ಅಮ್ಮನಘಟ್ಟ ಜಾತ್ರೆ ಮಂಡಕ್ಕಿ ವ್ಯಾಪಾರಕ್ಕೆ ಹೋದಾಗ ಮನೆಗೆ ನುಗ್ಗಿ ನಗ-ನಾಣ್ಯ ದೋಚಿದ ಕಳ್ಳರು !

Written by Mahesha Hindlemane

Published on:

HOSANAGARA ; ತಾಲ್ಲೂಕಿನ ವರಕೋಡು ಗ್ರಾಮದಲ್ಲಿ ಮನೆಗೆ ನುಗ್ಗಿ ಸುಮಾರು 56 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ 20 ಸಾವಿರ ನಗದನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಹಾಡಹಗಲೇ ಹನುಮಂತ ಕಾಮತ್‌ರವರ ಮನೆಯ ಹಿಂಬಾಗಿಲಿನ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ‌.

ಮಂಗಳವಾರ ಬೆಳಗ್ಗೆ ಹನುಮಂತ ಕಾಮತ್‌ರವರು ಪತ್ನಿ ಸಹಿತವಾಗಿ ಅಮ್ಮನಘಟ್ಟ ಜಾತ್ರೆಗೆ ಮಂಡಕ್ಕಿ ವ್ಯಾಪಾರಕ್ಕೆ ಹೋಗಿದ್ದು ಸುಮಾರು ಸಂಜೆ 4 ಗಂಟೆಯ ಸಂದರ್ಭದಲ್ಲಿ ಮನೆಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲಿನ ಲಾಕ್ ಮುರಿದು ದೇವರ ಕೊಣೆಯಲ್ಲಿದ್ದ ಗಾಡ್ರೇಜ್ ಬೀಗ ಮುರಿದು 4 ಗ್ರಾಂನ ಒಂದು ಮತ್ತು 2 ಗ್ರಾಂನ ಎರಡು ಚಿನ್ನದ ಉಂಗುರ ಒಟ್ಟು ಸುಮಾರು 56,000 ಬೆಲೆ ಬಾಳುವ ಬಂಗಾರ ಹಾಗೂ ವ್ಯಾಪಾರ ಮಾಡಿ ಇಟ್ಟಿದ್ದ 20 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆಂದು ಹನುಮಂತ ಕಾಮತ್‌ರವರು ದೂರು ನೀಡಿದ್ದಾರೆ.

ಪೊಲೀಸ್ ತನಿಖೆ ಚುರುಕು :

ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೇಲ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರಂಜಿತ್‌ಕುಮಾರ್, ಸುನೀಲ್, ಮಹೇಶ್ ಸಂದೀಪ, ಜಗದೀಶ್ ಹಾಗೂ ಇತ್ತಿತರ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ‌.

Leave a Comment