ಎಲ್ಲೆಂದರಲ್ಲಿ ಕಾರ್ ನಿಲ್ಲಿಸಿ ಎಣ್ಣೆ ಪಾರ್ಟಿ, ಮಳೆಯ ಚಳಿಯಲ್ಲಿದ್ದ ಯುವಕರಿಗೆ ಬಿಸಿ ಮುಟ್ಟಿಸಿದ ಪಿಎಸ್ಐ ರೇಣುಕಾ

Written by malnadtimes.com

Published on:

MUDIGERE | ಮೊನ್ನೆ ರಸ್ತೆ ಮಧ್ಯೆ ಡ್ಯಾನ್ಸ್, ನಿನ್ನೆ ಪ್ರವಾಸಿ ತಾಣದಲ್ಲಿ ಎಣ್ಣೆ ಪಾರ್ಟಿ ದೇವರಮನೆಗುಡ್ಡದ ಮಳೆಯ ಚಳಿಯಲ್ಲಿದ್ದ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು !

ಮೂಡಿಗೆರೆ ತಾಲೂಕಿನ ಸುಪ್ರಸಿದ್ದ ಪ್ರವಾಸಿ ತಾಣ ಹೊಯ್ಸಳರ ಕಾಲದ ಕಾಲಭೈರವೇಶ್ವರನ ಸನ್ನಿದಿ ದೇವರಮನೆಗುಡ್ಡದಲ್ಲಿ ಈ ಘಟನೆ ನಡೆದಿದ್ದು, 2 ದಿನದ ಹಿಂದೆ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಮದ್ಯ ಸೇವಿಸಿ ಡ್ಯಾನ್ಸ್ ಮಾಡಿದ್ದ ಪ್ರವಾಸಿಗರು ನಿನ್ನೆ ಅದೇ ದೇವರಮನೆಗುಡ್ಡದಲ್ಲಿ ಎಲ್ಲೆಂದರಲ್ಲಿ ಕಾರ್ ನಿಲ್ಲಿಸಿಕೊಂಡು ಕಾರಲ್ಲೇ ಲೈಟ್ ಮ್ಯೂಸಿಕ್ ಹಾಕಿಕೊಂಡು ಹಸಿರ ಸೌಂದರ್ಯದ ಮಧ್ಯೆ ಎಣ್ಣೆ ಪಾರ್ಟಿ ಮಾಡುತ್ತಿದ್ದರು.

MUDIGERE

ಕೆಪಿ ಆಕ್ಟ್ ನಲ್ಲಿ 20 ಜನರ ಮೇಲೆ ಹಾಗೂ ಕೋಟ್ಪಾ ಕಾಯ್ದೆಯಡಿ 9 ಜನರ ಮೇಲೆ ಕೇಸ್ ದಾಖಲಾಗಿದೆ.

ಬಣಕಲ್ ಪಿಎಸ್ಐ ರೇಣುಕಾ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವಿಸಿ, ಧೂಮಪಾನ ಮಾಡಿದ್ದಕ್ಕೆ ಪ್ರಕರಣ ದಾಖಲು ಮಾಡಲಾಗಿದೆ.

ಮಹಿಳೆಯರು, ಮಕ್ಕಳು ದೇವಸ್ಥಾನ ಹಾಗೂ ಪ್ರವಾಸಕ್ಕೆ ಬರುವ ದೇವರಮನೆಗುಡ್ಡ ಪ್ರದೇಶ ಇದಾಗಿದೆ.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಿವಿ, ಮೂಗಿದಂತೆ ; ಧನಂಜಯ ಸರ್ಜಿ

Leave a Comment