ಸಜ್ಜನರ ಒಡನಾಟದಿಂದ ಶ್ರೇಷ್ಠ ಫಲ ಪ್ರಾಪ್ತಿ ; ಶ್ರೀ ರಂಭಾಪುರಿ ಜಗದ್ಗುರುಗಳು

0 43

ಎನ್.ಆರ್.ಪುರ; ಸತ್ವ ಗುಣ ಬೆಳೆಸಿ ಮನಸ್ಸಿನ ಪರಿಶುದ್ಧತೆಯನ್ನು ಉಂಟು ಮಾಡಲು ಆರ‍್ಶ ವ್ಯಕ್ತಿಗಳ ಮರ‍್ಗರ‍್ಶನ ಅವಶ್ಯಕ. ಸಜ್ಜನ ಸತ್ಪುರುಷರು ಸ್ವಾರ್ಥಿಗಳಲ್ಲ ಅವರು ಲೋಕ ಚಿಂತಕರು. ಸಜ್ಜನರ ಒಡನಾಟದಿಂದ ಮನುಷ್ಯನಿಗೆ ಶ್ರೇಷ್ಠ ಫಲ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಜರುಗಿದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ರ‍್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕಲ್ಲದೇ ನಾಸ್ತಿಕರನ್ನಾಗಿ ಮಾಡಬಾರದು. ಎಲ್ಲ ರಂಗಗಳಲ್ಲಿ ಸಂಘಟನೆಗಳು ನಡೆಯಲಿ ಆದರೆ ಸಂರ‍್ಷಗಳು ನಡೆಯಬಾರದು. ಮನುಷ್ಯನ ವರ್ತನೆಗಳು ಅತಿರೇಕಗೊಂಡಾಗ ದೇವರು ಯಾವ ರೂಪದಲ್ಲಾದರೂ ಬಂದು ಅಹಂಕಾರವನ್ನು ನಾಶಗೊಳಿಸಬಲ್ಲ. ಕತ್ತಲನ್ನು ಮೀರಿ ಬೆಳಕು ನೀಡುವುದರಿಂದಲೇ ದೀಪಕ್ಕೊಂದು ಬೆಲೆ. ಕಷ್ಟಗಳನ್ನು ಮೀರಿ ಬೆಳೆದು ನಿಂತಾಗಲೇ ಬದುಕಿಗೊಂದು ಬೆಲೆ ಬರಲು ಸಾಧ್ಯವಾಗುತ್ತದೆ. ಎಳೆಯ ಬಿದಿರು ಸುಲಭವಾಗಿ ಮಣಿಯುತ್ತದೆ. ಆದರೆ ಬಲಿತ ಬಿದಿರು ಬಗ್ಗದು. ಹಾಗೆಯೇ ಎಳೆಯ ಮನಸ್ಸನ್ನು ತಿದ್ದಿ ತೀಡಬಹುದು. ಆದರೆ ಬಲಿತ ಮನಸ್ಸನ್ನು ತಿದ್ದುವುದು ಸುಲಭವಲ್ಲ. ಮನುಷ್ಯನಲ್ಲಿ ಪ್ರಾಪಂಚಿಕ ವಾಸನೆಗಳು ಸೋಂಕುವ ಮುನ್ನ ಯೋಗ್ಯ ಸಂಸ್ಕಾರ ಕೊಟ್ಟರೆ ಅವರನ್ನು ಸದ್ಗುಣಿಗಳನ್ನಾಗಿ ಮಾಡಲು ಸಾಧ್ಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ರ‍್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಬದುಕಿನ ಉನ್ನತಿಗೆ ರ‍್ಮ ಅಡಿಪಾಯವಾಗಿದ್ದು ಉತ್ತಮರ ಒಡನಾಟದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ ಎಂದರು.


ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಮಾತನಾಡಿ ಚಿಂತೆಗಿಂತ ದೊಡ್ಡ ಕಾಯಿಲೆ ಇಲ್ಲ. ಖುಷಿಗಿಂತ ದೊಡ್ಡ ಔಷಧಿ ಯಾವುದು ಇಲ್ಲ. ಮನುಷ್ಯನ ಮನಸ್ಸು ವಿಷಯ ವಾಸನೆಗಳಲ್ಲಿ ಸಿಲುಕಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾನೆ. ಶ್ರೀ ಜಗದ್ಗುರು ರೇಣುಕಾಚಾರ‍್ಯರ ವಿಶ್ವ ಬಂಧುತ್ವದ ವಿಚಾರಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದರು.


ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚರ‍್ಯ ಟ್ರಸ್ಟಿನ ಖಜಾಂಚಿ ಉಪ್ಪಳ್ಳಿ ಬಸವರಾಜ, ಆಲ್ದೂರು ಬಿ.ಬಿ.ರೇಣುಕರ‍್ಯರು, ಕೆ.ವೀರರಾಜ್, ಎ.ಎಸ್.ಸೋಮಶೇಖರಯ್ಯ, ಎಂ.ಡಿ.ಪುಟ್ಟಸ್ವಾಮಿ, ಎಸ್.ಎಂ.ದೇವಣ್ಣಗೌಡ, ಬಿ.ಎ.ಶಿವಶಂಕರ, ಅ.ಭಾ.ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ, ಹಗರಿಬೊಮ್ಮನಹಳ್ಳಿ ತಿಪ್ಪೆಸ್ವಾಮಿ ಮೊದಲಾದ ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶರ‍್ವಾದ ಪಡೆದರು.


ಶ್ರೀ ಜಗದ್ಗುರು ರೇಣುಕಾಚರ‍್ಯ ಗುರುಕುಲ ಸಾಧಕರಿಂದ ವೇದಘೋಷ, ಶಿವಮೊಗ್ಗದ ಶಾಂತಾ ಆನಂದ ಇವರಿಂದ ಭಕ್ತಿ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‌ನ 185ನೇ ವಾರ್ಷಿಕ ಸಮಾವೇಶ ಶ್ರೀ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಜರುಗಿ ಕೆಲವು ಮಹತ್ವಪೂರ್ಣ ನಿರ್ಣಯಗಳನ್ನು ಕೈಗೊಳ್ಳಲಾಯಿತು.


ಬೆಳಿಗ್ಗೆ ಶ್ರೀ ಪೀಠದ ಎಲ್ಲ ದೈವಗಳಿಗೆ ಶ್ರಾವಣ ವಿಶೇಷ ಪೂಜೆ ಜೊತೆಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಶುಭ ಹಾರೈಸಿದರು.

Leave A Reply

Your email address will not be published.

error: Content is protected !!