ಮೆಗ್ಗಾನ್ ಆಸ್ಪತ್ರೆಯಲ್ಲಿ ಬಡವರ ವಿರೋಧಿ ಸುತ್ತೋಲೆಗಳು ಹಿಂಪಡೆಯಲು ಆಗ್ರಹ

0 497

ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯಲ್ಲಿ (Mcggan Hospital) ಒಳ ಮತ್ತು ಹೊರರೋಗಿಗಳ ತಪಾಸಣಾ ಶುಲ್ಕಕ್ಕೆ ಸೇರಿದಂತೆ ಬಡವರ ವಿರೋಧಿ ಸುತ್ತೋಲೆಗಳ ಹಿಂಪಡೆಯಲು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.


ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ ದಾಖಲಾಗುವ ಹೊರ ಮತ್ತು ಒಳರೋಗಿಗಳ ತಪಾಸಣಾ ಶುಲ್ಕವನ್ನು 10ರೂ.ಗೆ ನಿಗದಿ ಮಾಡಿ, ಪ್ರತಿ ತಿಂಗಳ ನಂತರ ಮತ್ತೇ 10 ರೂ.ಗಳನ್ನು ಪಾವತಿಸಿ ತಪಾಸಣ ಚೀಟಿ ಪಡೆಯಬೇಕು ಎಂದು ಆದೇಶ ಹೊರಡಿಸಲಾಗಿದೆ. ಇದು ಜನವಿರೋಧಿ ಆದೇಶವಾಗಿದೆ ಎಂದು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿದೆ ಎಂದು ಮನವಿದಾರರು ದೂರಿದರು.


ಅಲ್ಲದೇ ಮೆಗ್ಗಾನ್ ಆಸ್ಪತ್ರೆ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾಗುವ ರೋಗಿಗಳ ಸಹಾಯಕರಿಗೆ ನೀಡುತ್ತಿದ್ದ ಉಚಿತ ಪಾಸನ್ನು ಆಕಸ್ಮಾತ್ ಕಳೆದುಕೊಂಡರೇ ಅದರ ನಕಲು ಪ್ರತಿ ಪಡೆಯಲು ನೂರು ರೂ. ದಂಡ ವಿಧಿಸಲಾಗುತ್ತಿದೆ ಇದು ಕೂಡ ಬಡವರ ಪಾಲಿಗೆ ಕಷ್ಟವಾಗುತ್ತಿದೆ ಮತ್ತು ಸಿಟಿ ಹಾಗೂ ಎಂ.ಆರ್.ಐ. ಸ್ಕ್ಯಾನಿಂಗ್ ಒಳಪಡಿಸಿದ್ದಲ್ಲಿ ಅದರ ಇಮೇಜ್‌ನನ್ನು ಸಿಡಿ ಅಥವಾ ಡಿವಿಡಿಯಲ್ಲಿ ರೋಗಿಗಳಿಗೆ ಹಾಕಿಕೊಳ್ಳಲು ನೂರು ರೂ. ಶುಲ್ಕವನ್ನು ವಿಧಿಸಲಾಗಿದೆ. ಇದು ಜನವಿರೋಧಿ ಕ್ರಮವಾಗಿದೆ ಎಂದು ಮನವಿದಾರರು ತಿಳಿಸಿದರು.


ಆದ್ದರಿಂದ ಕೂಡಲೇ ಈ ಮೂರು ಜನವಿರೋಧಿ ಮತ್ತು ಬಡವರ ವಿರೋಧಿ ಸುತ್ತೋಲೆ ಆದೇಶಗಳನ್ನು ಹಿಂಪಡೆಯುವಂತೆ ಸಿಮ್ಸ್ ನಿರ್ದೇಶಕರಿಗೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಕಲ್ಲೂರು ಮೇಘರಾಜ್, ಡಾ.ನೇತ್ರಾವತಿ, ಡಾ.ಶೇಖರ್ ಗೌಳೆ, ಪ್ರೊ. ಕಲ್ಲನ್, ಟಿ.ಬಿ.ಸೋಮಶೇಖರಯ್ಯ, ಕೆ.ಆರ್. ಶಿವಣ್ಣ, ಎಲ್. ಆದಿಶೇಷ, ಸಮೀನ ಗೌಸರ್, ಮಂಜುನಾಥ್, ನರಸಿಂಹಮೂರ್ತಿ, ತಿಮ್ಮೇಶ್, ರಾಮಕೃಷ್ಣ, ಪ್ರದೀಪ್, ಮಂಜುನಾಥ್, ಮಂಜುಳ ಇದ್ದರು.

Leave A Reply

Your email address will not be published.

error: Content is protected !!