ಶಿವಮೊಗ್ಗ ; ಶಿವಮೊಗ್ಗದಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಮೂವರಿಗೆ ಗಾಯಗಳಾಗಿದ್ದು ಮೂವರಲ್ಲಿ ಒಬ್ಬರಿಗೆ ಹೆಡ್ ಇಂಜುರಿಯಾಗಿದ್ದು ಈ ಭೀಕರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಆಯನೂರು ಗೇಟ್ ಬಳಿ ಘಟನೆ ನಡೆದಿದೆ.
ಘಟನೆಯಲ್ಲಿ ಗಂಭೀರಗೊಂಡ ಬೈಕ್ ಸವಾರ ಫುಡ್ ಡೆಲಿವರಿ ಬಾಯ್ ಯಡವಟ್ಟಿನಿಂದ ಆದ ಸರಣಿ ಅಪಘಾತ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಮೂರು ಬೈಕ್, ಎರಡು ಕಾರುಗಳು ಜಖಂಗೊಂಡಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/19rQp8E9A9/
ಸಿಗ್ನಲ್ ಬ್ರೇಕ್ ಮಾಡಿದ ಫುಡ್ ಡೆಲಿವರಿ ಬಾಯ್ ಗೆ ಶರಾವತಿ ನಗರದ ಕಡೆಯಿಂದ ಬರುತ್ತಿದ್ದ ಎರಿಟಿಗಾ ಕಾರು ಫುಡ್ ಡೆಲಿವರಿ ಬಾಯ್ ಉಳಿಸಲು ಹೋಗಿ ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿ ಮತ್ತೊಂದೆಡೆ ರಸ್ತೆಯ ಸಿಗ್ನಲ್ ನಲ್ಲಿ ನಿಂತಿದ್ದ ವಾಹನ ಸವಾರರ ಮೇಲೆ ಹರಿದಿದೆ. ವಾಹನಗಳ ಮೇಲೆ ಹರಿದ ಪರಿಣಾಮ ಇಬ್ಬರಿಗೆ ಗಾಯವಾಗಿದೆ, ಒಬ್ಬನಿಗೆ ಗಂಭೀರವಾಗಿ ತಲೆಗೆ ಪೆಟ್ಟಾಗಿದೆ. ಬೈಕಿನಲ್ಲಿದ್ದ ಕಿರಣ್, ಅರುಣ್ ಪ್ರವೀಣ್ ಗಾಯಾಳುಗಳು ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಮತ್ತು ಕಾರನ್ನ ಠಾಣೆಗೆ ರವಾನಿಸಲಾಗಿದೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.