ಡ್ರೋನ್ ಬಳಸಿ ನ್ಯಾನೊ ಯೂರಿಯ ಸಿಂಪಡಣೆ, ರೈತರಿಗೆ ಉಚಿತ ಪ್ರಾತ್ಯಕ್ಷಿಕೆ

Written by Mahesha Hindlemane

Published on:

HOSANAGARA ; ಡ್ರೋನ್ ಮೂಲಕ ನ್ಯಾನೋ ಯೂರಿಯ ಸಿಂಪಡಣೆ ಕುರಿತು ರೈತರಿಗೆ ಉಚಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ತಾಲೂಕಿನ ಕೆರೆಹಳ್ಳಿ ಹೋಬಳಿ ಬಾಳೂರು ಗ್ರಾಮದ ರೈತ ಧನಂಜಯ ಮತ್ತು ಮಂಜಪ್ಪ ಅವರ ಭತ್ತದ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

WhatsApp Group Join Now
Telegram Group Join Now
Instagram Group Join Now

ಕೃಷಿ ಇಲಾಖೆ ಆಯೋಜಿಸಿದ್ದ ಈ ಪ್ರಾತ್ಯಕ್ಷಿಕೆಯಲ್ಲಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ ರೈತರಿಗೆ ಡ್ರೋನ್ ಬಳಸಿ ಔಷಧಿ ಸಿಂಪಡಣೆ, ಸದುಪಯೋಗ ಹಾಗೂ ಆಗುವ ಅನುಕೂಲ ಕುರಿತು ಸಮಗ್ರ ಮಾಹಿತಿ ನೀಡಿದರು.

ರಿಪ್ಪನ್‌ಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶರಣಗೌಡ, ಜಿಲ್ಲಾ ಐ.ಎಫ್.ಸಿ.ಒ ಸಂಸ್ಥೆಯ ಕ್ಷೇತ್ರಾಧಿಕಾರಿ ಬಿ.ಎಲ್. ರಾಜು, ಆತ್ಮ ಯೋಜನೆಯ ಸಿಬ್ಬಂದಿ ಸೈಯದ್ ಅವರ ಸಹಕಾರದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.

Leave a Comment