ರಸ್ತೆ ಪಕ್ಕ ಕಸ ಎಸೆದ ಮಹಿಳೆ ; ಪ್ರಶ್ನಿಸಿದಕ್ಕೆ ಯುವಕನಿಗೆ ಜೀವ ಬೆದರಿಕೆ !

Written by malnadtimes.com

Published on:

HOSANAGARA ; ಪಟ್ಟಣದಲ್ಲಿ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಬಿಸಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಜೀವ ಬೆದರಿಕೆ ಹಾಕಿದ ಘಟನೆ ಸೋಮವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಹೊರವಲಯದ ಕಾಳಿಕಾಪುರ ರಸ್ತೆಯಲ್ಲಿ ಮಹಿಳೆಯೊಬ್ಬರು ರಸ್ತೆ ಬದಿ ಕಸ ಎಸೆದಿದ್ದನ್ನು ಸ್ಥಳೀಯ ಯುವಕ ಕವೀಶ್ ಪ್ರಶ್ನಿಸಿದ್ದು, ವಿಡಿಯೋ ಮಾಡಿಕೊಂಡಿದ್ದಾರೆ. ‘ಇಲ್ಲಿ ಕಸ ಎಸೆಯಬೇಡಿ ದುರ್ನಾತ ಬೀರುತ್ತದೆ. ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತದೆ’ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆ ಮತ್ತು ಆಕೆಯ ಪತಿ ಸಲ್ಮಾನ್ ಜಗಳವಾಡಿ, ಅವಾಚ್ಯ ಪದಗಳಿಂದ ನಿಂದಿಸಿ ಕವೀಶ್ ಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ‌.

ಈ ಘಟನೆ ಸಂಬಂಧ ಕವೀಶ್ ಹೊಸನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Comment