ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಟೆಕ್ಕಿ ಹೃದಯಾಘಾತದಿಂದ ಸಾ*ವು !

Written by Mahesha Hindlemane

Published on:

ಚಿಕ್ಕಮಗಳೂರು ; ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನಿಂದ ಬಂದಿದ್ದ ಟೆಕ್ಕಿಯೋರ್ವ ದಿಢೀರ್ ಕುಸಿದು ಬಿದ್ದು ಹೃದಯಾಘಾತದಿಂದ ಸಾ*ವನ್ನಪ್ಪಿರುವಂತ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಮೃ*ತನನ್ನು ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ರಾಹುಲ್ (29) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ಪ್ರವಾಸದ ವೇಳೆಯಲ್ಲೇ ಹೃದಯಾಘಾತದಿಂದ ಸಾ*ವನ್ನಪ್ಪಿದ್ದಾನೆ.

ಚಿಕ್ಕಮಗಳೂರಿಗೆ ಐವರು ಸ್ನೇಹಿತ ಜೊತೆಗೆ ಸೇರಿ ಪ್ರವಾಸಕ್ಕೆ ರಾಹುಲ್ ತೆರಳಿದ್ದರು. ಚಿಕ್ಕಮಗಳೂರು ಹೊರವಲಯದ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾರೆ.


ಆಸ್ಪತ್ರೆಯಲ್ಲಿರುವಾಗಲೇ ಹೃದಯಾಘಾತಕ್ಕೆ ಮಹಿಳೆ ಬ*ಲಿ !

ಚಿಕ್ಕಮಗಳೂರು : ಆಸ್ಪತ್ರೆಯಲ್ಲಿರುವಾಗಲೇ ಮಹಿಳೆಯೊಬ್ಬರು ಕುಸಿದು ಬಿದ್ದು ಮೃ*ತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ದಾಕ್ಷಾಯಿಣಿ (50) ಮೃತ ಮಹಿಳೆ. ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವಾರದ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದಾಕ್ಷಾಯಿಣಿ, ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪದೆಯುತ್ತಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದರು.

ಆಸ್ಪತ್ರೆಯ ವಾರ್ಡ್‌ನಲ್ಲಿ ನಡೆದಾಡುತ್ತಿದ್ದಾಗಲೇ ದಾಕ್ಷಾಯಿಣಿ ಅವರಿಗೆ ಹೃದಯಾಘಾತವಾಗಿದೆ. ಇದ್ದಕ್ಕಿದ್ದಂತೆ ಕುಸಿದು ಬಿದ್ದವರು ಕೊನೆಯುಸಿರೆಳೆದಿದ್ದಾರೆ.

Leave a Comment