ನಿವೃತ್ತ ಶಿಕ್ಷಕ ಎಸ್.ಎಂ ಪುಟ್ಟಪ್ಪ ಮೇಷ್ಟ್ರು ನಿಧನ

0
1047

ಹೊಸನಗರ: ಅಲಗೇರಿಮಂಡ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಹುಕಾಲದ ಸೇವೆ ಸೇರಿದಂತೆ ಮುಗುಡ್ತಿ, ಹರತಾಳು, ಮಾರುತಿಪುರ ಶಾಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕ ಎಸ್.ಎಂ ಪುಟ್ಟಪ್ಪ (73) ಕೆಲಕಾಲದ ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಅಸುನೀಗಿದರು.

ಅವರು ಇಂದಿಗೂ ಅಪಾರವಾಗಿ ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ ನೂರಾರು ವಿದ್ಯಾರ್ಥಿಗಳ ಹಾಗೂ ಸ್ಥಳೀಯ ಜನ ಸಮುದಾಯದ ಮೆಚ್ಚಿನ ಶಿಕ್ಷಕರಾಗಿದ್ದರು. ಅವರ ಶಿಷ್ಯರು ಅನೇಕ ಗೌರವಾನ್ವಿತ ಹುದ್ದೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಭೋಜಪ್ಪ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಶ ಶೈಲಜಾ ಇವರೆಲ್ಲ ಪುಟ್ಟಪ್ಪ ಅವರ ಮೆಚ್ಚಿನ ಶಿಷ್ಯರಾಗಿದ್ದರು.

ಪತ್ನಿ ಹಾಗೂ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ.

ಇಂದು ಬೆಳಿಗ್ಗೆ ಅವರ ಸ್ವಗೃಹ ಬಟ್ಟೆಮಲ್ಲಪ್ಪದಲ್ಲಿ ಕೆಲವು ಗಂಟೆಗಳ ಅಂತಿಮ ದರ್ಶನದ ತರುವಾಯ ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರಾದ ಅಜ್ಜಂಪುರದ ಶಿವನಿಯಲ್ಲಿ ನೆರವೇರಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here