ಬೆಕ್ಕು ಕಚ್ಚಿ ಮಹಿಳೆ ಸಾವು !

Written by malnadtimes.com

Published on:

SHIKARIPURA | ಮನೆಯಲ್ಲಿ ಮುದ್ದಾಗಿ ಸಾಕಿದ್ದ ಬೆಕ್ಕು (Cat) ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ತರಲಘಟ್ಟ (Tharalaghatta) ಗ್ರಾಮದಲ್ಲಿ ನಡೆದಿದ್ದು, ಗಂಗೀಬಾಯಿ (50) ಮೃತ ದುರ್ಧೈವಿ.

WhatsApp Group Join Now
Telegram Group Join Now
Instagram Group Join Now

ನಾಗರಹಳ್ಳಿಯಲ್ಲಿ ವಿಜೃಂಭಣೆಯಿಂದ ಜರುಗಿದ ನಾಗರ ಪಂಚಮಿ ಜಾತ್ರಾ ಮಹೋತ್ಸವ

ಏನಿದು ಘಟನೆ ?

ಕಳೆದ ಎರಡು ತಿಂಗಳ ಹಿಂದೆ ಗಂಗೀಬಾಯಿಗೆ ಬೆಕ್ಕು ಕಚ್ಚಿದೆ. ಆದರೆ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದ ಹಿನ್ನೆಲೆಯಲ್ಲಿ ಬೆಕ್ಕಿನ ಜೊಲ್ಲು ರಸದದಿಂದ ಹರಡುವ ರೇಬಿಸ್ ಕಾಯಿಲೆ ಬಂದು ಮಹಿಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೊದಲು ತರಲಘಟ್ಟದ ಕ್ಯಾಂಪ್ ನಲ್ಲಿ ಯುವಕನೋರ್ವನ ಮೇಲೆ ಬೆಕ್ಕು ದಾಳಿ ಮಾಡಿತ್ತು. ಆದರೆ, ಯುವಕ ಸೂಕ್ತ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಆರೋಗ್ಯವಾಗಿದ್ದರು. ಈಗ ಪುನಃ ಇದೇ ಕ್ಯಾಂಪ್‌ನಲ್ಲಿ ಗಂಗೀಬಾಯಿ ಅವರಿಗೆ ಕಚ್ಚಿದ್ದು, ಇವರು ಚಿಕಿತ್ಸೆ ಪಡೆಯದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ.

ಸಾಕಿದ್ದ ಬೆಕ್ಕು ಮಹಿಳೆಯ ಕಾಲಿಗೆ ಕಚ್ಚಿತ್ತು. ಕೂಡಲೇ ವೈದ್ಯರನ್ನು ಸಂಪರ್ಕಿಸಿದಾಗ ಒಂದು ಇಂಜೆಕ್ಷನ್ ಮಾಡಿ, ಇನ್ನೂ 4 ಇಂಜೆಂಕ್ಷನ್ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಒಟ್ಟಾರೆ 5 ಇಂಜೆಕ್ಷನ್ ತೆಗೆದುಕೊಳ್ಳಬೇಕಿದ್ದ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಅನಾರೋಗ್ಯ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಆಕೆ ಆಸ್ಪತ್ರೆಗೆ ಹೋಗಿಲ್ಲ. ಆದರೆ, ಭತ್ತದ ನಾಟಿ ಸೇರಿದಂತೆ ದೈನಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಮಹಿಳೆ ಸಾಕಿದ್ದ ಬೆಕ್ಕಿಗೆ ಅವರ ಮನೆಯಲ್ಲಿದ್ದ ಇನ್ನೊಂದು ನಾಯಿ ಕಚ್ಚಿತ್ತು ಎಂದು ತಿಳಿದುಬಂದಿದೆ‌. ಆದರೆ, ನಾಯಿಗೆ ಹುಚ್ಚು ಬಂದ ಹಿನ್ನೆಲೆಯಲ್ಲಿ ಅದನ್ನು ಸಾಯಿಸಲಾಗಿತ್ತು. ಆದರೆ, ನಾಯಿ ಕಚ್ಚಿದ್ದರಿಂದ ಬೆಕ್ಕಿಗೂ ರೇಬಿಸ್ ರೋಗ ಬಂದಿದೆ. ಈಗ ಬೆಕ್ಕು ಕಚ್ಚಿದ್ದರಿಂದ ಮಹಿಳೆಗೆ ಬೇಗನೇ ರೇಬಿಸ್ ರೋಗ ತಗುಲಿ ಸಾವಿಗೀಡಾಗಿದ್ದಾರೆ.

ಬೆಕ್ಕು ಕಚ್ಚಿ ಮಹಿಳೆ ಸಾವು
ಬೆಕ್ಕು ಕಚ್ಚಿ ಮಹಿಳೆ ಸಾವು

ಇನ್ನು ಮೊನಚಾದ ಹಲ್ಲುಗಳುಳ್ಳ ಹಾಗೂ ಬೇಟೆಯಾಡುವ ಸಾಕು ಪ್ರಾಣಿಗಳ ಕಚ್ಚುವಿಕೆಯಿಂದಲೂ ರೇಬಿಸ್ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಗಂಗೂಬಾಯಿ ಅವರು ರೇಬಿಸ್ ರೋಗ ಸಂಪೂರ್ಣವಾಗಿ ಉಲ್ಬಣಗೊಂಡು ಗುಣಪಡಿಸಲಾಗದ ಸ್ಥಿತಿ ತಲುಪಿದ ನಂತರ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದುದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಂಗೀಬಾಯಿ ಕೊನೆಯುಸಿರೆಳೆದಿದ್ದಾರೆ.

Leave a Comment