ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪೊಲೀಸ್ ಪೇದೆಯನ್ನು ಹತ್ಯೆ ಮಾಡಿದ್ದ ಆರೋಪಿ ಅಂದರ್ Thirthahalli | Murder | Crime News | Police

ತೀರ್ಥಹಳ್ಳಿ : ತರಕಾರಿ ಮಾರ್ಕೆಟ್ ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಘಟನಾ ವಿವರ :

ಮಾ.24 ರಂದು ರಾತ್ರಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೀರ್ಥಹಳ್ಳಿ ಟೌನ್ ಸಂತೆ ಮೈದಾನದಲ್ಲಿ ಮಲಗಿದ್ದ ಹೊಸನಗರ ತಾಲೂಕಿನ ರಾವೆ ಗ್ರಾಮದ ಪೂರ್ಣೇಶ (39) ಈತನನ್ನು ಯಾವುದೋ ಉದ್ದೇಶಕ್ಕಾಗಿ ಯಾರೋ ದುಷ್ಕರ್ಮಿಗಳು ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆಂದು ಮೃತನ ಸಹೋದರ ಪ್ರಕಾಶ್‌ ರವರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದ ಆರೋಪಗಳ ಪತ್ತೆಗಾಗಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ರವರ ಮಾರ್ಗದರ್ಶನದಲ್ಲಿ ಗಜಾನನ ವಾಮನ ಸುತರ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಅಶ್ವತ್ಥ ಗೌಡ ಜೆ ಪೊಲೀಸ್‌ ನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್‌ ಠಾಣೆ, ಗಾದಿಲಿಂಗಪ್ಪ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಹೆಚ್ ಸಿ ಸುಧಾಕರ, ಪರಮೇಶ್ವರ ನಾಯ್ಕ, ದಿವಾಕರ, ಪಿಸಿ ದೀಪಕ್, ರವಿ ಮತ್ತು ಅವಿನಾಶ ರವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಈ ತನಿಖಾ ತಂಡವು ಪ್ರಕರಣದ ಆರೋಪಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸವದತ್ತಿ ರಸ್ತೆಯ ದೇಸಬಾಯಿ ಸರ್ಕಲ್ ಹತ್ತಿರದ ಅರ್ಬನ್ ಓಣಿಗಲ್ಲಿ ಪ್ರಕಾಶ ಜಂಬಗಿ @ ಪಕೀರಪ್ಪ (24) ಈತನನ್ನು ಮಾ. 26 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಆರೋಪಿ ವಿಚಾರಣೆಗೊಳಪಡಿಸಿದಾಗ ಮಾ.24 ರಂದು ರಾತ್ರಿ ಮೃತ ಪೂರ್ಣೇಶ ಮತ್ತು ಆರೋಪಿ ಪ್ರಕಾಶ ಜಂಬಗಿ @ ಪಕೀರಪ್ಪ ಇಬ್ಬರೂ ಮದ್ಯಪಾನ ಮಾಡಿದ್ದು, ಕುಡಿದ ಅಮಲಿನಲ್ಲಿ ಪೂರ್ಣೇಶನು ಆರೋಪಿ ಪ್ರಕಾಶ ಜಂಬಗಿ @ ಪಕೀರಪ್ಪನಿಗೆ ಬೈದು ಜಗಳ ತೆಗೆದಿದ್ದು, ಆಗ ಆರೋಪಿಯು ಸಿಟ್ಟಿನಿಂದ ಪೂರ್ಣೇಶನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದು ಪೊಲೀಸರ ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ.

ಈ ಪ್ರಕರಣದ ಆರೋಪಿಯನ್ನು ತ್ವರಿತವಾಗಿ ಪತ್ತೆ ಹಚ್ಚಿ ಉತ್ತಮ ಕರ್ತವ್ಯ ನಿರ್ವಹಿಸಿದ ತನಿಖಾ ತಂಡಕ್ಕೆ ಎಸ್ಪಿ ಪ್ರಶಂಸಿಸಿ ಅಭಿನಂದಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!