ರಿಪ್ಪನ್‌ಪೇಟೆ ; ಇತ್ತೀಚೆಗೆ ಬೆಂಗಳೂರಿನ ಯಲಹಂಕ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ 2025-26ನೇ ಸಾಲಿನ ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಮತ್ತು ಸುವರ್ಣ ಚಾರಿಟಿಬಲ್ ಟ್ರಸ್ಟ್ ಹಾಗೂ ಕರ್ನಾಟಕ ಗ್ಯಾಸ್ ವೆಂರ‍್ಸ್ ವೆಲ್ ಫೇರ್ ಅಸೋಸಿಯೇಷನ್ ಇವರು 2025-26ನೇ ಸಾಲಿನ ಕೊಡಮಾಡುವ ಸಮಾಜ ಸೇವಾ ರಿಪ್ಪನ್‌ಪೇಟೆಯ ಲೇಖನಾ ಜಿ.ನಾಯ್ಕ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಮತ್ತು ಸುವರ್ಣ ಚಾರಿಟಿಬಲ್ ಟ್ರಸ್ಟ್ ಹಾಗೂ ಕರ್ನಾಟಕ ಗ್ಯಾಸ್ ವೆಂರ‍್ಸ್ ವೆಲ್ ಫೇರ್ ಅಸೋಸಿಯೇಷನ್ ಇವರು 2025-26ನೇ ಸಾಲಿನ ಪ್ರತಿಷ್ಟಿತ ಹೆಮ್ಮೆಯ ಸುವರ್ಣ ಕನ್ನಡಿಗ 2025-26 ಕೊಡಮಾಡುವ ಸಮಾಜ ಸೇವಾ ಪ್ರಶಸ್ತಿಗೆ ರಿಪ್ಪನ್‌ಪೇಟೆಯ ಲೇಖನಾ ಜಿ.ನಾಯ್ಕ್ ಭಾಜನರಾಗಿದ್ದಾರೆ.