ಸೃಜನ ಶೀಲ ವ್ಯಕ್ತಿತ್ವ ನಿರ್ಮಾಣವೇ ಎನ್‌ಎಸ್‌ಎಸ್ ಗುರಿ ; ನಳಿನ್‌ಚಂದ್ರ

0 452

ಹೊಸನಗರ : ತಮ್ಮಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತವೆ ಎಂದು ನಿವೃತ್ತ ಪ್ರಾಚರ‍್ಯ ಪ್ರೊ.ನಳಿನಚಂದ್ರ ಹೇಳಿದರು.

ಅವರು ಇತ್ತೀಚೆಗೆ ಮಾರುತಿಪುರದಲ್ಲಿ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾಯಕತ್ವದ ಗುಣ ವೃದ್ಧಿಸಿಕೊಳ್ಳಲು ಶಿಬಿರಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಸಮಾಜದ ಎಲ್ಲಾ ವರ್ಗದ ಜನರ ಜೊತೆ ಬೆರೆಯುವ ಕಾರಣದಿಂದ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಸಹಕಾರಿಯಾಗಿದೆ. ರಾಷ್ಟ್ರಪ್ರಜ್ಞೆ, ಬ್ರಾತೃತ್ವದ ಭಾವನೆ, ಸಾಮರಸ್ಯದ ಬದುಕಿನ ಆಯಾಮಗಳನ್ನು ಸಚೇತನಗೊಳಿಸುತ್ತವೆ. ಅವಕಾಶಗಳು ದೊರೆತಾಗ ಅವುಗಳನ್ನು ವ್ಯರ್ಥ. ಮಾಡದೇ, ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಆಸಕ್ತಿ ತೋರಬೇಕೆಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಮಣ್ಯ ಮಾತನಾಡಿ, ಪ್ರಬುದ್ಧ ವ್ಯಕ್ತಿತ್ವ ಹೊಂದಿದವರು ರಾಷ್ಟ್ರ ನಿರ್ಮಾಣದಂತಹ ಮಹತ್ಕಾರ್ಯ ಕೈಗೊಳ್ಳುತ್ತಾರೆ. ವಿದ್ಯಾ ಸಂಸ್ಥೆಗಳು ಇಂತಹ ವ್ಯಕ್ತಿತ್ವಗಳನ್ನು ರೂಪಿಸುವ ಹಾಗೂ ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯ ಕೈಗೊಳ್ಳಬೇಕೆಂದರು.

ಈ ಕಾರ್ಯಕ್ರಮದಲ್ಲಿ ಕೊಡಚಾದ್ರಿ ಕಾಲೇಜ್ ಪ್ರಾಂಶುಪಾಲರಾದ ಉಮೇಶ್, ಗ್ರಾಪಂ ಅಧ್ಯಕ್ಷೆ ದೀಪಿಕಾ ಕೃಷ್ಣಪ್ಪ, ಉಪಾಧ್ಯಕ್ಷ ಶಂಕರಶೆಟ್ಟಿ, ಶಾಲಾ ಸಮಿತಿ ಅಧ್ಯಕ್ಷ ಮಂಜಪ್ಪ, ಮುಖ್ಯ ಶಿಕ್ಷಕಿ ವಿಜಯಕುಮಾರಿ, ಪ್ರಮುಖರಾದ ಡಾ.ಶ್ರೀಪತಿ ಹಳಗುಂದ, ಡಾ.ಬಸವರಾಜಪ್ಪ ಪ್ರದೀಪ್‌ಕುಮಾರ್, ಡಾ.ಪ್ರತಿಮಾ, ಗುರುಮುರ್ತಿ, ಮಂಜಪ್ಪ, ಗ್ರಂಥಾಪಾಲಕ ಡಾ|| ಲೋಕೇಶ್, ಗೌತಮ್, ರವಿ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!