ಸಿಗಂದೂರು ಸೇತುವೆಗೆ ಹೆಸರು ಮುಖ್ಯವಲ್ಲ ; ಹರತಾಳು ಹಾಲಪ್ಪ

Written by Mahesha Hindlemane

Published on:

ಹೊಸನಗರ ; ಹತ್ತಾರು ವರ್ಷದ ಸೇತುವೆಯ ಕನಸು ಈಗ ಉದ್ಘಾಟನೆ ಭಾಗ್ಯ ಕಾಣುತ್ತಿದೆ ಈ ಸಿಗಂದೂರು ಸೇತುವೆಗೆ ಹೆಸರಿಡುವುದು ಮುಖ್ಯವಲ್ಲ ಹತ್ತಾರೂ ವರ್ಷದ ಶ್ರಮ ಹಾಗೂ ಹೊಸನಗರ-ಸಾಗರ ಕ್ಷೇತ್ರದ ಜನರ ಕೃಪೆಯಿಂದ ಸಿಗಂದೂರು ತಾಯಿಯ ಆಶೀರ್ವಾದದಿಂದ ಜುಲೈ 14ರಂದು ಸೇತುವೆ ಉದ್ಘಾಟನೆ ಭಾಗ್ಯ ಕಾಣುತ್ತಿದೆ ಎಂದು ಮಾಜಿ ಸಚಿವ‌ ಹರತಾಳು ಹಾಲಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸೇತುವೆ ಉದ್ಘಾಟನೆಗೆ ಹೊಸನಗರ-ಸಾಗರ ಕ್ಷೇತ್ರದ ಎಲ್ಲ ಜನರು ಭಾಗವಹಿಸಬೇಕು. ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿದ್ದು ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡ ಸಂತ್ರಸ್ಥರು ಆರು ದಶಕಗಳ ಕನಸು ಈ ಸೇತುವೆ ನಿರ್ಮಾಣದಿಂದ ನನಸಾಗುವ ಸುಸಂದರ್ಭ ಒದಗಿ ಬಂದಿದೆ ಎಂದರು.

ಜುಲೈ 14ರಂದು ನಡೆಯಲಿರುವ ವೇದಿಕೆ ಕಾರ್ಯಕ್ರಮದ ಸ್ಥಳವನ್ನು ಗುರುತಿಸಲಾಗಿದ್ದು ನೆಹರು ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ 10 ಗಂಟೆಗೆ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ_ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಸ್ಥಳೀಯ ಶಾಸಕರು ಆಗಮಿಸಿ ಸೇತುವೆಯನ್ನು ಉದ್ಘಾಟಿಸಿ ನಂತರ ಸಿಗಂದೂರು ತಾಯಿಗೆ ಪೂಜೆ ಸಲ್ಲಿಸಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.

ಈ ಸೇತುವೆ ನಿರ್ಮಾಣದಲ್ಲಿ ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರವೂ ಕೈ ಜೋಡಿಸಿದ್ದರಿಂದ ಸೇತುವೆ ಮುಕ್ತಾಯ ಮಾಡಲು ಸಹಾಯವಾಗಿದ್ದು ಈ ಸೇತುವೆಗೆ ಸುಮಾರು 423 ಕೋಟಿ ರೂ. ಅನುದಾನದಲ್ಲಿ ಶರಾವತಿ ಹಿನ್ನೀರಿಗೆ ನಿರ್ಮಿತವಾದ ಅಂಬಾರಗೋಡ್ಲು-ಕಳಸವಳ್ಳಿ-ಸಿಗಂದೂರು ಸಂಪರ್ಕ ಸೇತುವೆ ಇದಾಗಿದೆ ಎಂದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಬಿ.ವೈ ರಾಘವೇಂದ್ರರವರು ಸಂಸದರಾದ ಮೇಲೆ ಹೊಸನಗರ-ಸಾಗರ ಕ್ಷೇತ್ರಗಳಲ್ಲಿ ಅನೇಕ ಸೇತುವೆಗಳ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿದ್ದು ಒಂದೆರಡು ವರ್ಷಗಳಲ್ಲಿ ಉದ್ಘಾಟನೆ ಭಾಗ್ಯ ಕಾಣಲಿದೆ ಎಂದರು.

ಜುಲೈ 14ನೇ ಗುರುವಾರ ಸಾಗರದಲ್ಲಿ ನಡೆಯುವ ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಪಕ್ಷತೀತರಾಗಿ ಎಲ್ಲರೂ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.

ಈ ಸುದ್ಧಿಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಟಿ.ಡಿ ಮೇಘರಾಜ್, ಎನ್.ಆರ್ ದೇವಾನಂದ್, ಉಮೇಶ್ ಕಂಚುಗಾರ್, ಶ್ರೀಪತಿರಾವ್, ಎ. ವಿ ಮಲ್ಲಿಕಾರ್ಜುನ, ಹಾಲಗದ್ದೆ ಉಮೇಶ್, ಮಂಡಾನಿ ಮೋಹನ್, ಸತ್ಯನಾರಾಯಣ, ಕಾವೇರಿ ವಿಜಯಕುಮಾರ್, ಚಾಲುಕ್ಯ ಬಸವರಾಜ್, ಚಿಕ್ಕನಕೊಪ್ಪ ಶ್ರೀಧರ, ನಾಗರ್ಜುನ ಸ್ವಾಮಿ, ಗಾಯಿತ್ರಿ ನಾಗರಾಜ್ ಕೃಷ್ಣವೇಣಿ, ಶಶಿಕಲಾ ಅನಂತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment