ಹೊಸನಗರ : ಹಳ್ಳಿ-ಹಳ್ಳಿ ಕಲ್ಲು ರಸ್ತೆಗಳಲ್ಲಿ ಬಸ್‌ಗಳನ್ನು ಮಾಲೀಕರು ಬಿಡುವುದೇ ಕಷ್ಟಕರವಾದ ಈ ಪರಿಸ್ಥಿತಿಯಲ್ಲಿ ಶ್ರೀ ದುರ್ಗಾಂಬಾ ಬಸ್ ಮಾಲೀಕರು ಹಳ್ಳಿ-ಹಳ್ಳಿಗಳ ಮಧ್ಯೆ ಸಂಚರಿಸುವ ಸುಳ್ಳಳ್ಳಿಯಿಂದ ತುಮರಿ ಮಾರ್ಗವಾಗಿ ಸಿಗಂದೂರು – ಬೆಂಗಳೂರಿಗೆ ಶ್ರೀ ದುರ್ಗಾಂಬಾ ಬಸ್‌ಗೆ ಸಸಿಗೊಳ್ಳಿಯಲ್ಲಿ ಚಾಲನೆ ನೀಡಲಾಯಿತು.
ಈ ಸಮಯದಲ್ಲಿ ಸಸಿಗೊಳ್ಳಿ ಜೀನಣ್ಣ ಮಾತನಾಡಿ, ಪ್ರಥಮ ಬಾರಿಗೆ ಸ್ಲೀಪರ್ ರೂಪದಲ್ಲಿ ಶ್ರೀ ದುರ್ಗಾಂಬಾ ಬಸ್ ಮಾಲೀಕರು ಕಲ್ಲು ಕೊರಕಲು ರಸ್ತೆಯಾದ ನಮ್ಮ ರಸ್ತೆಯಲ್ಲಿ ಸೇವೆಯನ್ನು ನಮ್ಮ ಸುತ್ತ-ಮುತ್ತಲಿನ ಹಳ್ಳಿ ಜನರು ಬೆಂಗಳೂರಿಗೆ ಪ್ರಯಾಣಿಸುವ ಸಲುವಾಗಿ ಬಸ್‌ಗೆ ಚಾಲನೆ ನೀಡಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಾಬಣ್ಣ ಮಂಜಯ್ಯ, ಜಯಂತ ಹೆಚ್.ಎಸ್. ರಾಘವೇಂದ್ರ ಹಾಗೂ ಗ್ರಾಮದ ಮತ್ತಿತರರು ಹಾಜರಿದ್ದು ಶುಭ ಹಾರೈಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





