ಹೊಸನಗರ ; ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ವಿದ್ಯಾರ್ಥಿಗಳು

Written by Mahesha Hindlemane

Published on:

ಹೊಸನಗರ ; ನಮ್ಮದು ಕೃಷಿ ಪ್ರಧಾನ ದೇಶ. ಅದರೆ ಇಂದಿನ ಪೀಳಿಗೆಗೆ ಭತ್ತ, ರಾಗಿ, ಜೋಳ ಎಂದರೇನು ಎಂದು ಗೊತ್ತಿಲ್ಲ. ಅದನ್ನು ಪರಿಚಯಿಸುವ ಉದ್ದೇಶ ಹಾಗೂ ರೈತರು ಗದ್ದೆಗಳಲ್ಲಿ ಹೇಗೆ ಸಸಿಗಳನ್ನು ನಾಟಿ ಮಾಡುತ್ತಾರೆ. ಯಾವ ಕ್ರಮ ಅನುಸರಿಸುತ್ತಾರೆ. ಯಾವ ರೀತಿ ಭತ್ತದ ಸಸಿಗಳನ್ನು ಗದ್ದೆಗಳಲ್ಲಿ ನಾಟಿ ಮಾಡಬೇಕು ಎಂದು ಕಲಿಸುವ ಉದ್ದೇಶದಿಂದ ಹೊಸನಗರ ತಾಲ್ಲೂಕು ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳನ್ನು ಮೇಲಿನಕಲ್ಲುಗುಡ್ಡೆ ಕುಮಾರಗೌಡ ಎಂಬುವರ ಗದ್ದೆಗೆ ಕರೆದುಕೊಂಡು ಹೋಗಿ ಭತ್ತದ ಸಸಿ ನಾಟಿಯನ್ನು ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಕುಮಾರ್ ಆಚಾರ್ಯರವರ ನೇತೃತ್ವದಲ್ಲಿ ಮಾಡಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ನಾಗರತ್ನ, ಮುಖ್ಯ ಶಿಕ್ಷಕ ಗುರುಮೂರ್ತಿ, ಪಿಆರ್‌ಪಿ ನಾಗಬೂಷಣ್, ಶಿಕ್ಷಕ ಧರ್ಮಪ್ಪ, ಸುಮಾ, ಜಯಲಕ್ಷ್ಮಿ, ಪತ್ರಕರ್ತ ವಿಜೇಂದ್ರಪ್ರಭು, ಗಣೇಶ ಭಂಡಾರಿ, ಪ್ರಹ್ಲಾದ, ರಫೀ, ರಮೇಶ, ಸುಧೀರ, ರಾಘವೇಂದ್ರ, ಪ್ರವೀಣ್ ಉಲ್ಲಪ್ಪ ಹಾಗೂ ಎಸ್‌ಡಿಎಂಸಿ ಸದಸ್ಯರುಗಳು ಹಾಗೂ ಊರಿನ ಸಾರ್ವಜನಿಕರು ಹಾಗೂ ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Leave a Comment