108 ಸಮಸ್ಯೆ | ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಯುಗಾದಿ ಕಹಿ ನೀಡಿದ ರಾಜ್ಯ ಸರ್ಕಾರ !

0 843

ಹೊಸನಗರ: ಈ ವರ್ಷ ಯುಗಾದಿ ಹಬ್ಬಕ್ಕೆ ಸಿಹಿ-ಕಹಿ ಮಿಶ್ರಿತ ಬೇವು-ಬೆಲ್ಲ ತಿನ್ನಬೇಕಾಗಿರುವ ಹೊಸನಗರ ಸಾರ್ವಜನಿಕರ ಆಸ್ಪತ್ರೆ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ನಾಲ್ಕು ತಿಂಗಳುಗಳಿಂದ ಸಂಬಳ ನೀಡದೇ ಬೇವು ಮಾತ್ರ ರಾಜ್ಯ ಸರ್ಕಾರ ತಿನ್ನಿಸಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಸುಮಾರು ಮೂರುವರೆ ಸಾವಿರಕ್ಕಿಂತಲ್ಲೂ ಹೆಚ್ಚು ಜನರು ಸಾರ್ವಜನಿಕ ಆಸ್ಪತ್ರೆಯ ಅಂಬ್ಯುಲೆನ್ಸ್ ನಲ್ಲಿ ಡ್ರೈವರ್‌ಗಳಾಗಿ ವೈದ್ಯರಾಗಿ, ಅಸಿಸ್ಟೇಟ್ ಸಿಬ್ಬಂದಿಗಳಾಗಿ ಸೇವೆ ಮಾಡುತ್ತಿದ್ದಾರೆ.
ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 18 ಜನರು ಅಂಬ್ಯುಲೆನ್ಸ್ನಲ್ಲಿ ಸೇವೆ ಮಾಡುತ್ತಿದ್ದು ಸಿಬ್ಬಂದಿಗಳಿಗೆ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಪರದಾಟ ನಡೆಸುತ್ತಿದ್ದು ಈ ವರ್ಷದ ಯುಗಾದಿ ಹಬ್ಬವನ್ನು ಕಹಿಯಲ್ಲೇ ಆಚರಿಸಿದ್ದು ಇವರ ಗೋಳು ಕೇಳುವವರಿಲ್ಲವಾಗಿದೆ.

ನಾಯಿ ನಾಲಿಗೆಯಾಂತಾದ ಟೈಯರ್ !
ತಾಲ್ಲೂಕಿನಲ್ಲಿ ಒಟ್ಟು ಮೂರು 108 ಅಂಬ್ಯುಲೆನ್ಸ್ ಸಾರ್ವಜನಿಕ ಅನುಕೂಲಕ್ಕಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಸರ್ಕಾರ ನೀಡಿದೆ. ಆದರೆ ಈ ಮೂರು 108 ಅಂಬ್ಯುಲೆನ್ಸ್ ನ ಟೈಯರ್‌ಗಳು ನಾಯಿ ನಾಲಿಗೆಯಂತಾಗಿದ್ದು ಯಾವ ಸಂದರ್ಭದಲ್ಲಾದರೂ ಸಿಡಿಯಬಹುದಾಗಿದೆ. ರೋಗಿಗಳ ಜೀವ ಉಳಿಸಬೇಕಾಗಿರುವ ಅಂಬ್ಯುಲೆನ್ಸ್ ಅತೀ ಶೀಘ್ರದಲ್ಲಿ ರೋಗಿಗಳ ಜೀವ ಹಾಗೂ ಡ್ರೈವರ್ ಜೀವ ತೆಗೆಯುವುದರಲ್ಲಿ ಅನುಮಾನವಿಲ್ಲ. ಅದು ಅಲ್ಲದೇ ಎದುರಿನಿಂದ ಅಥವಾ ಹಿಂಬದಿಯಿಂದ ಬರುವ ಹೋಗುವ ವಾಹನಗಳಿಗೆ ಯಾವ ಗ್ರಹಚಾರ ಕಾದಿದೆಯೋ ಗೊತ್ತಿಲ್ಲ.

ಅಧಿಕಾರಿಗಳೇ ಎಚ್ಚರಗೊಳ್ಳಿ:

ಈ ಅಂಬ್ಯುಲೆನ್ಸ್ ವ್ಯವಸ್ಥೆ ಮೂರು ತಿಂಗಳಗಳಿಂದ ಅವ್ಯವಸ್ಥೆಯಾಗಿದ್ದರೂ ತಾಲ್ಲೂಕು ವೈದ್ಯಾಧಿಕಾರಿಗಳು ಹೊಸ ಟೈಯರ್ ಹಾಕುವ ಗೋಜಿಗೆ ಹೋಗಿಲ್ಲ. ತಕ್ಷಣ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ತಾಲ್ಲೂಕು ಆರೋಗ್ಯ ರಕ್ಷ ಸಮಿತಿ ಎಚ್ಚೆತ್ತುಕೊಂಡು 108 ಅಂಬ್ಯುಲೆನ್ಸ್ ಟೈಯರ್ ಹಾಕುವ ವ್ಯವಸ್ಥೆ ಮಾಡುವುದರ ಜೊತೆಗೆ ಶಾಸಕರು ಮತ್ತು ಸರ್ಕಾರ ಸಿಬ್ಬಂದಿಗಳ ನಾಲ್ಕು ತಿಂಗಳ ಸಂಬಳ ನೀಡಿ ಅವರ ಜೀವನ ನಡೆಸಲು ಅನುಕೂಲ ಮಾಡಿಕೊಡಲಿ.

Leave A Reply

Your email address will not be published.

error: Content is protected !!