ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ಕಿಡಿಗೇಡಿಗಳು !

Written by malnadtimes.com

Published on:

ಕಡೂರು ; ಹಸುವಿನ ಕೆಚ್ಚಲು ಕತ್ತರಿ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗಡಿ ಗ್ರಾಮ ಚೌಳಹಿರಿಯೂರು ಸಮೀಪದ ತಮ್ಮಿಹಳ್ಳಿಯಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಶೇಖರಪ್ಪ ಎಂಬ ರೈತನಿಗೆ ಸೇರಿದ 20 ಹಸುಗಳನ್ನು ತೋಟದ ಮನೆಯ ಕೋಳಿ ಶೆಡ್‌ನಲ್ಲಿ ಕೂಡಿಹಾಕಲಾಗಿತ್ತು. ರಾತ್ರಿ ವೇಳೆ ಗೋಕಳ್ಳರು ತಂತಿ ಬೇಲಿಯನ್ನು ಕತ್ತರಿಸಿ, ಹಸುಗಳನ್ನು ಸಾಗಿಸಲು ಯತ್ನಿಸಿದ್ದಾರೆ. ಆದರೆ, ಸಾಗಾಣಿಕೆ ಸಾಧ್ಯವಾಗದಿದ್ದಾಗ, ಕಳ್ಳರು ಒಂದು ಹಸುವನ್ನು ಕೊಂದು, ಅದರ ಕೆಚ್ಚಲು ಜಾಗವನ್ನು ಕೊಯ್ದುಕೊಂಡು ಪರಾರಿಯಾಗಿದ್ದಾರೆ. ಬಳಿಕ ಹಸು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ.

ಈ ಕೃತ್ಯವು ಯೋಜಿತವಾಗಿ ನಡೆದಿದ್ದು, ಸ್ಥಳೀಯರ ಸಹಕಾರವಿಲ್ಲದೆ ಇಂತಹ ಕೃತ್ಯ ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿ ಯಗಟಿ ಠಾಣೆಗೆ ದೂರು ನೀಡಿದ್ದಾರೆ.

ಬೀರೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌, ಯಗಟಿ ಪಿಎಸ್‌ಐ ಮಂಜುನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.

Leave a Comment