ತೀರ್ಥಹಳ್ಳಿ: ನಟಮಿತ್ರರು ರಂಗ ತಂಡದಿಂದ ಆಗಸ್ಟ್ 24 ಮತ್ತು 25 ರಂದು ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಸಂಜೆ 6:30 ಕ್ಕೆ “ಆ ಊರು ಈ ಊರು” ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿ ಹೇಳಿದರು.
ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ನಾಟಕದ ವಿಶೇಷವೆಂದರೆ 3 ವರ್ಷದ ಮಗುವಿನಿಂದ ಹಿಡಿದು 73 ವರ್ಷದವರೆಗಿನ ಎಲ್ಲರೂ ಇದ್ದರೆ, ನಾಟಕ ವೀಕ್ಷಣೆಗೆ ಕೇವಲ 300 ಜನರಿಗೆ ಮಾತ್ರ ಅವಕಾಶವಿರುತ್ತದೆ, ನಾಟಕದ ನಂತರ ಪ್ರೇಕ್ಷಕರ ಜೊತೆ ಸಂವಾದ ಕಾರ್ಯಕ್ರಮ ನಡೆಸಲಿದ್ದೇವೆ ಎಂದರು.
ನಾಟಕ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಮಾತನಾಡಿ ಜಿ.ಬಿ.ಜೋಶಿಯವರು 1934 ರಲ್ಲಿ ಬಾಗಲಕೋಟೆಯಲ್ಲಿ ನಡೆದ ನೈಜ ಘಟನೆ ಆಧಾರಿಸಿ ಬರೆದ ಮೂಕ ಬಲಿ ಮುಖ್ಯ ನಾಟಕದ ಒಂದು ಭಾಗ ಆ ಊರು, ಈ ಊರು ನಾಟಕ ವಾಗಿದೆ ಎಂದರು.
ಈ ನಾಟಕ ಹಾಲಳ್ಳಿ ಹಾಗೂ ನಾಗರಕೋಟೆ ಅನ್ನೋ ಎರಡು ಊರುಗಳ ನಡುವೆ ಎರಡು ಬ್ರಾಹ್ಮಣ ಮನೆತನಗಳ ನಡುವೆ ನಡೆಯುವ ಸಾಂಸಾರಿಕ ಕಥನವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಟಕದ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ, ಸಹ ನಿರ್ದೇಶಕ ಶಿವಕುಮಾರ್, ಕಲಾವಿದರಾದ ಆಶಾ ಡೇನಿಯಲ್, ಸುಬ್ರಹ್ಮಣ್ಯ, ನಿತಿನ್ ಹೆಗಡೆ, ನಿರಂಜನ್, ಮನೋಜ್ ಜಾದವ್, ಅದಿತ್ಯ , ನಿರೀಕ್ಷಾ ಶೆಟ್ಟಿ,ಚೇತನ್, ಕಾರ್ತೀಕ್ ಕುಮಾರ್ ಮುಂತಾದದವರಿದ್ದರು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.