ಗೋರಕ್ಷಕರ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ ಪ್ರಮುಖ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

0
41324

ತೀರ್ಥಹಳ್ಳಿ: 3 ದಿನಗಳ ಹಿಂದೆ ಮೇಳಿಗೆ ಸಮೀಪದಿಂದ ದನಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವಾಗ ತಡೆಯಲು ಯತ್ನಿಸಿದ ತೀರ್ಥಹಳ್ಳಿ ಕಿತ್ತಿನಗದ್ದೆ ನಿವಾಸಿಗಳಾದ ಯುವಕರು ಚರಣ್ ಮತ್ತು ಕಿರಣ್ ಸಹೋದರರ ಮೇಲೆ ವಾಹನವನ್ನು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಯುವಕರು ಗಂಭೀರ ಗಾಯಗೊಂಡು ಓರ್ವನು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೊಂದು ಗಂಭೀರ ಪ್ರಕರಣವಾಗಿ ತೀರ್ಥಹಳ್ಳಿ ಪೊಲೀಸರಿಗೆ ಸವಾಲಾಗಿತ್ತು‌.

ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳಾದ ನವೀದ್ ಮತ್ತು ಶ್ರೀಧರಗೌಡ ಎಂಬುವರ ಹೆಡೆಮುರಿ ಕಟ್ಟಿ ಬಂಧಿಸಲಾಗಿತ್ತು. ಪ್ರಮುಖ ಆರೋಪಿಗಳಾಗಿದ್ದ ಶಿವಮೊಗ್ಗ ಟಿಪ್ಪುನಗರದ ಕಸಾಯಿ ಖಾನೆಯನ್ನು ಅಕ್ರಮವಾಗಿ ನಡೆಸುತ್ತಿದ್ದ ಅಫ್ರೋಜ್ ಮತ್ತು ಅನ್ವರ್ ಎಂಬುವವರನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾ ಅಧಿಕಾರಿಗಳಾದ ಬಿ.ಎಂ ಲಕ್ಷ್ಮಿ ಪ್ರಸಾದ್ ರವರ ಮಾರ್ಗದರ್ಶನದಂತೆ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರರು ರವರು ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರು ಹಾಗೂ ಸಬ್ ಇನ್ಸ್‌ಪೆಕ್ಟರ್ ಜಯಪ್ಪನಾಯ್ಕ ರವರು ವಿಶೇಷ ಕಾಳಜಿಯನ್ನು ವಹಿಸಿ ಯಾವುದೇ ಪ್ರಭಾವ, ಒತ್ತಡಗಳಿಗೆ ಮಣಿಯದೆ ಇನ್ನಿಬ್ಬರು ಆರೋಪಿಗಳನ್ನು ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು.

ಘಟನೆ ನಡೆದ ರಾತ್ರಿಯೇ ಶಿವಮೊಗ್ಗದಲ್ಲಿರುವ ಟಿಪ್ಪುನಗರದಲ್ಲಿ ಆರೋಪಿಗಳ ಮನೆಗೆ ದಾಳಿ ನಡೆಸಿದಾಗ ಆರೋಪಿಗಳು ನಾಪತ್ತೆಯಾಗಿದ್ದರು. ಅಂದು ಸುಮಾರು 18 ಆರೋಪಿಗಳನ್ನು ಪತ್ತೆಹಚ್ಚಿ ತುಂಗಾನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಆರೋಪಿಗಳ ಜಾಡು ಹಿಡಿದು ಇಂದು ಅಪ್ರೂವ್ ಮತ್ತು ಅನ್ವರ್ ಅವರನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಆರೋಪಿಗಳ ಮೇಲೆ ಕೊಲೆ ಯತ್ನ ಐಪಿಸಿ 307 ಕಲಂನಂತೆ ಮತ್ತು ಕೇಂದ್ರ ಸರ್ಕಾರದ ಹೊಸ ಕಾಯಿದೆ ಗೋವುಗಳ ಕಳ್ಳಸಾಗಾಣಿಕೆ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಇಬ್ಬರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಮತ್ತು ಈ ಪ್ರಕರಣದ ಸಂಪೂರ್ಣ ತನಿಖೆ ಮತ್ತು ಆರೋಪಿಗಳ ವಶಪಡಿಸಿಕೊಳ್ಳುವಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ, ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರು ,ಮಾಳೂರು ಸಬ್ ಇನ್ಸ್‌ಪೆಕ್ಟರ್ ಜಯಪ್ಪನಾಯ್ಕ, ಎಎಸ್ಐ ರುದ್ರೇಶ್, ಎಎಸ್ಐ ಮಂಜಪ್ಪ, ಮುಖ್ಯ ಪೊಲೀಸ್ ಕಾನ್ ಸ್ಟೆಬಲ್ ರಮೇಶ್ ನಾಯಕ್, ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ, ಪುನೀತ್, ಸುರಕ್ಷಿತ, ಮಹೇಶ್, ಸುಬ್ಬಣ್ಣ, ಭರತ್, ಚೇತನ್, ಅಭಿಲಾಷ್, ವಿವೇಕ್ ಮುಂತಾದವರು ಭಾಗವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ.

ಡಿವೈಎಸ್ಪಿ ಮತ್ತು ಸಿಬ್ಬಂದಿ ವರ್ಗದವರನ್ನು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ. ಲಕ್ಷ್ಮಿ ಪ್ರಸಾದ್ ರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಹಾಗೂ ಇಂದು ಮಾಳೂರು ಠಾಣಾ ವ್ಯಾಪ್ತಿಯಲ್ಲಿ ದನ ಅಕ್ರಮ ಸಾಗಾಟ, ದನಕಳ್ಳರನ್ನು ಠಾಣೆಗೆ ಕರೆಸಿ ಪೆರೇಡ್ ಮಾಡಿ ಕಟ್ಟೆಚ್ಚರವನ್ನು ನೀಡಿ ಮುಂದಿನ ದಿನಗಳಲ್ಲಿ ದನಕಳ್ಳತನದ ಮತ್ತು ಸಾಗಾಟದ ವೃತ್ತಿಯನ್ನು ಮುಂದುವರಿಸಿದರು ಕಠಿಣ ಶಿಕ್ಷೆಯನ್ನು ಅನುಭವಿಸಬೇಕೆಂದು ಎಚ್ಚರಿಕೆಯನ್ನು ಡಿವೈಎಸ್ಪಿ ಶಾಂತವೀರ ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರು ಮತ್ತು ಜಯಪ್ಪ ನಾಯಕ ಅವರು ನೀಡಿದ್ದಾರೆಂದು ತಿಳಿದು ಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here