ಸಿಗಂದೂರು ಸೇತುವೆ ಉದ್ಘಾಟನೆ: ಮಲೆನಾಡಿಗರ ಆರು ದಶಕಗಳ ಕನಸು ಸಾಕಾರ

Written by Koushik G K

Published on:

ಸಾಗರ :ಮಲೆನಾಡಿನ ಜನತೆ ದೀರ್ಘಕಾಲದಿಂದ ಕಾಯುತ್ತಿದ್ದ ಅಂಬಾರಗೋಡ್ಲು–ಕಳಸವಳ್ಳಿ ಸೇತುವೆ ಇಂದು (ಸೋಮವಾರ) ಅದ್ದೂರಿಯಾಗಿ ಲೋಕಾರ್ಪಣೆಗೊಂಡಿದೆ. ಕಳೆದ 60 ವರ್ಷಗಳಿಂದ ಮಲೆನಾಡಿಗರ ಕನಸಾಗಿ ಉಳಿದಿದ್ದ ಈ ಸೇತುವೆ ಇನ್ನು ಮುಂದೆ ಈ ಪ್ರದೇಶದ ಸಂಪರ್ಕ ವ್ಯವಸ್ಥೆಗೆ ನವಚೈತನ್ಯ ನೀಡಲಿದೆ.

WhatsApp Group Join Now
Telegram Group Join Now
Instagram Group Join Now

ಈ ಐತಿಹಾಸಿಕ ಕ್ಷಣದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಸೇತುವೆಯ ಲೋಕಾರ್ಪಣೆ ನೆರವೇರಿತು. ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಡಿ.ಎಸ್. ಅರುಣ್ ಮತ್ತು ಎಸ್ಎನ್ ಚನ್ನಬಸಪ್ಪ,ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ,ಮಾಜಿ ಶಾಸಕ ಹಾಲಪ್ಪ ಹರತಾಳು ಮತ್ತು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದು,ಈ ಗೈರಹಾಜರಿಯ ಕುರಿತು ಕೆಲವೊಂದು ಚರ್ಚೆಗಳನ್ನು ಹುಟ್ಟುಹಾಕಿದೆ.

sigandru bridge inaugrated

Leave a Comment