮಾಣಕ್ಕಾಗಿ ಕನಕದಾಸರು ಹಾಕಿಕೊಟ್ಟ ಮಾನವೀಯತೆಯ ಮೌಲ್ಯಗಳು ಇಂದಿಗೂ ಪ್ರಸ್ತುತ. ಅವರು ರಚಿಸಿದ ಕೀರ್ತನೆಗಳು ಮತ್ತು  ಮುಂಡಿಗೆಗಳನ್ನು ಅರ್ಥೈಸಿಕೊಂಡರೆ ಬದುಕಿನಲ್ಲಿ ನಾವು ಯಾವತ್ತೂ ಸನ್ಮಾರ್ಗದಲ್ಲಿಯೇ ನಡೆಯುತ್ತೇವೆ ಎಂದರು.

ತಮ್ಮ ಭಕ್ತಿಯ ಶಕ್ತಿಯಿಂದ ಭಗವಂತನನ್ನ ತಮ್ಮತ್ತ ತಿರುಗಿಸಿಕೊಂಡ ಮಹಾ ದೈಹಿಕ ಆದರ್ಶ ಪುರುಷ ಈ ಕನ್ನಡನಾಡಿನ ಹೆಮ್ಮೆ. ವಿಶ್ವಮಾನ್ಯ ಕನಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ ವಿಶ್ವಮಾನವತ ಪುರುಷನಾಗಿ ನೋಡಬೇಕು ಎಂದರು.

ಭದ್ರ ಕಾಡ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ಕುರುಬರು ಹೀನ ಕುಲದವರು ಎಂದು ಜರಿಯುವ ಆ ಸಮಯದಲ್ಲಿ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ಏನಾದರೂ ಬಲ್ಲಿರಾ ಎಂದು ಸಮಾನತೆಯ ತತ್ವವನ್ನು ಸಾರಿ ಕುರುಬ ಕುಲಕ್ಕೆ ಕಳಶ ಪ್ರಾಯರಾದರು. ಕುರುಬ ಕುಲದಲ್ಲಿ ಹುಟ್ಟಿದ್ದು ನಮ್ಮ ಹೆಮ್ಮೆ ಎಂದುಕೊಳ್ಳಬೇಕು ಎಂದರು. ಅವರ ಸಾಹಿತ್ಯ ಕೃಷಿ ಇಂದಿಗೂ ಮಾದರಿ ಆಗಿದೆ. ದಾಸ ಕೀರ್ತನೆಗಳು ಯಾವತ್ತಿಗೂ ಆದರ್ಶ ಎಂದರು.

ಕಾರ್ಯಕ್ರಮದಲ್ಲಿ ಕನಕದಾಸ ಸೇವಾ ಟ್ರಸ್ಟ್‌ನ ವತಿಯಿಂದ ಅಧ್ಯಕ್ಷರಾದ ಸುರೇಶ್ ನೇತೃತ್ವದಲ್ಲಿ ಪ್ರಸಾದ  ವಿನಿಯೋಗವನ್ನು ಮಾಡಲಾಯಿತು.     

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್,  ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಣ್ಣ, ಕನಕ ಮಂಟಪ ಹಾಗೂ ಕನಕ ಮೂರ್ತಿಯ ದಾನಿಗಳಾದ ಕೆ ಹಾಲಪ್ಪ, ಮಾಜಿ ಪುರಸಭಾ ಅಧ್ಯಕ್ಷರಾದ ಲಕ್ಷ್ಮಿ ಮಹಾಲಿಂಗಪ್ಪ, ರೂಪಕಲಾ ಹೆಗಡೆ, ಪುರಸಭಾ ಸದಸ್ಯ ಹುಲ್ಲುಮಾರ್ ಮಹೇಶ್, ಜೀನಹಳ್ಳಿ ಪ್ರಶಾಂತ್, ಕಸಬಾ ಸೊಸೈಟಿ ಅಧ್ಯಕ್ಷರಾದ ಬಡಗಿ ಪಾಲಾಕ್ಷಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಘು ಎಚ್ಎಸ್, ತಾಲೂಕು ಕುರುಬ ಸಮಾಜದ ಕಾರ್ಯದರ್ಶಿ ಬಿ ಎಲ್ ರಾಜು, ದೊಡ್ಡಪ್ಪ ಪಿ, ಮಾಲತೇಶ್ ಭಂಡಾರಿ, ಗುಡ್ಡಳ್ಳಿ ಶಿವಮೂರ್ತಿ, ಹೆಚ್‍.ಜಿ ಗಿರೀಶ್, ಬೆಣ್ಣೆ ಪ್ರವೀಣ್ ಪರಶುರಾಮ್ ಚೌಟಗಿ,  ಕರಿಬಸಪ್ಪ ಮುಂತಾದವರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!