ರಿಪ್ಪನ್‌ಪೇಟೆ ; ಪಟ್ಟಣದಲ್ಲಿ ಭಾನುವಾರ ಮುಂಜಾನೆ ಗೋಗಳ್ಳರು ಅಕ್ರಮವಾಗಿ ಗೋವುಗಳನ್ನು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಅಟ್ಟಹಾಸ ಮೆರೆದಿದ್ದಾರೆ.
ಹೊಸನಗರ-ಶಿವಮೊಗ್ಗ ರಸ್ತೆಯಲ್ಲಿ ನಾಲ್ಕು ಗೋವುಗಳನ್ನು ಟಾಟಾಏಸ್ (KA40B1570) ವಾಹನದಲ್ಲಿ ತುಂಬಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಗೋವೊಂದು ವಾಹನದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಾಗ ವಾಹನ ಚಾಲಕ ಮತ್ತು ಗೋಗಳ್ಳರು ಅದನ್ನು ಗಮನಿಸದೆ ಸುಮಾರು ಎರಡ್ಮೂರು ಕಿ.ಮೀ. ದೂರ ಎಳೆದುಕೊಂಡು ಬಂದ ಹಿನ್ನಲೆಯಲ್ಲಿ ಗೋವಿನ ಮೈಮೇಲಿನ ಚರ್ಮ ಕಿತ್ತು ಹೋಗಿ ರಸ್ತೆಯ ತುಂಬ ರಕ್ತದ ಕೋಡಿ ಹರಿದ ವಿದ್ರಾವಕ ಘಟನೆ ನಡೆದಿದೆ.
ರಿಪ್ಪನ್‌ಪೇಟೆ ಕಡೆಯಿಂದ ಅರಸಾಳು ಕಡೇಗೆ ಗೋವುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯನ್ನಾದರಿಸಿ ರಿಪ್ಪನ್‌ಪೇಟೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರಾಜುರೆಡ್ಡಿ ನೇತೃತ್ವದ ತಂಡ ವಾಹನವನ್ನು ಬೆನ್ನಟ್ಟಿ ಅರಸಾಳು ಬಸ್ ನಿಲ್ದಾಣದ ಬಳಿ ವಾಹನ ಸಹಿತ ಇಬ್ಬರ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಸಿಡ್ಲಗಟ್ಟ ಅನಿಲ್ ಬಿನ್ ಲಘಮಪ್ಪ (27) ಹಾಗೂ ಚಿಂತಾಮಣಿ ಸುರೇಶ್ ಬಿನ್ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ.

ಈ ಪತ್ತೆ ಕಾರ್ಯದಲ್ಲಿ ಪಿಎಸ್‌ಐ ರಾಜುರೆಡ್ಡಿ ಮತ್ತು ಸಿಬ್ಬಂದಿ ವರ್ಗ ತೊಡಗಿದ್ದರು.
ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿ ವಶಕ್ಕೆ !
ರಿಪ್ಪನ್‌ಪೇಟೆ ; ಅಕ್ರಮವಾಗಿ ಜಂಬಿಟ್ಟಿಗೆ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನಾದರಿ ಹೊಸನಗರ ತಹಸೀಲ್ದಾರ್ ಭರತ್‌ರಾಜ್ ನೇತೃತ್ವದ ತಂಡ ರಿಪ್ಪನ್‌ಪೇಟೆ ಬಳಿ ಲಾರಿ ತಡೆದು ತಪಾಸಣೆ ಮಾಡುವುದರೊಂದಿಗೆ ವಶಪಡಿಸಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ.

ಆನಂದಪುರ ಕಡೆಯಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ತೀರ್ಥಹಳ್ಳಿ ಕಡೆ ತೆರಳುತ್ತಿದ್ದ ಜಂಬಿಟ್ಟಿಗೆ ಲಾರಿ (KA21A2083) ವಾಹನವನ್ನು ಗಸ್ತುವಿನಲ್ಲಿದ್ದ ಹೊಸನಗರ ತಹಸೀಲ್ದಾರ್ ಭರತ್‌ರಾಜ್ ತಡೆದು ಪರಿಶೀಲನೆ ನಡೆಸುವ ಮೂಲಕ ಲಾರಿಯನ್ನು ವಶಕ್ಕೆ ಪಡೆದು ರಿಪ್ಪನ್‌ಪೇಟೆ ಠಾಣೆಗೆ ಒಪ್ಪಿಸಿರುತ್ತಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





