ಅಪಘಾತ ತಡೆಗೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

Written by malnadtimes.com

Published on:

ರಿಪ್ಪನ್‌ಪೇಟೆ ; ಅಪಘಾತಗಳ ನಿಯಂತ್ರಣಕ್ಕಾಗಿ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಟರ್ ಅಂಟಿಸುವ ವಿಶೇಷ ಕಾರ್ಯಾಚರಣೆಯನ್ನು ಪಿಎಸ್‌ಐ ಎಸ್.ಪಿ.ಪ್ರವೀಣ್ ನೇತೃತ್ವದ ಸಿಬ್ಬಂದಿಗಳು ನಡೆಸಿದರು.

WhatsApp Group Join Now
Telegram Group Join Now
Instagram Group Join Now

ಅಪಘಾತಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಠಿಯಿಂದ ವಾಹಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ನೆಡಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ರಾತ್ರಿ ವೇಳೆ ಸರಕು ಸಾಗಾಣೆ ವಾಹನಗಳು, ಲಾರಿ ಟ್ರ್ಯಾಕ್ಟರ್ ಸೇರಿದಂತೆ ಭಾರೀ ವಾಹನಗಳ ಗೋಚರತೆ ಹೆಚ್ಚಿಸಲು ಈ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ. ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಟರ್ ಅಂಟಿಸುವುದರಿಂದ ಚಾಲಕರಿಗೆ ಮುಂದೆ ಹೋಗುತ್ತಿರುವ ಹಾಗೂ ಇದರಿಂದ ವಾಹನಗಳ ಅಸ್ಪಷ್ಟ ಗೋಚರತೆಯಿಂದ ಸಂಭವಿಸಬಹುದಾದ ಅಪಘಾತಗಳ ನಿಯಂತ್ರಣ ಸಾಧ್ಯವಾಗುತ್ತದೆ. ಈ ಕಾರಣದಿಂದ ಪ್ರತಿಯೊಂದು ವಾಹನಗಳ ಚಾಲಕರು ತಮ್ಮ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಟರ್ ಅಂಟಿಸಬೇಕು. ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್, ರಾಮಚಂದ್ರ, ಸಂತೋಷ ಕೊರವರ್, ಸುರೇಶ, ಪ್ರವೀಣ್ ಹಾಗೂ ಮಧುಸೂದನ್ ಇನ್ನಿತರರು ಹಾಜರಿದ್ದರು.

Leave a Comment