ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ ; ಬೇಳೂರು ಗೋಪಾಲಕೃಷ್ಣ

Written by malnadtimes.com

Published on:

RIPPONPETE ; ನ್ಯಾಯಾಲಯದ ಆದೇಶವನ್ನು ಗೌರವಿಸುವುದು ನಮ್ಮ ಮೂಲ ಉದ್ದೇಶ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಹೋಗಲು ಅವಕಾಶವಿದೆ ನ್ಯಾಯಾಲಯದ ಅದೇಶದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. 136 ಜನ ಎಂ.ಎಲ್.ಎ.ಗಳು ಗಟ್ಟಿಯಾಗಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ  ಪರವಾಗಿ ನಿಂತಿದ್ದೇವೆಂದು ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿ, ತೀರ್ಪು ಪ್ರಕಟಗೊಂಡ ಹಿನ್ನಲೆಯಲ್ಲಿ ನಾನು ಬೆಂಗಳೂರಿಗೆ ತೆರಳುತ್ತಿರುವುದಾಗಿ ತಿಳಿಸಿ ನಮ್ಮ ಸರ್ಕಾರ ಸದೃಡವಾಗಿದೆ. ಶಾಸಕರು ಒಮ್ಮತದಿಂದ ಇದ್ದು ಯಾವುದೇ ಕಾರಣದಿಂದಲೂ ಬೇರೆಯವರಿಗೆ ಸರ್ಕಾರ ಮಾಡಲು ಬಿಡುವ ಮಾತೇ ಇಲ್ಲ ಎಂದು ತಿಳಿಸಿ, ನಾವು 136 ಜನ ಶಾಸಕರುಗಳಿದ್ದು ಎಲ್ಲರೂ ಒಂದೇ ನಿರ್ಧಾರದಿಂದ ಇದ್ದೇವೆ ನಮ್ಮ ನಾಯಕರು ಸಿದ್ದರಾಮಯ್ಯನವರೇ ಎಂದು ಹೇಳಿ ರಾಜ್ಯ ಉಚ್ಚನ್ಯಾಯಾಲಯದ ತೀರ್ಪು ನೀಡಲಾದರೂ ಕೂಡಾ ಸುಪ್ರೀಂ ಕೋರ್ಟ್‌ಗೆ ಹೋಗಲು ಅವಕಾಶವಿದೆ ಎಂದು ಹೇಳಿ, ಅಲ್ಲಿ ನಮಗೆ ಜಯ ದೊರೆಯುವುದೆಂಬ ಆಶಾಭಾವನೆ ನಮ್ಮದಾಗಿದೆ ಎಂದರು.

ಇನ್ನೂ ಅಭಿವೃದ್ದಿಗೆ ಪತ್ರಕರ್ತರಲ್ಲಿ ಚರ್ಚಿಸಿದ ಶಾಸಕರು ಕ್ಷೇತ್ರ ವ್ಯಾಪ್ತಿಯ ಸಾಗರ ಆನಂದಪುರ ಮತ್ತು ಹೊಸನಗರ ವ್ಯಾಪ್ತಿಯಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ವಿಭಾಗೀಯ ಅಸ್ಪತ್ರೆಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲಾಗಿದೆ. ಇನ್ನೂ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣದಲ್ಲಿ ಆರೋಗ್ಯ ಕಾರ್ಯಕರ್ತೆಯರನ್ನು ನೇಮಿಸುವ ಬಗ್ಗೆ ಚರ್ಚಿಸಲಾಗಿದ್ದು ಖಾಸಗಿ ಏಜೆನ್ಸಿಗಳ ಮೂಲಕ ಅರೋಗ್ಯ ಕಾರ್ಯಕರ್ತೆಯನ್ನು ನೇಮಿಸುವುದಾಗಿ ವಿವರಿಸಿ ಯಾರಾದರು ತರಬೇತಿ ಪಡೆದವರು ಅಥವಾ ನಿವೃತ್ತರಾಗಿರುವ ಅನುಭವಿಗಳಿದ್ದರೆ ಕಳುಹಿಸಿ ನಾನೇ ನನ್ನ ವೈಯಕ್ತಿಕವಾಗಿ ಮಾಸಿಕ ವೇತನ ನೀಡುತ್ತೇನೆ ಅಂತವರು ಇದ್ದರೆ ಕಳುಹಿಸಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಈ ಮಧುಸೂದನ್, ಉಮಾಕರ್, ಆಸಿಫ್‌ಭಾಷಾ, ಶ್ರೀಧರ, ಪ್ರವೀಣ್ ಹೆದ್ದಾರಿಪುರ, ಹಸನಬ, ಇನ್ನಿತರ ಹಲವರು ಹಾಜರಿದ್ದರು.

Leave a Comment