ನಾಯಿಗಳ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಜಿಂಕೆ ರಕ್ಷಣೆ !

Written by malnadtimes.com

Published on:

SHIVAMOGGA | ನಾಯಿಗಳ (Dog’s) ದಾಳಿಗೆ ಸಿಲುಕಿ ಗಾಯಗೊಂಡಿದ್ದ ಜಿಂಕೆ (Deer)ಯೊಂದನ್ನು ಗ್ರಾಮಸ್ಥರೇ ರಕ್ಷಿಸಿ, ಅರಣ್ಯ ಇಲಾಖೆ (Forest Department) ಸಹಾಯದೊಂದಿಗೆ ಕಾಡಿಗೆ ಬಿಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಚೋರಡಿ ಸಮೀಪದ ಕೊರಗಿ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಶೃಂಗೇರಿ ಶಾರದಾ ಮಾತೆ ಪಾದತಲದಲ್ಲಿ ನಡೆದ ‘ಶೃಂಗ ಸಂಭ್ರಮ’ದಲ್ಲಿ ಹೊಸನಗರ ಕೊಡಚಾದ್ರಿ ಕಾಲೇಜಿಗೆ ಚಾಂಪಿಯನ್ ಪಟ್ಟ !

ಕೊರಗಿ ಗ್ರಾಮದಲ್ಲಿ ಜಿಂಕೆ ಕಾಡಿನಿಂದ ತಪ್ಪಿಸಿಕೊಂಡು ಗ್ರಾಮದ ಬಳಿ ಬಂದಿತ್ತು, ಈ ವೇಳೆ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿದ್ದವು. ಕೂಡಲೇ ಇದನ್ನು ಗಮನಿಸಿದ ಕೊರಗಿ ಗ್ರಾಮದ ಸುರೇಶ್ ಮತ್ತಿತರರು ಜಿಂಕೆಯನ್ನು ನಾಯಿಗಳ ಹಿಂಡಿನಿಂದ ಬಿಡಿಸಿದ್ದಾರೆ. ಅಷ್ಟರಲ್ಲಾಗಲೇ ಜಿಂಕೆ ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದು ತಕ್ಷಣ ಗ್ರಾಮಸ್ಥರು ಚೋರಡಿ ಆನಂದಪುರ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು.

ತಕ್ಷಣ ಕಾರ್ಯಕ್ರಮದ ಅರಣ್ಯ ಇಲಾಖೆ ಸಿಬ್ಬಂದಿ ಕೊರಗಿ ಗ್ರಾಮಕ್ಕೆ ಪಶು ವೈದ್ಯಾಧಿಕಾರಿಗಳನ್ನು ಕರೆಸಿ ಗಾಯಗೊಂಡಿದ್ದ ಜಿಂಕೆಗೆ ಚಿಕಿತ್ಸೆ ಕೊಡಿಸಿದರು. ಬಳಿಕ ಜಿಂಕೆಯನ್ನು ಕೊರಗಿ ಗ್ರಾಮದ ಅರಣ್ಯ ವ್ಯಾಪ್ತಿಯೊಳಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಶೇ. 93 ರಷ್ಟು ಭರ್ತಿಯಾದ ಲಿಂಗನಮಕ್ಕಿ ಜಲಾಶಯ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

ಈ ಸಂದರ್ಭದಲ್ಲಿ ಆನಂದಪುರ ವಲಯ ಅರಣ್ಯಾಧಿಕಾರಿ ರವಿಕುಮಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Leave a Comment