ಶ್ರೀಕ್ಷೇತ್ರ ಹೊಂಬುಜ ವಾರ್ಷಿಕ ರಥೋತ್ಸವ ; ಧ್ವಜಾರೋಹಣ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಭಗವಾನ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮತ್ತು ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪೂರ್ವ ಪರಂಪರೆಯಂತೆ, ಆಗಮೋಕ್ತ ಶಾಸ್ತ್ರದನ್ವಯ ಇಂದ್ರಪ್ರತಿಷ್ಠೆ, ವಿಮಾನಶುದ್ಧಿ, ಯಕ್ಷ ಪ್ರತಿಷ್ಠೆ, ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಿಕಾ ಸಂಗ್ರಹ ವಿಧಾನಗಳು ನೆರವೇರಿದುವು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಜಿನಾಗಮ ಪದ್ಧತಿಯ ವಿಧಿ-ವಿಧಾನಗಳು ನೆರವೇರಿದವು.

ಗಣಾಧಿಪತಿ, ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಸಸಂಘದ ಮುನಿಶ್ರೀಯವರು, ಆರ್ಯಿಕೆಯರು ಉಪಸ್ಥಿತರಿದ್ದರು. ಊರ ಪರವೂರ ಭಕ್ತವೃಂದದವರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಅಂದು ಸಂಜೆ ನಾಗವಾಹನೋತ್ಸವವು ಸಾಂಗವಾಗಿ ಪೂಜಾ ವಿಧಿಗಳೊಂದಿಗೆ ನೆರವೇರಿಸಿ, ನಗರ ಪ್ರದಕ್ಷಿಣೆಯ ಶ್ರೀ ವಿಹಾರ ನಡೆಯಿತು. ಸಾಲಾಂಕೃತ ಶೋಭಾಯಾತ್ರೆ ಮೆರಗು ನೀಡಿತು.

ಸೇವಾಕರ್ತೃರಾದ ರಚನಾ ಜೈನ್, ಸಂಜೀವ್ ಜೈನ್, ಅಶೋಕ ಕಂಪನಿ, ದೆಹಲಿಯವರು ಪೂಜಾ ವಿಧಿ, ಭೋಜನ ಸೇವೆಯನ್ನು ಅರ್ಪಿಸಿದರು.

Leave a Comment