ಮಾ. 03 ರಂದು ಹೊಸನಗರ ತಾಲೂಕಿನಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

0 335

ಹೊಸನಗರ : ಮಾ. 03ರ ಭಾನುವಾರದಂದು ಹುಟ್ಟಿದ ದಿನದಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಹೊಸನಗರ ತಾಲೂಕಿನ ಎಲ್ಲಾ ಆಸ್ಪತ್ರೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು.

ಹೊಸನಗರ ತಾಲೂಕಿನಲ್ಲಿ ಒಟ್ಟು 7310 (ವಲಸೆ ಮಕ್ಕಳು ಸೇರಿ) ಮಕ್ಕಳಿದ್ದು, 205 ಪೋಲಿಯೋ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಪೋಲಿಯೋ ಲಸಿಕೆ ನೀಡುವವರು ಎಲ್ಲಾ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಯವರು ಸೇರಿ 541 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ತಾಲೂಕಿನಲ್ಲಿ 30 ಗ್ರಾಮ ಪಂಚಾಯಿತಿ ಮತ್ತು 1 ಪಟ್ಟಣ ಪಂಚಾಯಿತಿ ಇದ್ದು ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಮಾಡಿಸಿ ಅಗತ್ಯ ಸಹಕಾರ ನೀಡಲು ಕೋರಲಾಗಿದೆ.

ಈ ಬಗ್ಗೆ ದಿನಾಂಕ ಫೆ. 23 ರಂದು ಹೊಸನಗರ ತಹಶೀಲ್ದಾರ್ ರಶ್ಮಿ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸುರೇಶ್, ಹುಟ್ಟಿದ ದಿನದಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಲು ಕೋರಿದರು.

ತಾಲೂಕಿನ ಮೆಸ್ಕಾಂ, ಐಸಿಡಿಎಸ್, ಪಂಚಾಯತ್ ರಾಜ್, ಶಿಕ್ಷಣ ಇಲಾಖೆ ಮತ್ತು ರೋಟರಿ, ಲಯನ್ಸ್ ಸಂಸ್ಥೆಯವರು ಸಹಕಾರ ನೀಡುವಂತೆ ಕೋರಲಾಯಿತು.

ಜಂತುಹುಳು ನಿವಾರಣಾ ದಿನ
ಫೆ.27 ರಂದು 1 ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಗುವುದು.

ಹೊಸನಗರ ತಾಲೂಕಿನಲ್ಲಿ ಒಟ್ಟು 24740 ಮಕ್ಕಳ ಗುರಿಯಿದ್ದು, ಫೆ.29ರಿಂದ ಮಾ. 08ರ ವರೆಗೆ ಬಿಟ್ಟುಹೋದ ಮಕ್ಕಳಿಗೆ ಮಾಪ್ ಅಪ್ ರೌಂಡ್ ನಲ್ಲಿ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುವುದು.

ಈ ಬಗ್ಗೆ ಫೆ.23 ರಂದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಎಲ್ಲಾ ಅಂಗನವಾಡಿ ಮತ್ತು ಶಾಲಾ ಮಕ್ಕಳು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ತಪ್ಪದೆ ಜಂತುಹುಳು ನಿವಾರಣಾ ಮಾತ್ರೆ ನೀಡುವಲ್ಲಿ ಎಲ್ಲಾ ಇಲಾಖೆಯವರು ಸಹಕಾರ ನೀಡಬೇಕಾಗಿ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಕೋರಿದರು.

Leave A Reply

Your email address will not be published.

error: Content is protected !!