ಹಾಲುಗುಡ್ಡೆ ನ್ಯಾಯಬೆಲೆ ಅಂಗಡಿಗೆ ಜಿಲ್ಲಾ ಆಹಾರ ಇಲಾಖೆ ಆಧಿಕಾರಿ ದಿಢೀರ್ ಭೇಟಿ, ಪರಿಶೀಲನೆ

0 424

ರಿಪ್ಪನ್‌ಪೇಟೆ: ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲುಗುಡ್ಡೆ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದ ಪಡಿತರ ವಿತರಣೆಯಲ್ಲಿ ದಲಿತ ಮಹಿಳಾ ಫಲಾನುಭವಿಗೆ ಅನ್ನ ಅಂತ್ಯೋದಯ ಅಕ್ಕಿ ವಿತರಣೆಯಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಂದು ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಅವಿನ್ ಆರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ವಂಚಿತ ದಲಿತ ಮಹಿಳೆಗೆ ಸೂಕ್ತ ಪರಿಹಾರ ಕೊಡಿಸಿ ನ್ಯಾಯಬೆಲೆ ಅಂಗಡಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ವಿವರಿಸಿದರು.

ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಮಾತಾ ಮಹಿಳಾ ವಿವಿದ್ದೋದ್ದೇಶ ಸಂಘದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಬಾಳೂರು ಗ್ರಾಮದ ಹಾಲುಗುಡ್ಡೆ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದ ಅನ್ನ ಅಂತ್ಯೋದಯ ಫಲಾನುಭವಿ ದಲಿತ ಮಹಿಳಾ ಪಡಿತರದಾರರಿಗೆ ಅಕ್ಕಿ ವಿತರಣೆಯಲ್ಲಿ ಸಾಕಷ್ಟು ವಂಚನೆ ನಡೆಸಿರುವುದರ ಬಗ್ಗೆ ಈಗಾಗಲೇ ನಮ್ಮ ಇಲಾಖೆಯ ತಾಲ್ಲೂಕ್ ಆಧಿಕಾರಿಗಳು ವರದಿ ನೀಡಿದ್ದರು ವರದಿಯನ್ನಾದರಿಸಿ ಇಂದು ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರೊಂದಿಗೆ ಮಹಿಳೆಗೆ ಪರಿಹಾರವನ್ನು ಕೊಡಿಸಲಾಗಿದೆ. ಹಾಗೆಯೇ ರಿಪ್ಪನ್‌ಪೇಟೆ ಕೃಷಿ ಸೇವಾ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ಬಗ್ಗೆ ಸಾಕಷ್ಟು ಸಾರ್ವಜನಿಕರ ದೂರು ಬಂದಿದ್ದು ಆಾದನ್ನು ಪರಿಶೀಲನೆ ನಡೆಸಲಾಗಿ ಸುಮಾರು 85 ಕ್ವಿಂಟಾಲ್‌ಗೂ ಆಧಿಕ ಅಕ್ಕಿ ದಾಸ್ತಾನು ಮಳಿಗೆಯಲ್ಲಿ ದಾಸ್ತಾನು ಕಡಿಮೆ ತೋರಿಸುತ್ತಿದ್ದು ಏನಾಗಿದೆ ಎಂಬ ಕುರಿತು ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಆಹಾರ ಇಲಾಖೆಯ ಸಹಾಯಕ ನಿರೀಕ್ಷಕ ನಾಗರಾಜ್‌ಭಟ್ ಇಲ್ಲಿನ ಕೃಷಿ ಸೇವಾ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂಬಂಧ ಬಂದರೆ ಯಾವಾಗಲು ಬಾಗಿಲು ಹಾಕಿಕೊಂಡು ಅಲ್ಲಿದ್ದೇನೆ ಇಲ್ಲಿದ್ದೇನೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆಂದು ವಿವರಿಸಿದರು.

ಮಾಧ್ಯಮದವರು ಪಡಿತರದಾರರಿಗೆ ತೊಂದರೆಯಾಗುತ್ತದೆಂಬ ಪ್ರಶ್ನೆಗೆ ಉತ್ತರಿಸಿ, ನಾವು ಯಾವುದೇ ಪಡಿತರದಾರರಿಗೂ ಅನ್ಯಾಯವಾಗದಂತೆ ಅಕ್ಕಪಕ್ಕದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ನೀಡಲಾಗಿದ್ದು ಫಲಾನುಭವಿಗಳು ಪಡಿತರದಿಂದ ವಂಚಿತರಾಗದಂತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಅವಿನ್ ಆರ್. ತಿಳಿಸಿದರು.

Leave A Reply

Your email address will not be published.

error: Content is protected !!