ಗಾಂಜಾ ಸೇವಿಸಿ ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ

0
4029

ಹೊಸನಗರ: ಬಟ್ಟೆಮಲ್ಲಪ್ಪದಲ್ಲಿ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತ್ತ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಹೊಸನಗರ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಘಟನಾ ವಿವರ:

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಟ್ಟೆಮಲ್ಲಪ್ಪದಲ್ಲಿ ಮಂಗಳವಾರ ರಾತ್ರಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬೆಳಗಿನ ಜಾವ 2.30ರ ಸಮಯದಲ್ಲಿ ಬಟ್ಟೆಮಲಪ್ಪ ಸರ್ಕಲ್ ನ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ಅಸಭ್ಯವಾಗಿ ವರ್ತಿಸುತ್ತಾ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಆತನು ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿದ ರೀತಿಯಲ್ಲಿ ವರ್ತಿಸುತ್ತಿರುವಂತೆ ಕಂಡು ಬಂದಿದೆ. ಆತನನ್ನು ಹಿಡಿದು ವಿಚಾರಿಸಿದಾಗ ತಾಲೂಕಿನ ದೊಂಬೆಕೊಪ್ಪ ಗ್ರಾಮದ ವಾಸಿಯಾದ ಮಣಿಕಂಠ @ ಕಾಗೆಮಣಿ (30) ಎಂದು ತಿಳಿಸಿದ್ದು, ಆತನಿಗೆ ಇಲ್ಲಿ ಯಾಕೆ ತಿರುಗುಡಾತ್ತಿದ್ದೀಯ? ಎಂದು ಪೊಲೀಸರು ವಿಚಾರಿಸಿದಾಗ ನಾನು ಗಾಂಜಾ ಸೇವನೆ ಮಾಡಿ ತಿರುಗಾಡುತ್ತಿರುವುದಾಗಿ ತಿಳಿಸಿದ್ದಾನೆ.

ಇವನು ಗಾಂಜಾ ಸೇವನೆ ಮಾಡಿರುವ ಅಮಲಿನಲ್ಲಿ ಸಾರ್ವಜನಿಕರಿಗೆ ಉಪಟಳ ನೀಡಬಹುದೆಂಬ ಅನುಮಾನದ ಮೇರೆಗೆ ಆತನನ್ನು ಹೊಸನಗರ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿ ನೀಡಿದ ವರದಿಯನ್ನು ಸ್ವೀಕರಿಸಿದ ಪೊಲೀಸರು ಈತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ವೈದ್ಯಾಧಿಕಾರಿಗಳವರಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಜಾಹಿರಾತು

LEAVE A REPLY

Please enter your comment!
Please enter your name here