HOSANAGARA ; ತಮ್ಮ ಮೈದುನನ ನೂತನ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೈದರಾಬಾದ್‌ಗೆ ತಮ್ಮ ಗಂಡ ಹಾಗೂ ಮಗಳೊಂದಿಗೆ ಡಿ.18ರಂದು ತೆರಳಿದ್ದ ತಾಲೂಕಿನ ಗೋರಗೋಡು ವಾಸಿ ಪ್ರತಿಭಾ ಕೋಂ ಶೇಷಪವನ್ ಸತ್ಯವೋಲು ಎಂಬುವವರ ವಾಸದ ಮನೆಯ ಹೆಂಚು ತೆಗೆದು ಮನೆಯ ಹಿಂಬಾಗಿನ ಮೂಲಕ ಒಳ ಪ್ರವೇಶಿರುವ ಕಳ್ಳರು ಮನೆಯಲ್ಲಿದ್ದ ಸುಮಾರು 9.02 ರೂ. ಮೌಲ್ಯದ ವಿವಿಧ ಬಗೆಯ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ ಎಂದು ಪ್ರತಿಭಾ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿ.25ರ ಸಂಜೆ ಹೈದರಾಬಾದ್‌ನಿಂದ ವಾಪಸ್ಸಾದಾಗ ಮನೆಯ ಒಳ ಹೋಗಿ ನೋಡಿದಾಗ ನಡುಮನೆಯ ಬಾಗಿಲು ಮುರಿದಿದ್ದು, ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಮನೆಯ ಹಿಂಬಾಗಿಲು ಸಂಪೂರ್ಣವಾಗಿ ತೆರದಿದ್ದು, ಬಾತ್ ರೂಂ ಮನೆಯ ಹೆಂಚು ತೆಗೆದಿದ್ದು, ಮನೆಯಲ್ಲಿನ ಗಾಡ್ರೇಜ್ ಬೀರು ಮುರಿದಿರುವಾಗಿ ದೂರಿನಲ್ಲಿ ತಿಳಿಸಿದ್ದಾರೆ.
ತಲಾ 12 ಗ್ರಾಂನ 4 ಬಳೆ, ತಲಾ 10 ಗ್ರಾಂನ 2 ಕಡಗ, 12 ಗ್ರಾಂನ ಬಿಳಿ ಹರಳಿನ ಬಳೆ, 12 ಗ್ರಾಂನ ಒಂದು ಮಣಿಸರ, 5 ಗ್ರಾಂನ ಕರಿಮಣಿ ಸರ, 4 ಗ್ರಾಂ ಬಂಗಾರದ ಸರ,5 ಗ್ರಾಂ ಜುಮುಕಿ, 6 ಗ್ರಾಂನ ಕೆಂಪು ಹರಳಿನ ಜುಮುಕಿ, 3 ಗ್ರಾಂ ಬಿಳಿ ಹರಳಿನ ಓಲೆ, 2 ಗ್ರಾಂನ ಮಕ್ಕಳ ಜುಮುಕಿ, 3 ಗ್ರಾಂಮ 18 ಕ್ಯಾರೇಟಿನ ಮಕ್ಕಳ ಚೈನ್, 3 ಗ್ರಾಮಿನ 0.15 ಕ್ಯಾರೆಟ್‌ನ ವಜ್ರದ ಒಲೆ, 2 ಗ್ರಾಂ ತೂಕದ ಒಟ್ಟು 4 ಮೂಗುತಿಗಳು, ಒಂದು ಜೊತೆ 0.15 ಕ್ಯಾರೇಟಿನ ವಜ್ರದ ಹರಳಿನ ಓಲೆ, 0.15 ಕ್ಯಾರೇಟ್‌ನ ವಜ್ರ ಹರಳಿನ ಓಲೆ, 30 ಗ್ರಾಂನ ಚಿನ್ನದ ಕೋಟಿಂಗ್‌ನ ಬೆಳ್ಳಿ ಸರ, ಒಂದು ಮುತ್ತಿನ ಸರ ಆಗು ಓಲೆ ಸೆಟನ್ನು ಯಾರೋ ಅಪರಿಚಿತರು ಕಳ್ಳತನ ಮಾಡಿರುವುದಾಗಿ ದೂರು ದಾಖಲಾಗಿದೆ.
ಸೆಕ್ಷನ್ 331(3), 331(4) ಹಾಗೂ ಬಿಎನ್‌ಎಸ್ 305 ಅಡಿಯಲ್ಲಿ ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಳಿದ್ದಾರೆ.