ಪತಿ ಅಗಲಿ ಒಂದು ಗಂಟೆ ಅಂತರದಲ್ಲಿ ಪತ್ನಿಯೂ ಸಾವು !

0 2,230

ಹೊಸನಗರ : ತಾಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಂತೂರು ಗ್ರಾಮ ಸಾಲ್ತೋಡಿಯ ಕೃಷಿ ಕಾರ್ಮಿಕ ದಂಪತಿಗಳಾದ ಹೊಳೆಯಪ್ಪ (90) ಹಾಗೂ ಗಂಗಮ್ಮ (84) ದಂಪತಿಗಳು ಗುರುವಾರ ಬೆಳಗಿನಜಾವ ಸುಮಾರು 1:30 ಗಂಟೆಗೆ ಹೊಳೆಯಪ್ಪನವರು ಅನಾರೋಗ್ಯದಿಂದ ಮೃತಪಟ್ಟಿದ್ದು ಪತಿ ಮೃತಪಟ್ಟ ವಿಷಯ ದೃಢಪಟ್ಟ ನಂತರ ಪತ್ನಿ ಗಂಗಮ್ಮ ಬೆಳಗಿನಜಾವ ಸುಮಾರು 2:30ರ ಸಮಯದಲ್ಲಿ ತೀವ್ರ ಹೃದಯಘಾತದಿಂದ ಗಂಡನೊಂದಿಗೆ ಇಹಲೋಕ ತ್ಯಜಿಸಿರುವುದಾಗಿ ತಿಳಿದು ಬಂದಿದೆ.

ಮೃತ ದಂಪತಿಗಳು ಇಬ್ಬರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತ ದಂಪತಿಗಳ ನಿಧನಕ್ಕೆ ಮುಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!