Ripponpet ರೋಟರಿ ಸಂಸ್ಥೆಯಿಂದ ರಾಷ್ಟ್ರ ನಿರ್ಮಾಣ ಪುರಸ್ಕಾರ ಪ್ರದಾನ | ಯುವ ಸಮೂಹಕ್ಕೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ; ಬಿ.ಸಿ ಗೀತಾ

0 127


ರಿಪ್ಪನ್‌ಪೇಟೆ : ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಒತ್ತಡದ ಜೀವನದಲ್ಲಿ ಬದುಕುತ್ತಿರುವ ಯುವ ಸಮೂಹಕ್ಕೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಆಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ರೋಟರಿ 31 82ರ ಜಿಲ್ಲಾ ಗೌರ್ನರ್ ಬಿ.ಸಿ ಗೀತಾ ಹೇಳಿದರು.


ಪಟ್ಟಣದ ರೋಟರಿ ಕ್ಲಬ್ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ನಿರ್ಮಾಣ ಪುರಸ್ಕಾರ ಹಾಗೂ ರೋಟರಿ ಜಿಲ್ಲಾ ಗವರ್ನರ್ ರವರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಯುವ ಸಮೂಹ ಒಳ್ಳೆಯ ಶಿಕ್ಷಣವನ್ನು ಪಡೆದಿದ್ದರೂ ಸಹ ಉತ್ತಮ ಸಂಸ್ಕಾರದ ಅರಿವಿಲ್ಲ. ಒಳ್ಳೆಯ ಸಂಸ್ಕಾರದ ಅರಿವಿದ್ದರೆ ಮಾತ್ರ ಮಾನವನ ಜೀವನದಲ್ಲಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು. ರೋಟರಿ ಒಂದು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಪ್ರಪಂಚದ 300ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ರೋಟರಿ ಸಂಸ್ಥೆಯ ಮೂಲ ಉದ್ದೇಶ ಸಮಾಜ ಸೇವೆಯಾಗಿದ್ದು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಶಿಕ್ಷಣವನ್ನು ನೀಡುವುದರ ಜೊತೆಗೆ ಮೌಲ್ಯ ದಾರಿತ ಸಂಸ್ಕಾರದ ಅರಿವನ್ನು ಮೂಡಿಸಬೇಕಾದದ್ದು ಪೋಷಕರ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಶಿಕ್ಷಕರುಗಳಿಗೆ ರಾಷ್ಟ್ರ ನಿರ್ಮಾಣ ಪುರಸ್ಕಾರವನ್ನು ನೀಡುತ್ತಿರುವುದು ಸಂತಸ ತಂದಿದೆ ಎಂದರು.


ಈ ಬಾರಿಯ ರಾಷ್ಟ್ರ ನಿರ್ಮಾಣ ಪುರಸ್ಕಾರಕ್ಕೆ ಭಾಜನರಾದ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ. ಮಂಜುನಾಥ್, ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತಶಾಸ್ತ್ರದ ಉಪನ್ಯಾಸಕ ಸತೀಶ್ ಹಾಗೂ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸುರೇಶಪ್ಪ ರವರನ್ನು ರೋಟರಿ ಸಂಸ್ಥೆಯ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನ ಅಧ್ಯಕ್ಷ ದೇವದಾಸ್ ಎಚ್ ಆಚಾರ್ಯ, ವಹಿಸಿದ್ದರು. ಅತಿಥಿಗಳಾಗಿ ರೋಟರಿ ಜಿಲ್ಲಾ 31 82ರ ಅಸಿಸ್ಟೆಂಟ್ ರವಿಕೋಟೋಜಿ, ಝೋನಲ್ ಲೆಫ್ಟಿನೆಂಟ್
ಚಂದ್ರಪ್ಪ. ಎಂ. ಬಿ.ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಹೆಚ್.ಎಂ. ಸುರೇಶ್ ಇನ್ನಿತರರಿದ್ದರು.


ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಎಂ. ಬಿ. ಲಕ್ಷ್ಮಣಗೌಡ, ಸ್ವಾಗತಿಸಿ. ಸಭಾಸ್ಟಿನ್ ನಿರೂಪಸಿ, ಕಾರ್ಯದರ್ಶಿ ರಾಮಚಂದ್ರ.ಎಂ. ವಂದಿಸಿದರು.

Leave A Reply

Your email address will not be published.

error: Content is protected !!