ರಿಪ್ಪನ್‌ಪೇಟೆ ; ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿವಮೊಗ್ಗ-ಹೊಸನಗರ ಸಿದ್ದಪ್ಪನಗುಡಿ ಲಿಂಕ್ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿ ಓಡಾಡದಂತಾಗಿದೆ.
ಮೊನ್ನೆ ದಿನ ಈ ಸಂಪರ್ಕ ರಸ್ತೆಯ ನಿವಾಸಿಯೊಬ್ಬರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಕರೆತರಲು ಹೋದಾಗ ಹೊಂಡ ಗುಂಡಿ ಬಿದ್ದು ಭಾರಿ ಮಳೆಯಿಂದಾಗಿ ರಸ್ತೆ ಕೆಸರುಗದ್ದೆಯಂತಾಗಿ ರೋಗಿಯನ್ನು ಕರೆತರಲು ಹೋದ ಆಟೋ ಕೆಸರಿನಲ್ಲಿ ಸಿಕ್ಕಿಕೊಂಡು ಗಂಟೆಗಟ್ಟಲೆ ಒದ್ದಾಡಿ ಕೊನೆಗೆ ರೋಗಿಯನ್ನು ಹೊತ್ತ ತರುವುದರಲ್ಲಿ ಹರಸಾಹಸ ಪಡುವಂತಾಗಿ ಹೈರಣಾಗಿದ್ದಾರೆ.
ಇನ್ನಾದರೂ ಈ ಕಚ್ಚಾ ರಸ್ತೆಗೆ ಜಲ್ಲಿ ಹಾಕಿ ಸಾರ್ವಜನಿಕರಿಗೆ ಮುಕ್ತವಾಗಿ ಓಡಾಡಲು ಸುಸಜ್ಜಿತ ರಸ್ತೆ ಮಾಡಿಕೊಡುವಂತೆ ಲಿಂಕ್ ರಸ್ತೆಯ ನಿವಾಸಿಗಳು ಆಗ್ರಹಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.