ಹೊಸನಗರ ; ಪಟ್ಟಣದ ವಿದ್ಯುತ್ ಗುತ್ತಿಗೆದಾರ ಬಾವಿಕಟ್ಟೆ ಸತೀಶ್ ರವರ ಸಹೋದರಿ ಜಯಲಕ್ಷ್ಮಿ ವಿಜಯಕುಮಾರ್ ರವರ ಪುತ್ರಿ ವೈಷ್ಣವಿ ವಿಜಯಕುಮಾರ್ ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿ ಈ ಸಾಲಿನ ಪರೀಕ್ಷೆ ಎದುರಿಸಿದ್ದು ಇತ್ತೀಚೆಗೆ ಪ್ರಕಟಗೊಂಡ ಫಲಿತಾಂಶದಲ್ಲಿ 625ಕ್ಕೆ 618 ಅಂಕ ಗಳಿಸಿದ್ದು ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿ ವೈಷ್ಣವಿ ಪೋಷಕರಿಗೆ ತನ್ನ ಅಳಲನ್ನು ತೋಡಿಕೊಂಡಿದ್ದು ನನ್ನ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನ ಮಾಡುವಂತೆ ದುಂಬಾಲು ಬಿದ್ದಿದ್ದು ಪೋಷಕರು ಮರು ಮೌಲ್ಯಮಾಪನ ಮಾಡಿಸಿದ್ದು ಇಂದು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ವೈಷ್ಣವಿ 625ಕ್ಕೆ 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ರ‍್ಯಾಂಕ್ ಪಡೆದಿದ್ದಾರೆ.

ವೈಷ್ಣವಿ ಕನ್ನಡ, ಹಿಂದಿ, ವಿಜ್ಞಾನ, ಗಣಿತ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದು ಇಂಗ್ಲಿಷ್, ಸಮಾಜ ವಿಷಯದಲ್ಲಿ 99 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/16appiLJ3q/
ವೈಷ್ಣವಿಯ ಈ ಸಾಧನೆಗೆ ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕವೃಂದದವರು, ತಾಲೂಕು ಮೊಗವೀರ ಸಂಘದವರು, ನಾಗರಿಕರು ಅಭಿನಂದಿಸಿದ್ದಾರೆ.

ಇನ್ನೂ ಇದೇ ರೀತಿ ಮರು ಮೌಲ್ಯಮಾಪನದಲ್ಲಿ ತಾಲೂಕಿನ ಗುಬ್ಬಿಗ ಸುನಿಲ್ ರವರ ಪುತ್ರ ಅಭಿಷೇಕ 623 ಅಂಕ ಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ.